ಕನ್ನಡಪ್ರಭ ವಾರ್ತೆ ಹಂಗಾರಕಟ್ಟೆ
ಅವರು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ- ಐರೋಡಿ ಆಯೋಜಿಸಿದ್ದ ಯಕ್ಷ ಸಪ್ತೋತ್ಸವದಲ್ಲಿ ಮಾತನಾಡಿದರು.
ಆರಾಧನಾ ಕಲೆಯಾದ ಯಕ್ಷಗಾನ ಇಂದು ವಾಣಿಜ್ಯೀಕರಣವಾಗುತ್ತಿದೆ. ದಾಖಲೀಕರಣದಿಂದಾಗಿ ನಮ್ಮ ಹಿಂದಿನ ಕಾಲದಲ್ಲಿ ಯಕ್ಷಗಾನ ಹೇಗಿತ್ತು? ಕಲಾವಿದರು ಹೇಗಿದ್ದರು? ಎಂಬುದನ್ನು ತಿಳಿಯಬಹುದಾಗಿದೆ. ಹಾಗಾಗಿ ಯಕ್ಷಗಾನ ಸಂಸ್ಥೆಗಳು ಯಕ್ಷಗಾನದ ದಾಖಲೀಕರಣದ ಬಗ್ಗೆ ಗಮನಹರಿಸಬೇಕಾಗಿದೆ ಎಂದರು.ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಐವತ್ತು ವರ್ಷಗಳ ಇತಿಹಾಸವಿರುವ ಕಲಾಕೇಂದ್ರದ ಸಾಧನೆ ಅತ್ಯದ್ಭುತ. ಶ್ರೇಷ್ಠರಿಂದ ಸ್ಥಾಪಿಸಲ್ಪಟ್ಟು ಉಪ್ಪೂರರಿಂದ ತರಬೇತಿ ಪಡೆದ ಶಿಷ್ಯರನ್ನು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಮಹಾ ಸಂಸ್ಥೆಗೆ ತನ್ನ ಶುಭಾಶಯ ತಿಳಿಸಿದರು.ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಉದ್ಯಮಿ ರಾಜೇಶ್ ಕಾರಂತ, ಕರ್ಣಾಟಕ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ಅಲ್ಸೆ ಮತ್ತು ಪತ್ರಕರ್ತ ರಾಜೇಶ್ ಗಾಣಿಗ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಮೊದಲು ಮಹಿಳಾ ವೇದಿಕೆ ಸಾಲಿಗ್ರಾಮದಿಂದ ಸಾಂಸ್ಕೃತಿಕ ವೈಭವ ನಂತರ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಪೂರ್ವರಂಗ ಪ್ರದರ್ಶನ ಮತ್ತು ರಾಮಚಂದ್ರ ಕೊಂಡದಕುಳಿಯವರ ನಿರ್ದೇಶನದಲ್ಲಿ ಗಾಂಧಾರಿ ಶಾಪ ಎಂಬ ಯಕ್ಷಗಾನ ಪ್ರದರ್ಶನ ನೆರವೇರಿತು.