
ಕನ್ನಡಪ್ರಭ ವಾರ್ತೆ ಹಾರೋಹಳ್ಳಿ
ಗ್ರಾಮದ ಪ್ರವೇಶ ದ್ವಾರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗ್ರಾಮಸ್ಥರು ಬೃಹತ್ ಮೂಸಂಬಿ ಹಾರ ಹಾಕಿ, ತಮಟೆ, ನಗಾರಿ ಬಾರಿಸಿ, ಆರತಿ ಬೆಳಗಿ ಸ್ವಾಗತ ಕೋರಿದರು. ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮಾಡಿ ದೇವಾಲಯಕ್ಕೆ ಕರೆದುಕೊಂಡು ಬಂದರು.
ಗ್ರಾಮಕ್ಕೆ ಆಗಮಿಸಿದ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು ಪ್ರತಿ ಮನೆಯಲ್ಲೂ ಆರತಿ ಬೆಳಗಿ, ಬಗೆಬಗೆಯ ಹೂಗಳ ಹಾರ, ಹಣ್ಣಿನ ಹಾರ ಹಾಕಿದರು. ನಂತರ ಸುತ್ತಮುತ್ತಲಿನ ಗ್ರಾಮಸ್ಥರೊಂದಿಗೆ ಸುಮಾರು 2 ಕಿಲೋ ಮೀಟರ್ ನಷ್ಟು ದೂರ ದೇವಸ್ಥಾನದವರೆಗೂ ಮೆರವಣಿಗೆ ಮಾಡಿದರು.ನಂತರ ಸಭೆಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಅವತ್ತಿನ ಆ ಒಂದು ಸಣ್ಣ ಘಟನೆಯಿಂದ ಗ್ರಾಮಕ್ಕೆ ಕಪ್ಪುಚುಕ್ಕೆ ಬಂದಂತಾಗಿತ್ತು. ಇಂದು ಗ್ರಾಮದ ತಾಯಂದಿರು ಆ ಕಳಂಕವನ್ನು ಸಂಪೂರ್ಣವಾಗಿ ತೊಳೆದಿದ್ದಾರೆ ಎಂದು ಹೇಳಿದರು.
ನಾನು ರಾಮನಗರ ಬಿಟ್ಟು ಹೋಗಿರೋದಾದರೂ ಎಲ್ಲಿ? ನಾನು ನಿರಂತರವಾಗಿ ಇಲ್ಲೇ ಇದ್ದೇನೆ. ದೇವೇಗೌಡರ 64 ವರ್ಷಗಳ ರಾಜಕೀಯ ಹಾಗೂ ಈ ಜಿಲ್ಲೆಯೊಂದಿಗಿನ 30- 40 ವರ್ಷಗಳ ಬಾಂಧವ್ಯವನ್ನು ಪ್ರಾಮಾಣಿಕವಾಗಿ ಮುಂದುವರಿಸುತ್ತೇವೆ ಎಂದು ಹೇಳಿದರು.
ರಾಮನಗರಕ್ಕೆ ಕಾಂಗ್ರೆಸ್ ಏನು ಕೊಟ್ಟಿದೆ? ಶ್ವೇತಪತ್ರ ಹೊರಡಿಸಲಿ
ರಾಮನಗರಕ್ಕೆ ಕಾಂಗ್ರೆಸ್ ಏನು ಕೊಟ್ಟಿದೆ. ಈ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಬಮೂಲ್ ಅಧ್ಯಕ್ಷ ಡಿ ಕೆ. ಸುರೇಶ್ ಅವರಿಗೆ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸವಾಲು ಹಾಕಿದರು.
5 ಸಾವಿರ ಎಕರೆ ಕೊಡಿಸ್ತೀನಿ, ಕೈಗಾರಿಕೆ ಮಾಡಲಿ ಇಲ್ಲದಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂಬ ಡಿ.ಕೆ. ಸುರೇಶ್ ಅವರ ಸವಾಲಿಗೆ ಪ್ರತಿಕ್ರಿಯಿಸಿದ ನಿಖಿಲ್, ಇಲ್ಲಿ ಪ್ರತಿಷ್ಠೆ ಪ್ರಶ್ನೆ ಆಗಬಾರದು. 100 ಕೊಡ್ತಾರೋ, 5,000 ಎಕರೆ ಕೊಡ್ತಾರೋ ಮೊದಲು ಕೊಡಲಿ, ನಾವು ಸ್ವಾಗತಿಸುತ್ತೇವೆ ಎಂದರು.
ಮಂಡ್ಯ ಎಆರ್ ಎಐ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ:
ಕ್ಷೇತ್ರ ಪುನರ್ ವಿಂಗಡಣೆ ಬಿಲ್ ವಿಚಾರ:
ಚಳಿಗಾಲದ ಅಧಿವೇಶನದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮಂಡನೆಗೆ ಸಿದ್ಧತೆ ಮಾಡಲಾಗಿದೆ. ಡಿಲಿಮಿಟೇಶನ್ ಜೊತೆಗೆ ಶೇ.33 ರಷ್ಟು ಮಹಿಳಾ ಮೀಸಲಾತಿ ಜಾರಿಗೊಳಿಸಲು ಬಹುತೇಕ ಪಕ್ಷಗಳ ಸಹಮತ ಇದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗದಂತೆ ತಡೆಯಲು ಕೇಂದ್ರದಿಂದ ಮಹತ್ವದ ಸೂತ್ರ ರೆಡಿ ಮಾಡಲಾಗಿದೆ. ದೇಶದ ಎಲ್ಲಾ ರಾಜ್ಯಗಳಲ್ಲೂ ಸರಿ ಸಮಾನವಾಗಿ ಶೇ. 50ರಷ್ಟು ಕ್ಷೇತ್ರಗಳ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. ಈ ಅಧಿವೇಶನದಲ್ಲೇ ಮಸೂದೆ ಪಾಸ್ ಆಗುವ ಸಂಪೂರ್ಣ ಆತ್ಮವಿಶ್ವಾಸವಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.