ದೇವಾಲಯದ ಮಧ್ಯದ ಜಾಗ ಪರಭಾರೆ ಮಾಡಬೇಡಿ

KannadaprabhaNewsNetwork |  
Published : Jan 18, 2025, 12:46 AM IST
ಮಧುಗಿರಿಯ ಎರೆಡು ಕಣ್ಣುಗಳಂತಿರು ಶ್ರೀಲಕ್ಷ್ಮೀವೆಂಕಟರಮಣಸ್ವಾಮಿ ಮತ್ತು ಶ್ರೀಮಲ್ಲೇಶ್ವರಸ್ವಾಮಿ ದೇವಸ್ಥಾನಗಳ ಮಧ್ಯ ಭಾಗದಲ್ಲಿರುವ ಜಾಗವನ್ನು ಯಾರಿಗೂ ಹಸ್ತಾಂತರಿಸಬಾರದು ಮತ್ತು ಖಾತೆ ಬಲಾವಯಿಸಬಾರದು ಎಂದು ಮಧುಗಿರಿಯ ನಾಗರಿಕರು ಪುರಸಭೆ ಮುಖ್ಯಾಧಿಕಾರಿ ಸುರೇಶ್‌ ಗೆ ಮನವಿ ಪತ್ರ ಸಲ್ಲಿಸಿದರು.  | Kannada Prabha

ಸಾರಾಂಶ

ಪಟ್ಟಣದ ಪುರಾಣ ಪ್ರಸಿದ್ಧ ಶ್ರೀಲಕ್ಷ್ಮೀವೆಂಕಟರಮಣಸ್ವಾಮಿ ಮತ್ತು ಶ್ರೀಮಲ್ಲೇಶ್ವರಸ್ವಾಮಿ ದೇವಸ್ಥಾನಗಳ ಮಧ್ಯ ಇರುವ ಜಾಗವನ್ನು ಬೇರೆ ಯಾವುದೇ ಧಾರ್ಮಿಕ ಸಂಸ್ಥೆಗಳಿಗೆ ಹೊಗದಂತೆ ದೇವಸ್ಥಾನದ ಮತ್ತು ಭಕ್ತಾದಿಗಳ ಆಸ್ತಿಯಾಗಿ ಉಳಿಸಬೇಕೆಂದು ಪುರಸಭೆ ಮುಖ್ಯಾಧಿಕಾರಿ ಸುರೇಶ್‌ ‍ಅವರಿಗೆ ತಾಲೂಕಿನ ಸರ್ವ ಜನಾಂಗದ ಭಕ್ತಾದಿಗಳ ಪರವಾಗಿ ಶುಕ್ರವಾರ ಮಧುಗಿರಿ ಪಟ್ಟಣದ ನಾಗರಿಕರು ಮನವಿ ಪತ್ರ ಸಲ್ಲಿಸುವ ಮೂಲಕ ಒತ್ತಾಯಿಸಿದರು.

ಕನ್ನಡಪ್ರಭವಾರ್ತೆ ಮಧುಗಿರಿ

ಪಟ್ಟಣದ ಪುರಾಣ ಪ್ರಸಿದ್ಧ ಶ್ರೀಲಕ್ಷ್ಮೀವೆಂಕಟರಮಣಸ್ವಾಮಿ ಮತ್ತು ಶ್ರೀಮಲ್ಲೇಶ್ವರಸ್ವಾಮಿ ದೇವಸ್ಥಾನಗಳ ಮಧ್ಯ

ಇರುವ ಜಾಗವನ್ನು ಬೇರೆ ಯಾವುದೇ ಧಾರ್ಮಿಕ ಸಂಸ್ಥೆಗಳಿಗೆ ಹೊಗದಂತೆ ದೇವಸ್ಥಾನದ ಮತ್ತು ಭಕ್ತಾದಿಗಳ ಆಸ್ತಿಯಾಗಿ ಉಳಿಸಬೇಕೆಂದು ಪುರಸಭೆ ಮುಖ್ಯಾಧಿಕಾರಿ ಸುರೇಶ್‌ ‍ಅವರಿಗೆ ತಾಲೂಕಿನ ಸರ್ವ ಜನಾಂಗದ ಭಕ್ತಾದಿಗಳ ಪರವಾಗಿ ಶುಕ್ರವಾರ ಮಧುಗಿರಿ ಪಟ್ಟಣದ ನಾಗರಿಕರು ಮನವಿ ಪತ್ರ ಸಲ್ಲಿಸುವ ಮೂಲಕ ಒತ್ತಾಯಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಎಂ.ವಿ.ಗೋವಿಂದರಾಜು ಮಾತನಾಡಿ, ಮಧುಗಿರಿ ನಗರದಲ್ಲಿ ಎರಡು ಕಣ್ಣುಗಳಂತಿರುವ ಐತಿಹಾಸಿಕ ದೇವಾಲಯಗಳ ಮಧ್ಯ ಭಾಗದಲ್ಲಿನ ಜಾಗವನ್ನು ಯಾವುದೇ ಧಾರ್ಮಿಕ ಸಂಸ್ಥೆಗಳಿಗೆ ಖಾತೆ ಬದಲಾವಣೆ ಮಾಡ ಬಾರದು. ಇದನ್ನು ತಡೆ ಹಿಡಿಯಬೇಕು. ಮಧುಗಿರಿ ಪಟ್ಟಣದ ಹೃದಯ ಭಾಗದಲ್ಲಿರುವ ಈ ಸ್ಥಳವು ಅತ್ಯಂತ ಪುರಾತನ ಜಾಗ. ಹಲವು ಮಾಹಿತಿಗಳ ಪ್ರಕಾರ ಪುರಾತನ ಕಾಲದಲ್ಲಿ ಸಾರ್ವಜನಿಕರು ಧಾರ್ಮಿಕ ಸಭೆ ಸಮಾರಂಭಗಳನ್ನು ಮಾಡಿಕೊಳ್ಳಲು ಛತ್ರವಾಗಿತ್ತು ಎಂದು ಹಿರಿಯ ತಲೆಮಾರನವರು ಹೇಳುತ್ತಿದ್ದರು. 800 ವರ್ಷಕ್ಕೂ ಅಧಿಕ ಇತಿಹಾಸ ಹೊಂದಿರುವ ಈ ಎರಡು ದೇವಸ್ಥಾನಗಳ ಮಧ್ಯ ಭಾಗದ ಸ್ಥಳ ವಾಸ್ತು ಶಿಲ್ಪ ಗಮನಿಸಿದಾಗ ಮುಂಭಾಗದಲ್ಲಿ ಕಲ್ಲಿನ ಕಟ್ಟಡ ಹಾಗೂ ಹಿಂಭಾಗದಲ್ಲಿ ರಕ್ಷಣಾ ಗೋಡೆ ದೇವಾಲಯಗಳಿಗೆ ಹೊಂದಿಕೊಂಡಿದೆ. ಅಂದಾಜಿನ ಪ್ರಕಾರ ಆರ್ಕಲಾಜಿಕಲ್‌ ಸರ್ವೆ ಆಫ್‌ ಇಂಡಿಯಾಕ್ಕೆ ಒಳಪಟ್ಟಿದೆ ಏನ್ನಲಾಗಿದೆ. ಆದರೂ ಈ ಜಾಗ ಉಡುಪಿ ಶ್ರೀಕೃಷ್ಣ ಮಠದ ಶ್ರೀಪೇಜಾವರ ಸ್ವಾಮಿಗಳಿಗೆ ಖಾತೆ ಬದಲಾವಣೆ ಮಾಡುವ ಮಾಹಿತಿ ಕೇಳಿ ಬಂದಿದೆ. ಯಾವುದೇ ಕಾರಣಕ್ಕೂ ಈ ದೇಗುಲಗಳ ಮಧ್ಯ ಭಾಗದ ಜಾಗವನ್ನು ಸ್ಥಳೀಯ ದೇವಸ್ಥಾನಗಳಿಗೆ ಮತ್ತು ಬರುವ ಭಕ್ತಾದಿಗಳ ಉಪಯೋಗಕ್ಕೆ ಉಳಿಸಬೇಕು ಎಂದು ಭಕ್ತರ ಪರವಾಗಿ ಗೋವಿಂದರಾಜು ಒತ್ತಾಯಿಸಿದರು.

ನವಿ ಪತ್ರವನ್ನು ಸಹಕಾರ ಸಚಿವ ಕೆ.ಎನ್‌.ರಾಜಣ್ಣ, ಎಂಎಲ್‌ಸಿ ಆರ್‌.ರಾಜೇಂದ್ರ,ತಹಸೀಲ್ದಾರ್‌ , ಎಸಿ,ಜಿಲ್ಲಾಧಿಕಾರಿಗಳು , ಕೇಂದ್ರ ಪುರಾತತ್ವ ಇಲಾಖೆಯವರಿಗೆ ಮುಖ್ಯಾಧಿಕಾರಿಗಳ ಮೂಲಕ ತಲುಪಿಸುವಂತೆ ಒತ್ತಾಯಿಸಿ ಸಾರ್ವಜನಿಕರು ಮನವಿ ಪತ್ರ ನೀಡಿದರು.

ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ,ಸದಸ್ಯರುಗಳಾದ ಮಂಜುನಾಥ್‌ ಆಚಾರ್‌, ಎಂ.ಶ್ರೀಧರ, ನಟರಾಜು, ಮಾಜಿ ಸದಸ್ಯ ಶ್ರೀನಿವಾಸ್‌ ಟಾಪಾರಿ,ಮುಖಂಡರಾದ ಮೂಡಲಗಿರೀಶ್‌, ಆನಂದಕೃಷ್ಣ,ಕಿಶೋರ್‌, ಬಾಲಾಜಿಬಾಬು, ಕಸಾಪ ಅಧ್ಯಕ್ಷೆ ಸಹನಾ ನಾಗೇಶ್‌, ವರದಾಯಿನಿ ಸೇವಾ ಟ್ರಸ್ಟ್‌ ಅಧ್ಯಕ್ಷೆ ಗಾಯಿತ್ರಿ ನಾರಾಯಣ್‌, ಸಂಸ್ಕಾರ ಭಾರತಿ ತಾಲೂಕು ಅಧ್ಯಕ್ಷೆ ಗೀತಾ ನಾಗರಾಜು, ಮಹಿಳಾ ಸಂಘಟನೆಯ ಗೀತಾಪಣೀಶ್‌,ಕವಿಯತ್ರಿ ವೀಣಾ ಶ್ರೀನಿವಾಸ್‌ , ಭಕ್ತ ಮಂಡಲಿಯ ದೋಲಿಬಾಬು, ಜಿ.ಆರ್‌.ಧನ್‌ಪಾಲ್‌, ಜಿ.ನಾರಾಯಣರಾಜು, ಬಸವರಾಜು, ರೆಡ್ಡಿ,ಪ್ರಧಾನ ಆರ್ಚಕ ನಟರಾಜು ದೀಕ್ಷಿತ್‌ ,ಅನಂತಪದ್ಮನಾಭಭಟ್ಟರು ಸೇರಿದಂತ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ