-ಮೆದುಳು ಸೋಂಕು ಪತ್ತೆ ಹಚ್ಚಿದ ಬಸವೇಶ್ವರ ಆಸ್ಪತ್ರೆ ವ್ಯದರ ತಂಡ ಯಶಸ್ವಿ
ಕನ್ನಡಪ್ರಭ ವಾರ್ತೆ, ಕಲಬುರಗಿ
ಮಾರಕ ಡೆಂಗ್ಯೂ ರೋಗದಿಂದ ಮೆದುಳಿಗೆ ಸೋಂಕಾಗಿ ಸಾವು ಬದುಕಿನ ಮಧ್ಯೆ ಹೊರಾಡುತ್ತಿದ್ದ ಪ್ರಜ್ಞಾಹೀನ ಮಹಿಳಾ ರೋಗಿಗೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಯಶಸ್ವಿ ಚಿಕಿತ್ಸೆ ನೀಡಿ ರೋಗಿಯ ಜೀವ ಉಳಿಸಿ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.26 ವರ್ಷದ ಆಶಾ ಅವರು ಮಾರಕ ಡೆಂಗ್ಯೂ ನಿಂದ ಮೆದುಳಿಗೆ ಸೋಂಕು ಹರಡಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು. ಅವರ ಸಂಬಂಧಿಕರು ಜನೇವರಿ 29ರಂದು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರೋಗಿಯನ್ನು ಕಂಡು ತಕ್ಷಣ ಕಾರ್ಯೋನ್ಮುಖರಾದ ಆಸ್ಪತ್ರೆಯ ವೈದ್ಯರು ಪರೀಕ್ಷೆ ಪ್ರಾರಂಭಿಸಿದರು.ಕೆಲವು ಸಮಯದ ನಂತರ ರೋಗಿಯು ಡೆಂಗ್ಯೂ ಎನ್ಸಿಪಿಲಿಟಿಸ್ ನಿಂದ ಮೆದುಳಿಗೆ ಸೋಂಕಾಗಿದ್ದರಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾಳೆ ಎಂದು ನಿಖರವಾಗಿ ಪತ್ತೆ ಹಚ್ಚಿದರು. ಕೂಡಲೇ ರೋಗಿಗೆ ಚಿಕಿತ್ಸೆ ಆರಂಭಿಸಿದರು. ಆಶಾ ಅವರ ಪ್ರಜ್ಞೆ ಮರಳಿ ತರಿಸುವಲ್ಲಿ ವೈದ್ಯರ ತಂಡ ಯಶಸ್ವಿಯಾದರು.
ಚಿಕಿತ್ಸೆ ಸ್ಪಂದಿಸಿದ ಆಶಾ, ಈಗ ಮೆದುಳು ಸೋಂಕಿನಿಂದ ಗುಣಮುಖರಾಗಿ ಅಪಾಯದಿಂದ ಪಾರಾಗಿದ್ದಾರೆ.ಸೂಕ್ತ ಚಿಕಿತ್ಸೆ ನೀಡಿದ ವೈದ್ಯ ಡಾ. ಶೌಕತ್. ಎ. ಆರ್, ಡಾ. ಶರಣ ನಂದ್ಯಾಳ, ಡಾ. ಸೋಹೈಲ್, ಡಾ. ಆನಂದ ಗಾರಂಪಳ್ಳಿ ವೈದ್ಯರ ತಂಡಕ್ಕೆ ಸಂಸ್ಥೆಯ ಅಧ್ಯಕ್ಷ ಶಶೀಲ್ ಜಿ ನಮೋಶಿ ಹಾಗೂ ಉಪಾಧ್ಯಕ್ಷ ರಾಜಾ ಭೀಮಳ್ಳಿ ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ. ಕೈಲಾಸ ಪಾಟೀಲ್, ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.-----
ಫೋಟೋ- ಬಸವ