ಕಣ್ಣಿನ ಬಗ್ಗೆ ನಿರ್ಲಕ್ಷ್ಯ ಬೇಡ: ಶಿವಾನಂದ ಸ್ವಾಮೀಜಿ

KannadaprabhaNewsNetwork |  
Published : Jan 22, 2024, 02:15 AM IST
ಜೇವರ್ಗಿ೧ : ತಾಲೂಕಿನ ನರಿಬೋಳ ಗ್ರಾಮದಲ್ಲಿ ದಿ.ಶಿವಲಿಂಗಪ್ಪಗೌಡ ಪಾಟೀಲ ನರಿಬೋಳ ಅವರ ೧೯ನೇ ಪುಣ್ಯಸ್ಮರಣೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ನೇತ್ರಾ ಚಿಕಿತ್ಸಾ ಶಿಬಿರ ನಡೆಸಲಾಯಿತು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಇದ್ದರು.ಜೇವರ್ಗಿ೧ಅ :  ತಾಲೂಕಿನ ನರಿಬೋಳ ಗ್ರಾಮದಲ್ಲಿ ದಿ.ಶಿವಲಿಂಗಪ್ಪಗೌಡ ಪಾಟೀಲ ನರಿಬೋಳ ಅವರ ೧೯ನೇ ಪುಣ್ಯಸ್ಮರಣೆ ಅಂಗವಾಗಿ ದಿ.ಶಿವಲಿಂಗಪ್ಪಗೌಡ ಪಾಟೀಲ ನರಿಬೋಳ ಅವರ ಗದ್ದುಗೆಗೆ ಪೂಜೆ ಸಲ್ಲಿಸಿದರು. ಸೊನ್ನದ ಡಾ.ಶಿವಾನಂದ ಮಹಾಸ್ವಾಮಿಜಿ, ಜೇರಟಗಿಯ ಮಹಾಂತ ಶಿವಾಚಾರ್ಯರು, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಇದ್ದರು | Kannada Prabha

ಸಾರಾಂಶ

ಜೀವನದಲ್ಲಿ ಆಸೆ ಪಟ್ಟಿದ್ದು ನೋಡಿ ಆನಂದಿಸುವುದಕ್ಕೆ ಕಣ್ಣುಗಳು ಇರಬೇಕು. ಪ್ರತಿಯೊಬ್ಬರಿಗೂ ತಮ್ಮ ಜೀವನದ ರಕ್ಷಣೆ ಜೊತೆಗೆ ಕಣ್ಣಿನ ರಕ್ಷಣೆ ಮಾಡುವುದು ಬಹಳ ಮುಖ್ಯವಾಗಿದೆ.

ಕನ್ನಡಪ್ರಭ ವಾರ್ತೆ ಜೇವರ್ಗಿ

ಬದುಕುವುದಕ್ಕೆ ಜೀವ ಎಷ್ಟು ಮುಖ್ಯವೋ ಅಷ್ಟೆ ಮುಖ್ಯ ಕಣ್ಣುಗಳು ಕೂಡ ಮುಖ್ಯವಾಗಿದೆ. ಅದಕ್ಕಾಗಿ ಕಣ್ಣಿನ ಬಗ್ಗೆ ನಿರ್ಲಕ್ಷ್ಯ ಮಾಡುವುದು ಬೇಡ. ದಿ,ಶಿವಲಿಂಗಪ್ಪ ಪಾಟೀಲ ನರಿಬೋಳ ಅವರಂತಹ ಮಹಾನ ನಾಯಕರ ಪುಣ್ಯಸ್ಮರಣೆಯು ನೇತ್ರ ಚಿಕಿತ್ಸಾ ಶಿಬಿರ ಏರ್ಪಡಿಸಿರುವುದು, ಸ್ಪೂರ್ತಿದಾಯಕ ಕೆಲಸವೆಂದು ಸೊನ್ನವಿರಕ್ತ ಮಠದ ಪೀಠಾಧಿಪತಿ ಡಾ.ಶಿವಾನಂದ ಸ್ವಾಮೀಜಿ ಹೇಳಿದರು.

ಅವರು ಭಾನುವಾರ ತಾಲೂಕಿನ ನರಿಬೋಳ ಗ್ರಾಮದಲ್ಲಿ ದಿ.ಶಿವಲಿಂಗಪ್ಪಗೌಡ ಪಾಟೀಲ ನರಿಬೋಳ ಅವರ ೧೯ನೇ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ನೇತ್ರಾ ಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡುತ್ತ ತಾಲೂಕಿನ ಜನರ ನಾಡಿ ಮಿಡಿತ ಅರಿತು ಯಾವುದೇ ಅಧಿಕಾರವಿಲ್ಲದಿದ್ದರೂ ಹೋರಾಟದ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು, ಜೀವನದಲ್ಲಿ ಆಸೆ ಪಟ್ಟಿದ್ದು ನೋಡಿ ಆನಂದಿಸುವುದಕ್ಕೆ ಕಣ್ಣುಗಳು ಇರಬೇಕು. ಪ್ರತಿಯೊಬ್ಬರಿಗೂ ತಮ್ಮ ಜೀವನದ ರಕ್ಷಣೆ ಜೊತೆಗೆ ಕಣ್ಣಿನ ರಕ್ಷಣೆ ಮಾಡುವುದು ಬಹಳ ಮುಖ್ಯವಾಗಿದೆ ಎಂದು ಅವರು ಹೇಳಿದರು.

ದಿ.ಶಿವಲಿಂಗಪ್ಪಗೌಡ ಪಾಟೀಲ ನರಿಬೋಳ ಅವರು ದಿಟ್ಟ, ನೇರ ನಾಯಕರಗಿದ್ದವರು. ಅಂಥ ನಾಯಕರು ಹುಟ್ಟುವುದು ಬಹಳ ಕಡಿಮೆ. ದೀನದಲಿತ, ಹಿಂದುಳಿದ ವರ್ಗ, ರೈತಾಪಿ ವರ್ಗ ಸೇರಿದಂತೆ ಜನರ ಸಮಸ್ಯೆಗಳಿಗೆ ಯಾವತ್ತು ಮಿಡಿಯುತ್ತಿದ್ದರು. ಅವರ ಪುತ್ರರು ಅವರಂತೆಯೆ ಜನರ ಸೇವಾಗಾಗಿ ಶ್ರಮಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜೇರಟಗಿಯ ಶ್ರೀ ಮಹಾಂತ ಶಿವಾಚಾರ್ಯರು, ಶಖಾಪೂರಿನ ಡಾ.ಸಿದ್ಧರಾಮ ಶಿವಾಚಾರ್ಯರು, ಯಡ್ರಾಮಿಯ ಶ್ರೀಸಿದ್ದಲಿಂಗ ಮಹಾಸ್ವಾಮಿಜಿ, ಅಂಕಲಗಿಯ ಶ್ರೀ ಅಭಿನವ ಗುರುಬಸವ ಸ್ವಾಮೀಜಿ, ಕೋಳಕೂರಿನ ಶ್ರೀಕೆಂಚಬಸವ ಶಿವಾಚಾರ್ಯರು, ಕಟ್ಟಿಸಂಗಾವಿ ಶ್ರೀಬಸಯ್ಯತಾತನವರು, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ರಮೇಶಬಾಬು ವಕೀಲ, ಮಲ್ಲಿನಾಥಗೌಡ ಯಲಗೋಡ, ಸಾಯಬಣ್ಣ ದೊಡಮನಿ, ಧವiðರಾಜ ಜೋಗುರ, ಬಸವರಾಜ ಪಾಟೀಲ ಅರಳಗುಂಡಗಿ, ಬಸವರಾಜ ಮುಕ್ಕಾಣಿ, ಡಾ.ಸಿದ್ದು ಪಾಟೀಲ, ದಂಡಪ್ಪ ಸಾಹು ಕುರಳಗೇರಿ, ಬಾಲರಾಜ ಗುತ್ತೆದಾರ, ರೌಫ ಹವಾಲ್ದಾರ, ಅಂಬಣ್ಣ ಸುಬೇದಾರ, ನಿಂಗಣ್ಣ ಭಂಡಾರಿ, ಶಿವಾನಂದ ದ್ಯಾಮಗುಂಡ, ನಾಗರಾಜಗೌಡ ರೇಷ್ಮೀ, ಧೂಳೇಶ ಪಾಟೀಲ, ಶರಣಬಸಪ್ಪ ಅವರಾದ, ಅರುರಡ್ಡಿ ಶಿವಪೂರ, ಸಿದ್ದು ಅಂಗಡಿ, ಗುರಲಿಂಗಯ್ಯಸ್ವಾಮಿ ಯನಗುಂಟಿ, ಭಗವಂತ್ರಾಯ ಶಿವಣ್ಣಿ, ರಾಕೇಶ ಹರಸೂರ ಸೇರಿದಂತೆ ನರಿಬೋಳ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ