ಕನ್ನಡಪ್ರಭ ವಾರ್ತೆ ಮಂಗಳೂರು
ರೈತರು ಖಾಸಗಿ ಲೇವಾದೇವಿದಾರರಿಂದ ಅಧಿಕ ಬಡ್ಡಿದರಕ್ಕೆ ಸಾಲ ಪಡೆದು ಮರುಪಾವತಿ ಮಾಡಲಾಗದೆ ಆತ್ಮಹತ್ಯೆ ಮಾಡಿಕೊಂಡ ಬಹಳಷ್ಟು ಉದಾಹರಣೆಗಳಿವೆ. ಡಿಸೆಂಬರ್ ಅಂತ್ಯದವರೆಗಿನ ವರದಿಯ ಪ್ರಕಾರ, ರಾಜ್ಯದಲ್ಲಿ 456 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಅದರಲ್ಲಿ 354 ಮಂದಿಯ ಕುಟುಂಬಗಳಿಗೆ ಮಾತ್ರ ಪರಿಹಾರ ಸಿಕ್ಕಿದೆ. ಉಳಿದವರು ಬ್ಯಾಂಕ್‌ಗಳಿಂದ ಸಾಲ ಪಡೆದಿಲ್ಲ ಎಂಬ ಕಾರಣಕ್ಕೆ ಪರಿಹಾರವೇ ದೊರೆತಿಲ್ಲ. ಹಾಗಾಗಿ ಬ್ಯಾಂಕ್‌ಗಳು ರೈತರಿಗೆ ಆದ್ಯತೆಯ ನೆಲೆಯಲ್ಲಿ ಸಾಲ ನೀಡಬೇಕು. ಕೃಷಿ ಸಾಲದ ಅರ್ಜಿಗಳನ್ನು ತಿರಸ್ಕಾರ ಮಾಡಬೇಡಿ ಎಂದು ಕರೆ ನೀಡಿದರು.
ಜನಧನ್, ಎಪಿವೈ ಪ್ರಗತಿ ಕುಂಠಿತ:ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಪಂ ಸಿಇಒ ಡಾ.ಆನಂದ್ ಮಾತನಾಡಿ, ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳಾದ ಜನಧನ್, ಅಟಲ್ ಪಿಂಚಣಿಯಂಥ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಬ್ಯಾಂಕ್‌ಗಳ ಪ್ರಗತಿ ನಿರಾಶಾದಾಯಕವಾಗಿದೆ. ಈ ಬಗ್ಗೆ ಗಂಭೀರವಾಗಿ ಕಾರ್ಯಪ್ರವೃತ್ತವಾಗಬೇಕು. ಇಂಥ ಯೋಜನೆಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ಒದಗಿಸಿ, ಬ್ಯಾಂಕ್‌ಗಳಿಗೆ ಶಾಖಾವಾರು ನೀಡಿದ ಗುರಿಯನ್ನು ತಲುಪಲೇ ಬೇಕು ಎಂದು ತಾಕೀತು ಮಾಡಿದರು.
ಅದೇ ರೀತಿ, ಅಟಲ್ ಪಿಂಚಣಿ ಯೋಜನೆಯಡಿ ಕೇವಲ 3,90,97 ಖಾತೆಗಳನ್ನು ಜಿಲ್ಲೆಯ ಬ್ಯಾಂಕ್‌ಗಳು ತೆರೆದಿವೆ. ಬ್ಯಾಂಕ್‌ಗಳಿಗೆ ನೀಡಿದ ಗುರಿಯ ಶೇ.76ರಷ್ಟು ಮಾತ್ರ ಪ್ರಗತಿಯಾಗಿದೆ. ಜನರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯ ಕೊಡಿಸುವಲ್ಲಿ ನಿರ್ಲಕ್ಷ್ಯ ಮಾಡುವುದು ಸಲ್ಲದು ಎಂದು ಎಂದು ಡಾ.ಆನಂದ್ ಹೇಳಿದರು.
ಬೆಳೆವಿಮೆ ಮಾಹಿತಿ:
ಮೀನುಗಾರಿಕೆ ಇಲಾಖೆ ಅಧಿಕಾರಿ ದಿಲೀಪ್ ಕುಮಾರ್ ಮಾತನಾಡಿ, 2018ರಿಂದ ಮೀನು ಮಾರಾಟಕ್ಕೆ ಸಾಲ ಪಡೆದಿರುವ ಮೀನುಗಾರ ಮಹಿಳೆಯರ ಸಾಲದ ಬಡ್ಡಿಯ ಮಾಹಿತಿಯನ್ನು ಮೀನುಗಾರಿಕಾ ಇಲಾಖೆಗೆ ಸಲ್ಲಿಸಲು ಬ್ಯಾಂಕ್‌ಗಳು ವಿಫಲವಾಗಿವೆ. ಹೀಗಾಗಿ ಬಡ್ಡಿ ಮೊತ್ತವನ್ನು ಮೀನುಗಾರ ಮಹಿಳಾ ಗುಂಪುಗಳಿಗೆ ಮರುಪಾವತಿಸಲು ಸಮಸ್ಯೆಯಾಗಿದೆ ತಿಳಿಸಿದರು. ಈ ಮಾಹಿತಿ ಕೂಡಲೆ ನೀಡುವಂತೆ ಜಿಪಂ ಸಿಇಒ ಬ್ಯಾಂಕ್‌ಗಳಿಗೆ ಸೂಚಿಸಿದರು.ಬಾಕ್ಸ್
ಬ್ಯಾಂಕ್ ಶಾಖೆಗಳಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಕನ್ನಡ ಬಳಕೆ ಮಾಡುವಂತೆ ಜಿಪಂ ಸಿಇಒ ಡಾ.ಆನಂದ್ ಸೂಚಿಸಿದರು. ಕೆಲವು ಬ್ಯಾಂಕ್‌ಗಳಲ್ಲಿ ಜನರಿಗೆ ಮಾರ್ಗದರ್ಶನ ನೀಡಲು ಕನ್ನಡ ಮಾತನಾಡುವವರೇ ಇಲ್ಲ. ಇದೇ ಕಾರಣದಿಂದ ಜನರಿಗೆ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಉಪಯೋಗ ಪೂರ್ಣ ಪ್ರಮಾಣದಲ್ಲಿ ದೊರೆಯುತ್ತಿಲ್ಲ. ಕನ್ನಡ ಬಾರದೆ ಇರುವ ಬ್ಯಾಂಕ್ ಸಿಬ್ಬಂದಿ ಕನ್ನಡ ಕಲಿತು ಕನ್ನಡದಲ್ಲೇ ವ್ಯವಹರಿಸಬೇಕು. ರಾಜ್ಯದಲ್ಲೇ ಹಲವು ವರ್ಷ ಇದ್ದರೂ ಅನೇಕ ಬ್ಯಾಂಕ್ ಮ್ಯಾನೇಜರ್‌ಗಳಿಗೇ ಕನ್ನಡ ಬರಲ್ಲ. ಇವರು ಕೂಡ ಕಡ್ಡಾಯವಾಗಿ ಕನ್ನಡ ಕಲಿಯಬೇಕು ಎಂದು ಸೂಚಿಸಿದರು.