ಕನ್ನಡಪ್ರಭ ವಾರ್ತೆ ಸಿರವಾರ
ಸುದೀರ್ಘ ವರ್ಷಗಳ ನಂತರ ಶ್ರೇಷ್ಠ ಪ್ರಧಾನಿಯನ್ನು ಕಂಡ ಭಾರತೀಯರೆ ಭಾಗ್ಯಶಾಲಿಗಳು. ಇಂತಹ ಸೇವಕನನ್ನು ಬೆಂಬಲಿಸದಿದ್ದರೆ ನಮ್ಮ ಅವನತಿಗೆ ನಾವೇ ಕಾರಣರಾಗುತ್ತೀವಿ ಎಂದು ರಾಷ್ಟ್ರೀಯವಾದಿ ಚಿಂತಕ, ಯುವಾ ಬ್ರಿಗೇಡ್ ಸಂಸ್ಥಾಪಕ ನಮೋ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.ಪಟ್ಟಣದಲ್ಲಿ ನಮೋ ಬ್ರಿಗೇಡ್ ಸಂಘಟನೆಯ ವತಿಯಿಂದ ‘ನಮೋ ಭಾರತ’ ‘ಈಗ ಶುರುವಾಗಿದೆ ಭಾರತದ ಕಾಲ’ ಎಂಬ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಒಂದೊಂದು ಟೀಕೆಗೂ ಮೋದಿಯವರ ಸಾಧನೆಗಳ ಉತ್ತರ ನೀಡಿದರು.
ವಿದೇಶಗಳೊಂದಿಗೆ ನಿಕಟವಾದ ಸ್ನೇಹ ಸಂಬಂಧ, ಆರ್ಥಿಕ ಒಪ್ಪಂದಗಳು, ಸ್ವದೇಶಿ ಉತ್ಪಾದನಾ ಕ್ಷೇತ್ರಕ್ಕೆ ಉತ್ತೇಜನ, ಸಂಕಷ್ಟದ ಸಮಯದಲ್ಲಿ ಭಾರತೀಯರ ರಕ್ಷಣೆ, ದೇಶದ ಪ್ರಜೆಗಳಿಗೆ ಡಿಜಿಟಲ್ ಯೋಜನೆಗಳ ಪರಿಚಯ, ಅಂಬೇಡ್ಕರ್ ಅವರ ಸ್ಮರಣಾರ್ಥ ಪಂಚತೀರ್ಥಗಳ ಅಭಿವೃದ್ಧಿ, ಗ್ರಾಮೀಣರೂ ಬ್ಯಾಂಕಿನ ವ್ಯವಹಾರ ಮಾಡಲು ಪ್ರೇರಣೆ, ಸೈನಿಕರಿಗೆ ಆನೆಬಲ ತುಂಬಿದ್ದು, ಸ್ಮಾರಕ ನಿರ್ಮಿಸಿ ಆತ್ಮಸ್ಥೈರ್ಯ ಹೆಚ್ಚಿಸಿದ್ದಾರೆ ಎಂದರು.ದೇಶದ ಅತ್ಯುನ್ನತ ಪ್ರಗತಿ ಯೋಜನೆಯ ಅನುಷ್ಠಾನಕ್ಕೆ ಪಣ, ಯುವಕರ ಕ್ರೀಡಾ ಉತ್ಸಾಹಕ್ಕೆ ನೀರೆರೆದು ಪ್ರೋತ್ಸಾಹ, ಮಹಿಳೆಯರಿಗೆ ಉಜ್ವಲ ಯೋಜನೆ ಮೂಲಕ ಸ್ವಾವಲಂಬಿ ಜೀವನಕ್ಕೆ ಸಹಕಾರ, ಯುವಕರಿಗೆ ಮುದ್ರಾ ಯೋಜನೆ, ಮತ್ತು 500 ವರ್ಷಗಳ ಸುದೀರ್ಘ ಸಂಘರ್ಷ ದ ಮಧ್ಯೆ ಯಶಸ್ವಿಯಾಗಿ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದ್ದು, ಕಾಶೀ, ಕೇದಾರ, ಪುರಿ ಸೇರಿದಂತೆ ಪ್ರಮುಖ ಧಾರ್ಮಿಕ ಕೇಂದ್ರ ಗಳ ಜೀರ್ಣೋದ್ಧಾರ ಕಾರ್ಯ4 ಕಲಹನೀಡಿದನು ಪತನ, ಹೀಗೆ ಮೋದೀಜಿಯವರ ಸಾಧನೆಗಳ ಪಟ್ಟಿಯನ್ನು ಎಲ್‌ಸಿಡಿ ಪರದೆಯ ಮೂಲಕ ಜನರ ಮುಂದೆ ಬಿಚ್ಚಿಡುತ್ತಾ ಹೋದರು.
ಕಿಕ್ಕಿರಿದು ಸೇರಿದ್ದ ಜನಸ್ತೋಮ ಸೂಲಿಬೆಲೆ ಅವರ ಭಾಷಣವನ್ನು ಮೂಕವಿಸ್ಮಿತರಾಗಿ ಆಲಿಸುತ್ತಿದ್ದರು. ದೇಶದ ಪ್ರಧಾನಿಯೊಬ್ಬರ ಬಗ್ಗೆ ಇಷ್ಟೊಂದು ಮೆಚ್ಚುಗೆ ಮಾತುಗಳು ಕೇಳಿಬರುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ. ತನ್ನನ್ನು ತಾನು ಸೇವಕ ಎಂದು ಹೇಳಿಕೊಳ್ಳುತ್ತಾ ಯಾವ ಟೀಕೆಗಳಿಗೂ ಜಗ್ಗದೆ, ಹೊಗಳಿಕೆ ಗಳಿಗೆ ಹಿಗ್ಗದೆ ದಿನದ 18 ತಾಸು ಕೆಲಸ ಮಾಡುವ ಇಂತಹ ಅತ್ಯುತ್ತಮ ಪ್ರಧಾನಿಯವರನ್ನು ಕಳೆದುಕೊಂಡರೆ ನಮ್ಮ ವಿನಾಶಕ್ಕೆ ನಾವೇ ನೀರೆರೆದು ಪೋಷಿಸಿದಂತೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜೆ.ಶಿವರಾಮರಡ್ಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಜೆ.ಶಿವರಾಮರೆಡ್ಡಿಗೌಡ ವಹಿಸಿದ್ದರು.
ನಮೋ ಬಿಗ್ರೇಡ್ ಜಿಲ್ಲಾ ಸಂಚಾಲಕ ಎಚ್.ವಿ.ಪವಾರ್, ತಾಲೂಕು ಸಂಚಾಲಕ ಪ್ರಕಾಶ ರೆಡ್ಡಿ, ಮಾಜಿ ಸಂಸದ ಬಿ.ವಿ ನಾಯಕ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಹಾಗು ರೈತ ಮುಖಂಡ ಜೆ.ಶರಣಪ್ಪಗೌಡ, ಸೇರಿದಂತೆ ಅನೇಕ ಮುಖಂಡರು, ಮಹಿಳೆಯರು ಹಾಗು ಯುವಕರು ಸೇರಿದಂತೆ ಸಾವಿರಾರು ಭಾಗವಹಿಸಿದ್ದರು.18ಕೆಪಿಎಸ್ಡಬ್ಲ್ಯೂಆರ್01
ಸಿರವಾರದಲ್ಲಿ ನಡೆದ ನಮೋ ಭಾರತ ಕಾರ್ಯಕ್ರಮವನ್ನು ನಮೋ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆಯವರು ಭಾರತ ಮಾತೆ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿದರು.