ಇಂದಿನಿಂದ ಮೊಸರು ದರ ಲೀ.ಗೆ ₹ 2 ಇಳಿಕೆ

Published : Nov 29, 2026, 11:10 AM IST
KMF curd revised rates

ಸಾರಾಂಶ

ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ನಂದಿನಿ ಮೊಸರಿನ ದರವನ್ನು ಲೀಟರ್‌ಗೆ 2 ರು. ಇಳಿಕೆ ಮಾಡಿದ್ದು, ಪರಿಷ್ಕೃತ ದರ ಭಾನುವಾರದಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಪರಿಷ್ಕೃತ ದರದ ಪ್ರಕಾರ ಪ್ರತಿ ಲೀಟರ್ (ಕೆ.ಜಿ) ಮೊಸರಿನ ಮೇಲೆ 2 ರು. ಹಾಗೂ 500 ಮಿ.ಲೀ. (ಅರ್ಧ ಲೀಟರ್) ಪ್ಯಾಕೆಟ್‌ಗೆ 1 ರು. ಕಡಿತಗೊಳ್ಳಲಿದೆ

ಬೆಂಗಳೂರು : ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ನಂದಿನಿ ಮೊಸರಿನ ದರವನ್ನು ಲೀಟರ್‌ಗೆ 2 ರು. ಇಳಿಕೆ ಮಾಡಿದ್ದು, ಪರಿಷ್ಕೃತ ದರ ಭಾನುವಾರದಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಪರಿಷ್ಕೃತ ದರದ ಪ್ರಕಾರ ಪ್ರತಿ ಲೀಟರ್ (ಕೆ.ಜಿ) ಮೊಸರಿನ ಮೇಲೆ 2 ರು. ಹಾಗೂ 500 ಮಿ.ಲೀ. (ಅರ್ಧ ಲೀಟರ್) ಪ್ಯಾಕೆಟ್‌ಗೆ 1 ರು. ಕಡಿತಗೊಳ್ಳಲಿದೆ. ಕಳೆದ ತಿಂಗಳಷ್ಟೇ ಹಾಲಿನಲ್ಲಿ ದರವನ್ನು ಲೀಟರ್‌ಗೆ 8ರಿಂದ 12 ರು.ವರೆಗೆ ಹೆಚ್ಚಿಸಲಾಗಿತ್ತು. ಇದೇ ಸಂದರ್ಭದಲ್ಲಿ ಮೊಸರಿನ ಬೆಲೆಯನ್ನು ಲೀಟರ್‌ಗೆ ಬರೋಬ್ಬರಿಗೆ 14 ರು. ಹಾಗೂ ಅರ್ಧ ಲೀಟರ್‌ಗೆ 6 ರು.ನಷ್ಟು ಹೆಚ್ಚಿಗೆ ಮಾಡಲಾಗಿತ್ತು

ದೈನಂದಿನ ಬಳಕೆ ವಸ್ತುವಿನ ಬೆಲೆಯನ್ನು ಒಮ್ಮೇಗೆ ಈ ಮಟ್ಟದಲ್ಲಿ ಏರಿಕೆ

ದೈನಂದಿನ ಬಳಕೆ ವಸ್ತುವಿನ ಬೆಲೆಯನ್ನು ಒಮ್ಮೇಗೆ ಈ ಮಟ್ಟದಲ್ಲಿ ಏರಿಕೆ ಮಾಡಿದ್ದರ ವಿರುದ್ಧ ರಾಜ್ಯಾದ್ಯಂತ ಗ್ರಾಹಕರು, ಗೃಹಿಣಿಯರು ಮತ್ತು ಹೋಟೆಲ್‌ ಉದ್ಯಮಿಗಳಿಂದ ತೀವ್ರ ವಿರೋಧ ಹಾಗೂ ಆಕ್ರೋಶ ವ್ಯಕ್ತವಾಗಿತ್ತು. ಜೊತೆಗೆ ಬೆಲೆ ಏರಿಕೆ ಹಿಂಪಡೆಯುವಂತೆ ವ್ಯಾಪಕ ಒತ್ತಡ ಕೇಳಿ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮೊಸರಿನ ದರ 2 ರು. ಇಳಿಸಲು ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗಿ 20 ದಿನಗಳ ನಂತರ ಕೆಎಂಎಫ್‌ ಇದೀಗ ಮೊಸರಿನ ದರವನ್ನು ಸ್ವಲ್ಪಮಟ್ಟಿಗೆ ಕಡಿತಗೊಳಿಸಿದೆ.

ನಂದಿನಿ ಮೊಸರಿನ ಪರಿಷ್ಕೃತ ದರಪಟ್ಟಿ

ಪ್ರಮಾಣ ಹಳೆಯ ದರ (ರೂ.ಗಳಲ್ಲಿ) ಪರಿಷ್ಕೃತ ದರ (ರೂ.ಗಳಲ್ಲಿ)

ಅರ್ಧ ಲೀಟರ್ (500 ಗ್ರಾಂ) 34 33

ಒಂದು ಲೀಟರ್ (1 ಕೆ.ಜಿ) 68 66

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಮಲ್ಲೇಶ್ವರದಲ್ಲಿ ಕಡಲೆ ಪರಿಷೆ - 3 ಲಕ್ಷ ಕಾಗದದ ಚೀಲ ವಿತರಣೆ
ಜ.1ರಿಂದ ಆಶಾ ಕಾರ್ಯಕರ್ತೆಯರ ಗೌರವ ಧನ 2000 ಹೆಚ್ಚಳ : ಡಿಕೆಶಿ ಘೋಷಣೆ