ಜನರ ಕೆಲಸ ಮಾಡಿ ಇಲ್ಲ ಸಸ್ಪೆಂಡ್ ಆಗಲು ಸಿದ್ಧರಾಗಿ: ಜೆ.ಟಿ.ಪಾಟೀಲ

KannadaprabhaNewsNetwork |  
Published : Nov 30, 2026, 04:00 AM IST
ಕಲಾದಗಿ | Kannada Prabha

ಸಾರಾಂಶ

ಕಲಾದಗಿಯಲ್ಲಿ ನಡೆದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶ ಪ್ರತಿಗಳನ್ನು ಶಾಶಕ ಜೆ.ಟಿ. ಪಾಟೀಲರು ಪಲಾನುಭವಿಗಳಿಗೆ ವಿತರಿಸಿದರು.

ಕನ್ನಡಪ್ರಭ ವಾರ್ತೆ ಕಮತಗಿ

ತಾಲೂಕು ಮಟ್ಟದ ಅಧಿಕಾರಿಗಳು ನೀವೂ ಸರಿಯಾಗಿ ಕೆಲಸ ಮಾಡದೆ, ಕೆಳಗಿನವರಿಂದಲೂ ಸರಿಯಾಗಿ ಕೆಲಸ ಮಾಡಿಸಿಕೊಳ್ಳಲು ಬಾರದಿದ್ದರೆ ನೀವು ಆ ಸ್ಥಾನದಲ್ಲಿ ಇದ್ದು ಏನು ಪ್ರಯೋಜನ, ಜನರು ತಮ್ಮ ಸಮಸ್ಯೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿ ಹಲವು ತಿಂಗಳು ಕಳೆದರೂ ಪರಿಹಾರ ದೊರೆತಿಲ್ಲವೆಂದರೆ ಏನು ಅರ್ಥ, ಕಾರ್ಯಕ್ರಮಕ್ಕೆ ಗೈರಾದ ಹಲವು ಇಲಾಖಾ ತಾಲೂಕು ಮಟ್ಟದ ಅಧಿಕಾರಿಗಳಿಗೆ ನೋಟೀಸ್ ನೀಡಲು ಹೇಳಿ ಹಟ್ಟಿ ಚಿನ್ನದ ಗಣಿ ಅಧ್ಯಕ್ಷ, ಶಾಸಕ ಜೆ.ಟಿ.ಪಾಟೀಲ ಚಾಟಿ ಬೀಸಿದರು.

ದೇವನಾಳ ಗ್ರಾಮದಲ್ಲಿ ನಡೆದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದರೆ ಜನರು ಕಚೇರಿಗಳಿಗೆ ಅಲೆದಾಡುವುದು ತಪ್ಪುತ್ತದೆ, ಈ ಎಲ್ಲಾ ಸಮಸ್ಯೆಯನ್ನು ಗಮನಸಿಯೇ ಸರ್ಕಾರ ಪ್ರಜಾಸೇವಾ ಇಲಾಖೆ ಮಾಡಿ ಪ್ರಜಾಸೇವಾ ಆಂದೋಲನ ಕಾರ್ಯಕ್ರಮ ಆಯೋಜಿಸಿ ಜನರ ಸಮಸ್ಯೆ ಆಲಿಸಿ ಅವುಗಳನ್ನು ಸ್ಥಳದಲ್ಲಿಯೇ ಸಾಧ್ಯವಾದವುಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಇಲ್ಲವೇ 21 ದಿನದೊಳಗೆ ಇತ್ಯರ್ಥಕ್ಕೆ ಗಡುವು ನೀಡಲಾಗುವುದು, ಪರಿಹಾರ ಆಗಲು ಸಾಧ್ಯವಾಗದಿದ್ದರೆ ಹಿಂಬರಹ ಬರೆದುಕೊಡಲು ಆದೇಶಿಸಿದೆ. ಎಲ್ಲಾ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ 10 ಕುರ್ಚಿ ಹಾಕಿ. ಜನರು ಸಮಸ್ಯೆ ಹೇಳಲು ಬಂದಾಗ ಅವರಿಗೆ ಮೊದಲು ಕುಳಿತುಕೊಳ್ಳಲು ಹೇಳಿ ಅವರ ಸಮಸ್ಯೆ ಆಲಿಸಿ ಪರಿಹರಿಸಿ, ಕಚೇರಿಯಲ್ಲಿ ನಿಮ್ಮ ಹೆಸರು ಹುದ್ದೆ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಬರೆಸಿ, ಬೆಳಗ್ಗೆ 10.30ರಿಂದ ಸಂಜೆ 5 ಗಂಟೆವರೆಗೂ ಯಾರೇ ಕರೆ ಮಾಡಿದರೂ ಅವರ ಕರೆ ಸ್ವೀಕರಿಸಿ ಸಮಸ್ಯೆ ಕೇಳಿ, ಯಾರಾದರೂ ಅಧಿಕಾರಿಗಳು ಕರೆ ಸ್ವೀಕರಿಸದಿದ್ದರೆ, ನಂತರ ಮರಳಿ ಕರೆ ಮಾಡಿ ಸಮಸ್ಯೆ ಆಲಿಸದಿದ್ದರೆ ಅಂತಹ ಅಧಿಕಾರಯ ಬಗ್ಗೆ ನನಗೆ ದೂರು ಸಲ್ಲಿಸಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಲು ಇಲಾಖಾ ಕಾರ್ಯದರ್ಶಿಗೆ ಪತ್ರ ಬರೆಯುವೆ ಎಂದು ಅಧಿಕಾರಿಗಳ ವಿರುದ್ಧ ಗುಡುಗಿದರು.

ಪ್ರಜಾಸೇವಾ ಆಮದೋಲ ಕಾರ್ಯಕ್ರಮದಲ್ಲಿ ದೇವನಾಳ ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರಿಂದ ಒಟ್ಟು 139 ಅರ್ಜಿಗಳು ಸಲ್ಲಿಕೆಯಾಗಿದ್ದವು, ಕಂದಾಯ ಇಲಾಖೆಯ 21, ಆಹಾರ ಇಲಾಖೆಯ 11, ಸಮಾಜ ಕಲ್ಯಾಣ ಇಲಾಕೆಯ 1, ಕೃಷ್ಣಾ ಮೇಲ್ದಂಡೆ ಯೋಜನೆ 3, ಕನ್ನಡ ಮತ್ತು ಸಂಸ್ಕತಿ ಇಲಾಖೆ 1, ಕ್ರೀಡಾ ಇಲಾಖೆ 1, ಗೃಹ ಲಕ್ಷ್ಮೀ ಯೋಜನೆ 1, ಎಡಿಎಲ್ ಆರ್ 3, ಆರೋಗ್ಯ 1, ಕೃಷಿ 1, ಶಿಕ್ಷಣ 1, ಸಾರಿಗೆ 1, ಪಂಚಾಯತ್ ರಾಜ್ 93, ಒಟ್ಟು 139ರಲ್ಲಿ 49 ಅರ್ಜಿಗಳಿಗೆ ಶಾಸಕರ ಮುಂದೆಯೇ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಯಿತು. ವಿವಿಧ ಪಿಂಚಣಿ ಮಂಜೂರಾತಿ ಆದೇಶ ಪ್ರತಿಗಳನ್ನು ಶಾಶಕರು ಪಲಾನುಭವಿಗಳಿಗೆ ವಿತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಸ್ತೇಜನಗೊಂಡ ಗ್ರಾಮೀಣ ಗ್ರಂಥಾಲಯಗಳು !
ಪ್ರತಿಯೊಬ್ಬ ಕನ್ನಡಿಗ ನಾಡಿನ ಕಾವಲುಗಾರನಾಗಬೇಕಿದೆ: ಚಲಪತಿ ಗೌಡ