ದೊಡ್ಡಕೊಡ್ಲಿ: ಡಾ.ಅಂಬೇಡ್ಕರ್ ಪುತ್ಥಳಿ ಅನಾವರಣ

KannadaprabhaNewsNetwork |  
Published : Apr 17, 2025, 12:11 AM IST
ಪೋಟೋ :-  ಅಂಬೇಡ್ಕರ್ ಪುತ್ಥಳಿ ಅನಾವರಣ ಮತ್ತು ಅಂಬೇಡ್ಕರ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಮಾತನಾಡುತ್ತಿರುವುದು. 2. ಪ್ರತಿಮೆ ಅನಾವರಣ ಸಂದರ್ಭ. 3. ದಿನದ ಅಂಗವಾಗಿ ಮೆರವಣಿಗೆ ಸಾಗುತ್ತಿರುವುದು | Kannada Prabha

ಸಾರಾಂಶ

ದೊಡ್ಡಕೊಡ್ಲಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಯನ್ನು ಮಡಿಕೇರಿ ಶಾಸಕ ಡಾ. ಮಂತರ್‌ ಗೌಡ ಅನಾವರಣಗೊಳಿಸಿದರು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಅಂಬೇಡ್ಕರ್ ಇಟ್ಟುಕೊಂಡಿದ್ದ ಗುರಿಯನ್ನು ತಲುಪಲು ದೊಡ್ಡ ಬದಲಾವಣೆಯ ಅಗತ್ಯ ಇದೆ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಹೇಳಿದರು.

ಅವರು ದೊಡ್ಡಕೊಡ್ಲಿ ಗ್ರಾಮದಲ್ಲಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಯನ್ನು ಅನಾವರಣಗೊಳಸಿದ ನಂತರ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಸಮಾನತೆ ತರಲು ಅಂಬೇಡ್ಕರ್‌ ನಿರಂತರವಾಗಿ ಶ್ರಮಿಸಿದರು. ವಿದೇಶದಲ್ಲಿ ಶಿಕ್ಷಣ ಪಡೆದರೂ ಸಹ ಅವರು ಅಲ್ಲಿಯೇ ಉಳಿಯದೆ ಸ್ವದೇಶಕ್ಕೆ ಬಂದು ಹೋರಾಡಿದರು. ಅಂಬೇಡ್ಕರ್ ಅವರ ಆಶಯಗಳು ಇನ್ನೂ ಈಡೇರದೆ ಇರುವುದು ಬೇಸರದ ಸಂಗತಿ. ಆದರೆ ಅವರ ಪ್ರತಿಮೆಗಳ ನಿರ್ಮಾಣದಿಂದ ಅವರ ಆಶಯಗಳು ಜೀವಂತವಾಗಿರಬೇಕು ಎಂದರು.

ಚನ್ನಪಟ್ಟಣದ ಅಂಬೇಡ್ಕರ್ ವಿಚಾರವಾದಿ ಜಯರಾಮ್ ಮಾತನಾಡಿ, ದೇಶದಲ್ಲಿ ಅಂಬೇಡ್ಕರ್ ಅವರಿಂದ ಪ್ರಜಾಪ್ರಭುತ್ವ ನಿರ್ಮಾಣವಾಗಿದೆ. ಇದರಿಂದ ನಮ್ಮ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ಸಿಕ್ಕಿದೆ. ಇದರ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಅಂಬೇಡ್ಕರ್ ಅವರ ಸಂವಿಧಾನದ ವ್ಯವಸ್ಥೆಯಿಂದ ಇಂದು ನಮ್ಮ ದೇಶ ವಿಶ್ವದ ಬಲಿಷ್ಟ ರಾಷ್ಟ್ರವಾಗಿದೆ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣದ ಉದ್ದೇಶ ಮುಂದಿನ ಪೀಳಿಗೆಯ ಮಕ್ಕಳಿಗೆ ರೋಡ್ ಮಾಡಲ್ ಆಗಲಿ ಎಂದಾಗಿದೆ. ಇಂದಿನ ಯುವ ಜನಾಂಗ ಸಿನಿಮಾ ತಾರೆಯರು, ಕ್ರಿಕೆಟ್ ಪಟುಗಳಿಂತ ಅಂಬೇಡ್ಕರ್ ಅವರನ್ನು ಮಾರ್ಗದರ್ಶಕರನ್ನಾಗಿ ಮಾಡಿಕೊಳ್ಳುವಂತೆ ಸಲಹೆ ನೀಡಿದರು.ಶನಿವಾರಸಂತೆ ಠಾಣೆಯ ಪ್ರೊಪೆಷನರಿ ಎಎಸ್‍ಪಿ ಡಾ.ಬೆನಕ ಪ್ರಸಾದ್ ಮಾತನಾಡಿ, ಇಂದು ಮನುಷ್ಯರನ್ನು ನಾವು ಸಮಾನವಾಗಿ ಕಾಣುತ್ತಿರುವುದಕ್ಕೆ ಅಂಬೇಡ್ಕರ್ ಅವರ ಹೋರಾಟವೇ ಕಾರಣವಾಗಿದೆ. ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರು ಒಂದು ಜನಾಂಗಕ್ಕೆ ಸೀಮಿತಗೊಳಿಸಬಾರದು ಅವರು ಇಡಿ ಮನುಕುಲಕ್ಕೆ ಸೇರಿದವರಾಗಿದ್ದಾರೆ ಎಂದರು.ಪುತ್ಥಳಿ ನಿರ್ಮಾಣ ಸಮಿತಿ ಕಾರ್ಯದರ್ಶಿ ಡಿ.ಎನ್.ವಸಂತ್ ಪ್ರಸ್ತಾವಿಕವಾಗಿ ಮಾತನಾಡಿದರು. ಕೊಡ್ಲಿಪೇಟೆ ಗ್ರಾ.ಪಂ. ಸದಸ್ಯ ಡಿ.ಕೆ.ಪ್ರಸನ್ನ ಅಧ್ಯಕ್ಷತೆವಹಿಸಿದ್ದರು. ಚನ್ನಪಟ್ಟಣ ಪ.ಪೂ. ಕಾಲೇಜಿನ ಪ್ರಾಂಶುಪಾಲ ಡಿ.ಸಿ.ಸುರೇಶ್, ಕೊಡ್ಲಿಪೇಟೆ ಗ್ರಾ.ಪಂ. ಅಧ್ಯಕ್ಷೆ ಅಪ್ಸರಾ ಬೇಗಂ, ಸದಸ್ಯ ಕೆ.ಆರ್.ಚಂದ್ರಶೇಖರ್, ಸದಸ್ಯರಾದ ಅಶ್ವಿನಿ ಮಂಜುನಾಥ್, ಗೀತಾ ತ್ಯಾಗರಾಜ್, ನಗೀನಾ ಬಾನು, ಸುನಂದ, ಹನೀಫ್ ಕಿರಿಕೊಡ್ಲಿ, ಪಿಡಿಒ ರಾಜೇಂದ್ರ, ಪ್ರಮುಖರಾದ ಜಗದೀಶ್, ಮಂಜುನಾಥ್, ಪಲ್ಲವಿ, ಡಿ.ಆರ್.ಜಗದೀಶ್ ಮುಂತಾದವರು ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ