ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಗಾಯತ್ರಿ ಧ್ಯಾನಪೀಠದಲ್ಲಿರುವ ಶ್ರೀ ಪಂಚಮುಖಿ ಗಾಯತ್ರಿ ದೇವಿಯ ಪ್ರತಿಷ್ಠಾ ದೃಢಕಲಶ ಮಹೋತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಿತು.
ಶುಕ್ರವಾರ ಪ್ರಾತಃಕಾಲ ತ್ರಿನಾಳಿಕೇರ ಗಣಯಾಗ, ಪ್ರಧಾನಯಾಗ ಹಾಗೂ ಒದಗಿದ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕವನ್ನು ವೇದಮೂರ್ತಿ ಸರ್ವೇಶ ತಂತ್ರಿ ಸಂಪನ್ನಗೊಳಿಸಿದರು. ನಂತರ ನ್ಯಾಸ ಪೂಜೆ, ಬ್ರಾಹ್ಮಣ ಸುವಾಸಿನಿ ಆರಾಧನೆ, ಪ್ರಸನ್ನ ಪೂಜೆ, ಮಹಾಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ನೆರವೇರಿತು.
ಪ್ರಸನ್ನಾಕ್ಷಿಯ ಸನ್ನಿಧಾನದಲ್ಲಿ ನವಕಕಲಶ ಪ್ರಧಾನ ಹೋಮ, ಕಲಶ ಅಭಿಷೇಕವನ್ನು ಗಣೇಶ್ ಸರಳಾಯ ನೆರವೇರಿಸಿದರು. ವೇದಮೂರ್ತಿ ವಿಖ್ಯಾತ್ ಭಟ್ ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.