ಕೆಲಸದ ಒತ್ತಡವನ್ನು ಮನೆಗೆ ಒಯ್ಯಬೇಡಿ

KannadaprabhaNewsNetwork |  
Published : Mar 12, 2025, 12:46 AM IST
11ಎಚ್ಎಸ್ಎನ್9 : ಹೊಳೆನರಸೀಪುರದ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಲಯ ಹಾಗೂ ತಾ. ವಕೀಲರ ಸಂಘ ಆಯೋಜನೆ ಮಾಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಮಹಾಂತೇಶ್ ಮುನವಳ್ಳಿಮಠ್ ಹಾಗೂ ಸಿವಿಲ್ ನ್ಯಾಯಾಧೀಶರಾದ ಚೇತನಾ ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಮಹಿಳೆಗೆ ಮನೆ ಹಾಗೂ ಕೆಲಸ ಮಾಡುವ ಸ್ಥಳಗಳಲ್ಲಿ ಜವಾಬ್ದಾರಿ ಹೆಚ್ಚಿರುತ್ತದೆ. ಆ ಸಂದರ್ಭದಲ್ಲಿ ತೊಂದರೆಗಳು ಅಥವಾ ಒತ್ತಡವನ್ನು ಕೊಂಡೊಯ್ಯದೇ, ಅದೇ ಸ್ಥಳಗಳಲ್ಲಿ ಬಿಟ್ಟು ಮುನ್ನಡೆಯುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಮಹಾಂತೇಶ್ ಮುನವಳ್ಳಿಮಠ್ ಅಭಿಪ್ರಾಯಪಟ್ಟರು. ಪ್ರತಿದಿನ ಮಹಿಳೆ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಾರೆ, ಈ ರೀತಿಯ ಕಾರ್ಯಕ್ರಮಗಳು ಒಂದು ಸಮ್ಮಿಲನಕ್ಕೆ ಸಾಕ್ಷಿಯಾಗುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಮಹಿಳೆಗೆ ಮನೆ ಹಾಗೂ ಕೆಲಸ ಮಾಡುವ ಸ್ಥಳಗಳಲ್ಲಿ ಜವಾಬ್ದಾರಿ ಹೆಚ್ಚಿರುತ್ತದೆ. ಆ ಸಂದರ್ಭದಲ್ಲಿ ತೊಂದರೆಗಳು ಅಥವಾ ಒತ್ತಡವನ್ನು ಕೊಂಡೊಯ್ಯದೇ, ಅದೇ ಸ್ಥಳಗಳಲ್ಲಿ ಬಿಟ್ಟು ಮುನ್ನಡೆಯುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಮಹಾಂತೇಶ್ ಮುನವಳ್ಳಿಮಠ್ ಅಭಿಪ್ರಾಯಪಟ್ಟರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಲಯ ಹಾಗೂ ತಾಲೂಕು ವಕೀಲರ ಸಂಘ ಆಯೋಜನೆ ಮಾಡಿದ್ದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಪ್ರತಿದಿನ ಮಹಿಳೆ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಾರೆ, ಈ ರೀತಿಯ ಕಾರ್ಯಕ್ರಮಗಳು ಒಂದು ಸಮ್ಮಿಲನಕ್ಕೆ ಸಾಕ್ಷಿಯಾಗುತ್ತದೆ ಎಂದರು.

ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಕುಸುಮ ಎಂ. ಅವರು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಹೆಣ್ಣು ಮಗು ಜನಿಸಿದಾಗ ಸಂಭ್ರಮಿಸುವ ಮತ್ತು ಹೆಣ್ಣು ಮಗು ಬೇಕು ಎಂದೇ ಹೇಳುವ ಜನರನ್ನು ಕಂಡಿದ್ದೇವೆ ಮತ್ತು ಹೆಣ್ಣು ಮಗುವಿನ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತನ್ನು ನೀಡಲಾಗುತ್ತಿದೆ. ಈ ರೀತಿಯ ಪ್ರಗತಿಗೆ ಪುರುಷರು ನೀಡುತ್ತಿರುವ ಬೆಂಬಲ ಕಾರಣವಿದೆ ಜತೆಗೆ ಇನ್ನೂ ಪ್ರಗತಿ ಸಾಧಿಸಬೇಕೆದೆ. ಮುಖ್ಯವಾಗಿ ಮಹಿಳೆ ಮಹಿಳೆಯರಲ್ಲಿ ಭಿನ್ನಾಭಿಪ್ರಾಯ ಅಥವಾ ಮೇಲು ಕೀಳು ಎಂಬ ತಾರತಮ್ಯ ಹೋಗಲಾಡಿಸಿ, ಎಲ್ಲ ಮಹಿಳೆಯರು ಸಮಾನರು ಎಂಬ ಮನಸ್ಥಿತಿಯಲ್ಲಿ ಸಾಗಬೇಕಿದೆ. ನ್ಯಾಯದೇವತೆ ಕಣ್ಣಿಗೆ ಕಟ್ಟಿರುವ ಬಟ್ಟೆಯನ್ನು ತೆಗೆದು ಎಲ್ಲರ ಪರಿಚಯವಿದೆ ಮತ್ತು ತಾರತಮ್ಯ ಮಾಡದೇ ನ್ಯಾಯ ಒದಗಿಸುವೆ ಎಂಬ ಮನೋಭಾವನೆ ಬೇಕಿದೆ ಎಂದು ತಿಳಿಸಿ, ಸುದೀರ್ಘವಾಗಿ ಮಾತನಾಡಿದರು. ವಕೀಲರಾದ ಸಂಗೀತ ಪ್ರಾರ್ಥಿಸಿದರು, ಕೃಷ್ಣಮೂರ್ತಿ ಸ್ವಾಗತಿಸಿದರು, ಶ್ವೇತ ನಿರೂಪಿಸಿದರು.

ಸಿವಿಲ್ ನ್ಯಾಯಾಧೀಶರಾದ ಚೇತನಾ, ತಾ. ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಸತೀಶ್, ಜಂಟಿ ಕಾರ್ಯದರ್ಶಿ ಮೈತ್ರಿ, ಹಿರಿಯ ವಕೀಲರಾದ ರಾಮಪ್ರಸನ್ನ, ಪುರುಷೋತಮ್, ರವೀಶ್, ಅರುಣ್ ಕುಮಾರ್, ಸಿ.ಎಂ.ಅಶೋಕ್, ಭಾನು ಪ್ರಕಾಶ್, ಕೆ.ಎಸ್.ಪ್ರಕಾಶ್, ಸುನೀಲ್, ರಾಜಶೇಖರ್, ಜಯಪ್ರಕಾಶ್, ರಾಮಪ್ರಸಾದ್, ಸುನೀಲ್, ಶಿವಕುಮಾರ್, ಮಂಜುನಾಥ್, ನವೀನ್, ಶಿವಣ್ಣ, ಲಾವಣ್ಯ, ಆಶಾಕುಮಾರಿ, ಆಶಾರಾಣಿ, ರಾಣಿ, ಜ್ಯೋತಿ, ಅನುಷಾ, ಚಂದ್ರಶೇಖರ್, ರಾಘವೇಂದ್ರ, ಪ್ರವೀಣ್, ಪುನೀತ್, ಪ್ರಶಾಂತ್, ಕೃಷ್ಣೇಗೌಡ, ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ