ದೊಡ್ಡಬಳ್ಳಾಪುರ: ಸಿಡಿಲು ಬಡಿದು ಎರಡು ಹಸುಗಳ ಸಾವು

KannadaprabhaNewsNetwork |  
Published : Apr 30, 2026, 01:15 AM IST
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯಲ್ಲಿ ಸಿಡಿಲು ಬಡಿದು ಮೃತಪಟ್ಟಿರುವ ಹಸುಗಳು. | Kannada Prabha

ಸಾರಾಂಶ

ಈ ಘಟನೆ ಸ್ಥಳೀಯ ರೈತರಲ್ಲಿ ಆತಂಕ ಮೂಡಿಸಿದ್ದು, ಮಳೆಗಾಲದಲ್ಲಿ ಪಶುಗಳನ್ನು ಮರಗಳ ಕೆಳಗೆ ಕಟ್ಟದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

ದೊಡ್ಡಬಳ್ಳಾಪುರ: ಸಿಡಿಲು ಬಡಿದ ಪರಿಣಾಮ ಎರಡು ಸೀಮೆ ಹಸುಗಳು ಮೃತಪಟ್ಟಿರುವ ಘಟನೆ ತಾಲೂಕಿನ ತೂಬಗೆರೆ ಹೋಬಳಿಯ ಕಾವಲಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನ ಸಮೀಪ ಮಂಗಳವಾರ ರಾತ್ರಿ ಸಂಭವಿಸಿದೆ. ಗಂಟಿಗಾನಹಳ್ಳಿ ಗ್ರಾಮದ ರತ್ನಮ್ಮ, ಚಿಕ್ಕ ಹೊನ್ನಪ್ಪ ಅವರಿಗೆ ಸೇರಿದ ಹಸುಗಳನ್ನು ತೋಟದಲ್ಲಿರುವ ಮರದ ಕೆಳಗೆ ಕಟ್ಟಿದ್ದು, ಸಿಡಿಲು ಬಡಿದಿದೆ. ಪರಿಣಾಮವಾಗಿ ಸ್ಥಳದಲ್ಲೇ ಎರಡು ಹಸುಗಳು ಸಾವನ್ನಪ್ಪಿವೆ. ಈ ಘಟನೆ ಸ್ಥಳೀಯ ರೈತರಲ್ಲಿ ಆತಂಕ ಮೂಡಿಸಿದ್ದು, ಮಳೆಗಾಲದಲ್ಲಿ ಪಶುಗಳನ್ನು ಮರಗಳ ಕೆಳಗೆ ಕಟ್ಟದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. ಸಂಬಂಧಿತ ಇಲಾಖೆ ತಕ್ಷಣ ಸ್ಪಂದಿಸಿ, ಬಾಧಿತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನರಿಗೆ ನೀರು, ಜಾನುವಾರಿಗೆ ಮೇವಿನ ಕೊರತೆಯಾದಂತೆ ಕ್ರಮವಹಿಸಿ: ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಡಿಕೆಶಿ ಸೂಚನೆ
ಅಭಿವೃದ್ಧಿ ಆಗಿಲ್ಲವೆಂದು ದಿನೇಶ ಶೆಟ್ಟಿ ಕೆಪಿಸಿಸಿಗೆ ಮನದಟ್ಟು