ಕನ್ನಡಪ್ರಭ ವಾರ್ತೆ ಇಂಡಿ
ತಾಲೂಕು ಸಮಾಜ ಕಲ್ಯಾಣ ಇಲಾಖೆಗೆ ಅಧಿಕ್ಷಕರಾಗಿ ನೂತನವಾಗಿ ಆಗಮಿಸಿದ ರಾಜಶೇಖರ ದೈವಾಡಿ ಮಾತನಾಡಿ, ಸಮಾಜ ಕಲ್ಯಾಣ ಎಂಬುವುದು ಒಂದು ಕುಟುಂಬ ಇದ್ದಂತೆ. ಎಲ್ಲರೂ ಒಗ್ಗಟ್ಟಿನಿಂದ ಒಂದೇ ಎಂಬ ಭಾವನೆಯೊಂದಿಗೆ ಕರ್ತವ್ಯ ನಿರ್ವಹಿಸಬೇಕು. ಊಹಾಪೋಹಗಳಿಗೆ ಕಿವಿಗೊಡದೆ, ಇಲಾಖೆಗೆ ಕೆಟ್ಟ ಹೆಸರು ತರದ ಹಾಗೆ ಎಲ್ಲರೂ ಉತ್ತಮವಾಗಿ ಕರ್ತವ್ಯ ನಿರ್ವಹಿಸಬೇಕು. ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಹೋಗುವ ಸಹೃದಯಿ ಸಹಾಯಕ ನಿರ್ದೇಶಕರು ಇಲಾಖೆಗೆ ಬಂದಿದ್ದಾರೆ. ಅವರ ಸಲಹೆ, ಸೂಚನೆ, ಮಾರ್ಗದರ್ಶನದಲ್ಲಿ ಗಟ್ಟಿಯಾಗಿ ಕೆಲಸ ಮಾಡಿ ಇಲಾಖೆಗೆ ಹೆಸರು ತರುವ ಕೆಲಸ ಮಾಡೊಣ. ಅಂಬೇಡ್ಕರ್ ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಅವರ ಆಸೆ ಈಡೇರಿಸುವ ಕೆಲಸ ನಾವೆಲ್ಲರೂ ಮಾಡೋಣ ಎಂದು ತಿಳಿಸಿದರು.ನಿಲಯ ಪಾಲಕರ ಸಂಘದ ಅಧ್ಯಕ್ಷ ಕೆ.ಬಿ.ಕೊರೆ ಮಾತನಾಡಿದರು. ಅಶೋಕ ತಳವಾರ, ಪುಂಡಲೀಕ ಗೊಂಧಳಿ, ಹಣಮಂತ ಅರವತ್ತು, ಸಂಗನಬಸು ನಾಗಣಸೂರ, ರಮೇಶ ಬಿರಾದಾರ, ಉಮರ ಮಿರ್ಜಿ, ಸಂತೋಷ ಕುಂಬಾರ, ಪುಂಡಲೀಕ ನಂದಗೊಂಡ, ರವೀಂದ್ರ ಚವ್ಹಾಣ, ಮಹೇಶ ಸೋಲಂಕರ, ಶಿವಾನಂದ ಅಂಗಡಿ, ಸಾವಿತ್ರಿ ಬಿರಾದಾರ, ಜ್ಯೋಗಿ ಔರಸಂಗ, ಶೈಲಾ ಬಗಲಿ, ಜನ್ನತ್ ಮೋಮಿನ್, ಯಶೋದಾ ಕುಕನೂರ, ಮಲ್ಲು ವಾಲಿಕಾರ, ಮಹೇಶ ಪೊದ್ದಾರ, ರಾಕೇಶ ಕಾಳೆ, ಶಾರದಾ ಮಾದರ, ರೇಖಾ ಕನ್ನೊಳ್ಳಿ ಮೊದಲಾದವರು ಇದ್ದರು.
ಕೋಟ್...ಸಮಾಜದಲ್ಲಿರುವ ಕಟ್ಟಕಡೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿ ಎಂಬ ಸದುದ್ದೇಶದಿಂದ ಸರ್ಕಾರ ವಸತಿ ನಿಲಯಗಳನ್ನು ಆರಂಭಿಸಿ ಮಕ್ಕಳಿಗೆ ವಸತಿ, ಊಟ, ಇತರೆ ಸೌಲಭ್ಯಗಳನ್ನು ಕಲ್ಪಿಸಿದೆ. ವಸತಿ ನಿಲಯದ ಎಲ್ಲ ನಿಲಯ ಪಾಲಕರು ವಸತಿ ನಿಲಯದಲ್ಲಿ ಪ್ರವೇಶ ಪಡೆದ ಮಕ್ಕಳಿಗೆ ಗುಣಮಟ್ಟದ ಊಟ ಹಾಗೂ ಸರ್ಕಾರದ ಇತರೆ ಸೌಲಭ್ಯಗಳು ನೀಡಬೇಕು.-ಉಮೇಶ ಲಮಾಣಿ, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ.