20ರಿಂದ ಶಿವಮೊಗ್ಗದಲ್ಲಿ ವೈದ್ಯರ ಸಮ್ಮೇಳನ

KannadaprabhaNewsNetwork |  
Published : Sep 18, 2025, 02:00 AM IST
ಶಿವಮೊಗ್ಗದ ಪತ್ರಿಕಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯಿತ ಯುವ ವೇದಿಕೆಯ ರಾಜ್ಯ ಪ್ರತಿನಿಧಿ ಎಂ.ಡಿ. ಕಿರಣ್‌ಕುಮಾರ್ ಮಾತನಾಡಿದರು. | Kannada Prabha

ಸಾರಾಂಶ

ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆಯ ಶಿವಮೊಗ್ಗ ಘಟಕದಿಂದ ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ಸೆ.20 ಮತ್ತು 21ರಂದು ವೈದ್ಯರ ಸಮ್ಮೇಳನ ಆಯೋಜಿಸಲಾಗಿದ್ದು, ಈ ಸಮ್ಮೇಳನದಲ್ಲಿ ದೇಶದ ಹಲವು ರಾಜ್ಯದ 350 ಕ್ಕಿಂತಲೂ ಹೆಚ್ಚಿನ ವೈದ್ಯರು, ವೈದ್ಯೋದ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರು ಭಾಗಿಯಾಗಲಿದ್ದಾರೆ ಎಂದು ಅಂತಾರಾ ರಾಷ್ಟ್ರೀಯ ಲಿಂಗಾಯತ ಯುವ ವೇದಿಕೆಯ ರಾಜ್ಯ ಪ್ರತಿನಿಧಿ ಎಂ.ಡಿ. ಕಿರಣ್‌ಕುಮಾರ್ ಹೇಳಿದರು.

ಶಿವಮೊಗ್ಗ: ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆಯ ಶಿವಮೊಗ್ಗ ಘಟಕದಿಂದ ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ಸೆ.20 ಮತ್ತು 21ರಂದು ವೈದ್ಯರ ಸಮ್ಮೇಳನ ಆಯೋಜಿಸಲಾಗಿದ್ದು, ಈ ಸಮ್ಮೇಳನದಲ್ಲಿ ದೇಶದ ಹಲವು ರಾಜ್ಯದ 350 ಕ್ಕಿಂತಲೂ ಹೆಚ್ಚಿನ ವೈದ್ಯರು, ವೈದ್ಯೋದ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರು ಭಾಗಿಯಾಗಲಿದ್ದಾರೆ ಎಂದು ಅಂತಾರಾ ರಾಷ್ಟ್ರೀಯ ಲಿಂಗಾಯತ ಯುವ ವೇದಿಕೆಯ ರಾಜ್ಯ ಪ್ರತಿನಿಧಿ ಎಂ.ಡಿ. ಕಿರಣ್‌ಕುಮಾರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 9.30ಕ್ಕೆ ಸಮ್ಮೇಳನ ಹಾಗೂ 21ರಂದು ಸಿಗಂಧೂರು ಮತ್ತು ಜೋಗಕ್ಕೆ ನೆಟ್ವರ್ಕಿಂಗ್ ಟ್ರಿಪ್ ಏರ್ಪಡಿಸಲಾಗಿದೆ. ವೈದ್ಯರು ತಮ್ಮ ಕ್ಲಿನಿಕಲ್ ಪ್ರಾಕ್ಟಿಸ್‌ಗಿಂತಲೂ ಮುಂದೆ ಹೋಗಿ ಉದ್ಯಮಿಗಳಾಗಲು, ಹೊಸ ಕಾಲದ ವೈದ್ಯಕೀಯ ಸೇವಾ ಅಗತ್ಯಗಳು ಹಾಗೂ ಆರೋಗ್ಯ ಸೇವೆಗಳಲ್ಲಿ ಬೇಕಾದ ನೂತನ ತಂತ್ರಜ್ಞಾನಗಳನ್ನು ಸಂಶೋಧನೆ ಮಾಡಿ ಹೆಚ್ಚಿನ ಜನರಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸುವಂತೆ ಮಾಡಲು ಹಾಗೂ ತಮ್ಮ ಕ್ಷೇತ್ರದಲ್ಲಿ ಹೊಸ ಎತ್ತರಕ್ಕೆ ಜಿಗಿಯಲು ಈ ಕಾರ್ಯಕ್ರಮ ನೆರವಾಗಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ಉದ್ಘಾಟನಾ ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಸಂಸದ ಬಿ.ವೈ.ರಾಘವೇಂದ್ರ, ದಾವಣಗೆರೆಯ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಿವಮೊಗ್ಗದ ಶಾಸಕ ಎಸ್‌.ಎನ್‌.ಚನ್ನಬಸಪ್ಪ, ಚಿತ್ರದುರ್ಗದ ವಿಧಾನ ಪರಿಷತ್ ಶಾಸಕ ನವೀನ್ ಕೊಟ್ಟಿಗೆ, ಟ್ರಸ್ಟ್‌ನ ಅಧ್ಯಕ್ಷ ಸಂತೋಷ್ ಕೆಂಚಾಂಬ ಮತ್ತಿತರರು ಉಪಸ್ಥಿತರಿರುವರು ಎಂದರು.

ಈ ಸಮಾವೇಶದ ಸಂಯೋಜಕರಾಗಿ ಡಾ.ಶಾಲಿನಿ ನಲ್ವಾಡ್ , ಡಾ.ಧನಂಜಯ ಸರ್ಜಿ ಹಾಗೂ ಅಂತಾರಾಷ್ಟ್ರೀಯ ಲಿಂಗಾಯಿತ ಯುವ ವೇದಿಕೆ ಟ್ರಸ್ಟಿನ ಟ್ರಸ್ಟಿಗಳು ಹಾಗೂ ಸದಸ್ಯರು ಭಾಗವಹಿಸುವರು. ಡಾ.ನಾಗೇಂದ್ರ ಸ್ವಾಮಿ , ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಡಾ.ಧನಂಜಯ್ ಅರೋರ (ಬ್ರಾಂಡ್ ಮ್ಯಾನೇಜೆಂಟ್ ಎಕ್ಸ್‌ರ್ಟ್), ಡಾ. ಸುರೇಶ್ ಬಾಡಮಠ (ಪ್ರೊಫೆಸರ್ ನಿಮಾನ್ಸ್), ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಬಹಳಷ್ಟು ಸಾಧನೆ ಮಾಡಿದ ವ್ಯಕ್ತಿಗಳು ಈ ಸಮಿತ್‌ನಲ್ಲಿ ವೈದ್ಯಕೀಯ ಸೇವೆಯನ್ನು ವಿಸ್ತರಿಸುವ ಬಗ್ಗೆ, ಆರ್ಥಿಕ ನಿರ್ವಹಣೆ ಬಗ್ಗೆ, ಆಡಳಿತದ ಬಗ್ಗೆ, ವೈದ್ಯರುಗಳ ಸಾಂಘಿಕ ವ್ಯವಹಾರ, ಉದ್ಯಮದ ಬಗ್ಗೆ ಮಲ್ಟಿಪಲ್ ಪ್ಯಾನೆಲ್ ಡಿಸ್ಕಶನ್ಸ್ ನಡೆಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ಅವಿನಾಶ್, ಡಾ.ಶಶಿಕಾಂತ್, ಡಾ.ಬೆನಕಪ್ಪ, ಡಾ.ಶಿವಕುಮಾರ್, ಡಾ.ಶಂಭುಲಿಂಗ, ಪ್ರಕಾಶ್, ರವೀಂದ್ರ ಬೆಣ್ಣೆಹಳ್ಳಿ, ಗಣೇಶ ಅಂಗಡಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5-6 ತಿಂಗಳಿಂದ ನೀರು ಪೋಲು: ಕ್ರಮಕೈಗೊಳ್ಳದ ಅಧಿಕಾರಿಗಳು
ತಮ್ಮ ಮೇಲಿನ ಆರೋಪ ಸುಳ್ಳು, ಆಧಾರ ರಹಿತ : ಮುನೀಶ್‌ ಮೌದ್ಗಿಲ್‌