ತಾಲೂಕಿನ ಕೆಲ ಬ್ಯಾಂಕ್ಗಳು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಹಣವನ್ನು ಅವರವರ ಸಾಲದ ಖಾತೆಗೆ ಹೊಂದಾಣಿಕೆ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಹಣವನ್ನು ಸಾಲ ಮರುಪಾವತಿಗೆ ಕಡಿತಗೊಳಿಸಬಾರದು ಎಂದು ಸರ್ಕಾರದ ಆದೇಶವಿದೆ. ಹಾಗೇನಾದರೂ ಸಾಲಕ್ಕೆ ಹೊಂದಾಣಿಕೆ ಮಾಡಿದರೆ ಆಯಾ ಬ್ಯಾಂಕ್ಗಳಿಗೆ ನೋಟಿಸ್ ನೀಡಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಸಿಡಿಪಿಒ ಅವರಿಗೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಖಾನಾಪುರ
ತಾಲೂಕಿನ ಕೆಲ ಬ್ಯಾಂಕ್ಗಳು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಹಣವನ್ನು ಅವರವರ ಸಾಲದ ಖಾತೆಗೆ ಹೊಂದಾಣಿಕೆ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಹಣವನ್ನು ಸಾಲ ಮರುಪಾವತಿಗೆ ಕಡಿತಗೊಳಿಸಬಾರದು ಎಂದು ಸರ್ಕಾರದ ಆದೇಶವಿದೆ. ಹಾಗೇನಾದರೂ ಸಾಲಕ್ಕೆ ಹೊಂದಾಣಿಕೆ ಮಾಡಿದರೆ ಆಯಾ ಬ್ಯಾಂಕ್ಗಳಿಗೆ ನೋಟಿಸ್ ನೀಡಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಸಿಡಿಪಿಒ ಅವರಿಗೆ ಸೂಚಿಸಿದರು.ಪಟ್ಟಣದ ತಾಲೂಕು ಪಂಚಾಯತಿ ಸಭಾಗೃಹದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕುಮಟ್ಟದ ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಖಾನಾಪುರ ಪಟ್ಟಣದ ಹಳೆಯ ಬಸ್ ನಿಲ್ದಾಣಕ್ಕೆ ಬಸ್ಗಳು ಬರುತ್ತಿಲ್ಲ. ಪಟ್ಟಣದ ಮೂಲಕ ಸಂಚರಿಸುವ ಎಲ್ಲ ಬಸ್ಗಳನ್ನು ಹಳೆಯ ಬಸ್ ನಿಲ್ದಾಣದ ಮೂಲಕ ಸಂಚರಿಸುವಂತೆ ಆದೇಶಿಸಬೇಕು. ಕರಂಬಳ ಬಳಿಯ ಗೋವಾ ಕ್ರಾಸ್ನಲ್ಲಿ ಕಂಟ್ರೋಲರ್ ನೇಮಿಸಿ ಎಲ್ಲ ಬಸ್ಗಳು ಹಳೆಯ ಬಸ್ ನಿಲ್ದಾಣದ ಮೂಲಕ ಸಂಚರಿಸುವ ಬಗ್ಗೆ ಗಮನಹರಿಸಬೇಕು ಎಂದು ವಾಯುವ್ಯ ಸಾರಿಗೆ ಸಂಸ್ಥೆಗೆ ಸೂಚಿಸಿದರು.ಅನುಷ್ಠಾನ ಸಮಿತಿ ಸದಸ್ಯ ಪ್ರಕಾಶ ಮಾದಾರ ಮಾತನಾಡಿ, ತಾಲೂಕಿನ ಗರ್ಲಗುಂಜಿ ಗ್ರಾಮದ ವಿಜಯಾ ಪುಂಡಲೀಕ ಪಾಟೀಲ ಎಂಬ ಮಹಿಳೆ ಜೀವಂತವಾಗಿದ್ದರೂ, ಆಹಾರ ಇಲಾಖೆಯ ಅಧಿಕಾರಿಗಳು ಅವರನ್ನು ಪಡಿತರ ಚೀಟಿಯಲ್ಲಿ ಮೃತಪಟ್ಟಿದ್ದಾರೆ ಎಂದು ದಾಖಲಿಸಿ ಚೀಟಿಯಿಂದ ಅವರ ಹೆಸರನ್ನು ತೆಗೆದುಹಾಕಿದ್ದಾರೆ. ಹೀಗಾಗಿ, ಸಭೆಯ ಮುಂದೆ ಖುದ್ದು ಮಹಿಳೆಯನ್ನು ಹಾಜರುಪಡಿಸಲಾಗಿದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಆಹಾರ ನಿರೀಕ್ಷಕರು ಸಮರ್ಪಕ ಉತ್ತರ ನೀಡಬೇಕು ಎಂದು ಕೋರಿದರು. ಈ ಪ್ರಮಾದದ ಕುರಿತು ಅಧಿಕಾರಿಗಳಿಂದ ಸರಿಯಾದ ಸ್ಪಂದನೆ ದೊರೆಯದ ಕಾರಣ ಸಂತ್ರಸ್ತ ಮಹಿಳೆಯ ಹೆಸರನ್ನು ಮತ್ತೆ ಪಡಿತರ ಚೀಟಿಯಲ್ಲಿ ಸೇರಿಸಿ ಅವರಿಗೆ ಪಡಿತರ ಚೀಟಿ ನೀಡುವಂತೆ ತಾಪಂ ಇಒ ಅವರನ್ನು ಆಗ್ರಹಿಸಿದರು.ಉಳಿದಂತೆ ಸಭೆಯಲ್ಲಿ ಗೃಹಲಕ್ಷ್ಮಿ, ಗೃಹಜ್ಯೋತಿ ಮತ್ತು ಶಕ್ತಿ ಯೋಜನೆಗಳ ಅನುಷ್ಠಾನದ ಬಗ್ಗೆ ವಿವರವಾಗಿ ಚರ್ಚಿಸಲಾಯಿತು. ಯುವನಿಧಿ ಯೋಜನೆಯ ಮಾಹಿತಿ ನೀಡುವ ಅಧಿಕಾರಿಗಳು ಸಭೆಗೆ ಗೈರುಹಾಜರಿದ್ದುದನ್ನು ಸದಸ್ಯರು ಖಂಡಿಸಿದರು. ಸಭೆಯಲ್ಲಿ ತಾಪಂ ಇಒ ರಮೇಶ ಮೇತ್ರಿ, ಸಮಿತಿಯ ಸದಸ್ಯರಾದ ಬಾಬು ಹತ್ತರಾವಾಡ, ರುದ್ರಪ್ಪ ಪಾಟೀಲ, ಗೋವಿಂದ ಪಾಟೀಲ, ಪ್ರಿಯಾಂಕಾ ಗಾಂವಕರ, ವಿವೇಕ ತಡಕೋಡ, ಜಗದೀಶ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.