ಶಾಸಕ ಅಶೋಕ ರೈ ಮಾದರಿ ಶಾಸಕ : ಶಿವಪ್ರಸಾದ್

KannadaprabhaNewsNetwork |  
Published : Nov 30, 2026, 04:00 AM IST
ಪೆರ್ನೆಯಲ್ಲಿ ಬ್ಲಾಕ್ ಕಾಂಗ್ರೇಸ್ ಆಯೋಜಿಸಿದ್ದ ಬಿಜೆಪಿಯ ಸುಳ್ಳಿನ ಹೆಜ್ಜೆಗೆ ಅಭಿವೃದ್ಧಿಯ ಹೆಜ್ಜೆ  ಎಂಬ ಅಭಿಯಾನವನ್ನು ಉದ್ದೇಶಿಸಿ  | Kannada Prabha

ಸಾರಾಂಶ

ತನ್ನ ವಿಧಾನ ಸಭಾ ಕ್ಷೇತ್ರವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಮೂಲಭೂತ ಸೌರ‍್ಯಗಳಾದ ರಸ್ತೆ, ನೀರು, ದಾರಿದೀಪಕ್ಕೆ ಆದ್ಯತೆ ನೀಡುವ ಜೊತೆಗೆ ಜಿಲ್ಲೆಯ ಜನತೆಯ ಕನಸಾಗಿರುವ ಸರಕಾರಿ ಮೆಡಿಕಲ್ ಕಾಲೇಜನ್ನು ಪುತ್ತೂರಿಗೆ ತರುವಲ್ಲಿ ಅವಿರತ ಶ್ರಮಿಸಿ ಯಶಸ್ವಿಯಾದ ಪುತ್ತೂರು ಶಾಸಕ ಅಶೋಕ ರೈ ಕೋಡಿಂಬಾಡಿ ರವರು ಮಾದರಿ ಶಾಸಕರೆನಿಸಿಕೊಂಡಿದ್ದಾರೆಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ‍್ಯದರ್ಶಿ ಶಿವಪ್ರಸಾದ್ ಹೇಳಿದರು.

ಉಪ್ಪಿನಂಗಡಿ : ತನ್ನ ವಿಧಾನ ಸಭಾ ಕ್ಷೇತ್ರವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಮೂಲಭೂತ ಸೌರ‍್ಯಗಳಾದ ರಸ್ತೆ, ನೀರು, ದಾರಿದೀಪಕ್ಕೆ ಆದ್ಯತೆ ನೀಡುವ ಜೊತೆಗೆ ಜಿಲ್ಲೆಯ ಜನತೆಯ ಕನಸಾಗಿರುವ ಸರಕಾರಿ ಮೆಡಿಕಲ್ ಕಾಲೇಜನ್ನು ಪುತ್ತೂರಿಗೆ ತರುವಲ್ಲಿ ಅವಿರತ ಶ್ರಮಿಸಿ ಯಶಸ್ವಿಯಾದ ಪುತ್ತೂರು ಶಾಸಕ ಅಶೋಕ ರೈ ಕೋಡಿಂಬಾಡಿ ರವರು ಮಾದರಿ ಶಾಸಕರೆನಿಸಿಕೊಂಡಿದ್ದಾರೆಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ‍್ಯದರ್ಶಿ ಶಿವಪ್ರಸಾದ್ ಹೇಳಿದರು. ಅವರು ಪೆರ್ನೆಯಲ್ಲಿ ಬ್ಲಾಕ್ ಕಾಂಗ್ರೇಸ್ ಆಯೋಜಿಸಿದ್ದ ಬಿಜೆಪಿಯ ಸುಳ್ಳಿನ ಹೆಜ್ಜೆಗೆ ಅಭಿವೃದ್ಧಿಯ ಹೆಜ್ಜೆ ಎಂಬ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದರು.ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಯಂ.ಎಸ್.ಮಹಮ್ಮದ್ ರಾಜ್ಯದಲ್ಲಿ ಬೆಲೆ ಏರಿಕೆಯಾಗಿದೆ ಎಂಬ ಹಣೆಪಟ್ಟಿಯನ್ನು ಕಾಂಗ್ರೇಸ್‌ಗೆ ಕಟ್ಟುವ ಮುನ್ನ ಪೆಟ್ರೋಲ್ ಡೀಸೆಲ್ ದರ ಕೇಂದ್ರ ಎಷ್ಟು ಏರಿಸಿದೆ ಎಂದು ವಿಮರ್ಶೆ ನಡೆಸಲಿ ವ್ಯರ್ಥ ಕಾಂಗ್ರೇಸ್ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಅವರು ಹೇಳಿದರು.ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ , ಮಾಜಿ ಜಿ.ಪಂ ಸದಸ್ಯ ತನಿಯಪ್ಪ ಪೂಜಾರಿ, ಪಾರುಕ್ ಪೆರ್ನೆ, ಪದ್ಮನಾಭ ಪೂಜಾರಿ, ಉಮಾನಾಥ್ ಶೆಟ್ಟಿ ಮಾತನಾಡಿ ಬಿಜೆಪಿ ವಿರುದ್ದ ಟೀಕಾಪ್ರಹಾರ ಮಾಡಿದರು.ವೇದಿಕೆಯಲ್ಲಿ ಕಾಂಗ್ರೇಸ್‌ನ ಪ್ರಮುಖರಾದ ಮುರಳಿಧರ ರೈ, ನಝಿರ್ ಮಠ, ಸುನಿಲ್ ಕೊಪ್ಪಳ, ನೆಲ್ಸನ್ ಪಿಂಟೋ, ವಿಜಯ ಮತ್ತಿತರರು ಉಪಸ್ಥಿತರಿದ್ದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು ಟಿ ಮಹಮ್ಮದ್ ತೌಸಿಫ್ ಸ್ವಾಗತಿಸಿ, ಬೂತ್ ಅಧ್ಯಕ್ಷ ಅಬ್ದುಲ್ ತೌಸಿಫ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಸ್ತೇಜನಗೊಂಡ ಗ್ರಾಮೀಣ ಗ್ರಂಥಾಲಯಗಳು !
ಪ್ರತಿಯೊಬ್ಬ ಕನ್ನಡಿಗ ನಾಡಿನ ಕಾವಲುಗಾರನಾಗಬೇಕಿದೆ: ಚಲಪತಿ ಗೌಡ