ದೊಡ್ಡಪ್ಪ ಅಪ್ಪ ಸ್ಕಾಲರ್‌ಶಿಪ್‌ ಮೊತ್ತ ₹3.50 ಕೋಟಿಗೆ ಹೆಚ್ಚಳ

KannadaprabhaNewsNetwork |  
Published : Jun 11, 2024, 01:31 AM IST
ಕಲಬುರಗಿಯ ದಾಸೋಹ ಮನೆಯಲ್ಲಿ ಸೋಮವಾರ ನಡೆದ ಸರಳ ಸಮಾರಂಭದಲ್ಲಿ ಎಸ್‌ಬಿಆರ್‌ ಕಾಲೇಜಿನ ನೀಟ್‌, ಜೆಇಇ ಟಾಪ್ಪರ್‌, ಪಿಯುಸಿ 2 ವರ್ಷದ ಥಿಯರಿ ಟಾಪ್ಪರ್‌ಗಳನ್ನು ಸತ್ಕರಿಸಲಾಯ್ತು. | Kannada Prabha

ಸಾರಾಂಶ

ಶರಣಬಸವೇಶ್ವರ ವಸತಿ ಪಬ್ಲಿಕ್‌ ಶಾಲೆಯ ಪ್ರವೇಶಕ್ಕೆ ನಡೆಯುವ ಪ್ರವೇಶ ಪರೀಕ್ಷೆಯಲ್ಲಿ ಅತೀ ಹೆಚ್ಚಿನ ಅಂಕ ಪಡೆದ ಪ್ರತಿಭಾವಂತರಿಗೆ ನೀಡುವ ದೊಡ್ಡಪ್ಪ ಅಪ್ಪ ವಿದ್ಯಾರ್ಥಿ ವೇತನದ ಮೊತ್ತ ಈ ವರ್ಷ 2.50 ಕೋಟಿ ರು. ನಿಂದ 3.50 ಕೋಟಿ ರು. ಹೆಚ್ಚಳ ಮಾಡಲಾಗುತ್ತಿದ್ದೆ ಎಂದು ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಘೋಷಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಲ್ಲಿನ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಡಯಲ್ಲಿರುವ ಪ್ರತಿಷ್ಠಿತ ಶರಣಬಸವೇಶ್ವರ ವಸತಿ ಪಬ್ಲಿಕ್‌ ಶಾಲೆಯ ಪ್ರವೇಶಕ್ಕೆ ನಡೆಯುವ ಪ್ರವೇಶ ಪರೀಕ್ಷೆಯಲ್ಲಿ ಅತೀ ಹೆಚ್ಚಿನ ಅಂಕ ಪಡೆದ ಪ್ರತಿಭಾವಂತರಿಗೆ ನೀಡುವ ದೊಡ್ಡಪ್ಪ ಅಪ್ಪ ವಿದ್ಯಾರ್ಥಿ ವೇತನದ ಮೊತ್ತ ಈ ವರ್ಷ 2.50 ಕೋಟಿ ರು. ನಿಂದ 3.50 ಕೋಟಿ ರು. ಹೆಚ್ಚಳ ಮಾಡಲಾಗುತ್ತಿದ್ದೆ ಎಂದು ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಘೋಷಿಸಿದ್ದಾರೆ.

ದಾಸೋಹ ಮಹಾ ಮನೆಯಲ್ಲಿ ಸೋಮವಾರ ನಡೆದ ನೀಟ್‌ ಟಾಪರ್‌ಗಳಿಗೆ ನಗದು ಬಹುಮಾನ ನೀಡಿ ಸತ್ಕರಿಸುವ ಸಮಾರಂಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತ ದೊಡ್ಡಪ್ಪ ಅಪ್ಪ ವಿದ್ಯಾರ್ಥಿವೇತನ ಅನೇಕ ಬಡ ಮಕ್ಕಳಿಗೆ ಅನುಕೂಲವಾಗಿದೆ. ಈ ಬಾರಿ ಕಾಲೇಜಿನ ಟಾಪರ್‌ಗಳಲ್ಲಿ ಈ ರೀತಿ ಸ್ಕಾಲರ್ಶೀಪ್‌ ಪಡೆದ ಪ್ರತಿಭೆಗಳೇ ಹೆಚ್ಚಾಗಿದ್ದಾರೆಂದು ಸಂತಸ ಹೊರಹಾಕಿದರಲ್ಲದೆ, ಸ್ಕಾಲರ್‌ಶಿಪ್‌ ಮೊತ್ತ ಹೆಚ್ಚಳದ ಹಿಂದೆ ಇನ್ನೂ ಅಧಿಕ ಸಂಖ್ಯೆಯಲ್ಲಿ ಪ್ರತಿಭಾವಂತ ಗ್ರಾಮೀಣ, ಬಡ ಕುಟುಂಬದ ಮಕ್ಕಳಿಗೆ ತಲುಪುವ ಗುರಿ ಹೊಂದಲಾಗಿದೆ ಎಂದರು.

ಹಿಂದಿನ ವರ್ಷ 2.50 ಕೋಟಿ ರು. ಸ್ಕಾಲರ್‌ಶಿಪ್‌ ನೀಡಲಾಗಿತ್ತು. ಬರುವ ಶೈಕ್ಷಣಿಕ ವರ್ಷ ಈ ಮೊತ್ತ 3.50 ಕೋಟಿ ರುಪಾಯಿಗೆ ಹೆಚ್ಚಿಸಲಾಗುತ್ತಿದೆ. ಈ ಮೊತ್ತದವರೆಗೂ ಮಕ್ಕಳ ಆಯ್ಕೆಮಾಡಿ ಅಂತಹ ಮಕ್ಕಳಿಗೆ ಸಂಪೂರ್ಣ ಉಚಿತ ಕಾಲೇಜು ಶಿಕ್ಷಣ ನೀಡಲಾಗುತ್ತಿದೆ. ಇದರಿಂದ ಪ್ರತಿಭೆಗಳ ಓದಿಗೆ ಅನುಕೂಲವಾಗಿದೆ. ಹಳ್ಳಿಗಾಡಿನ ಪ್ರತಿಭೆಗಳಿಗೆ ಉತ್ತಮ ಕಾಲೇಜು ದೊರಕುತ್ತಿದೆ ಎಂದರು.

ವೈದ್ಯರ ಮಕ್ಕಳೇ ವೈದ್ಯರಾಗಬೇಕು ಎಂದು ಹಿಂದೊಂದು ಕಾಲವಿತ್ತು, ಈಗ ಕಾಲ ಬದಲಾಗಿದೆ. ಪ್ರತಿಭೆಗಳಿಗೆ ಸಂಸ್ಥಾನದಿಂದ ಸಾಕಷ್ಟು ಬೆಂಬಲ ದೊರಕುತ್ತಿದೆ. ಹೀಗಾಗಿ ಈಗ ರೈತರು, ಕೂಲಿ ಕಾರ್ಮಿಕರು, ಬಡ, ಮಧ್ಯಮ ವರ್ಗದ ಮಕ್ಕಳೂ ವೈದ್ಯರಾಗಬಹುದು ಎಂಬುದು ಸಾಬೀತಾಗುತ್ತಿದೆ. ಎಸ್ಬಿಆರ್‌ನ 800ಕ್ಕೂ ಹೆಚ್ಚು ಮಕ್ಕಳು ಈ ಬಾರಿ ವೈದ್ಯಕೀಯ ಪ್ರವೇಶ ಅರ್ಹತೆ ಪಡೆದಿದ್ದಾರೆಂದು ಹೆಮ್ಮೆಯಿಂದ ಹೇಳಿದರು.

ಡೀನ್ ಮಾದರಿ ಶಾಲೆ ಕಲಬುರಗಿಗೆ ತರುವ ಮೂಲಕ ಡಾ. ಅಪ್ಪಾಜಿ ಮಾದರಿ ಕೆಲಸ ಮಾಡಿದ್ದಾರೆಂದು ಹೇಳಿದ ದೇಶಮುಖ ಅವರು ಅವರು ನೆಟ್ಟ ಮರ ಈಗ ಸಿಹಿಹಣ್ಣು ಬಿಡುತ್ತಿದೆ. ಎಲ್ಲರು ಈ ಭಾಗದವರು ಅದನ್ನು ಸವಿಯುತ್ತಿದ್ದಾರೆಂದರು.

ಪ್ರತಿಭೆಗಳಿಗೆ ಸನ್ಮಾನ ಮಾಡಿ ಮಾತನಾಡಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ ಪರ್ಸನ್‌ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿಯವರು, ದೊಡ್ಡಪ್ಪ ಅಪ್ಪನವರ ದೂರದೃಷ್ಟಿಯ ಬುನಾದಿ ಇರೋ ಸಂಸ್ಥೆಗೆ ಡಾ. ಶರಣಬಸವಪ್ಪ ಅಪ್ಪಾಜಿ ಕಸವು ತುಂಬಿದ್ದಾರೆ. 9 ನೇ ಪೀಠಾಧಿಪತಿ ಚಿ. ದೊಡ್ಡಪ್ಪ ಅಪ್ಪ ಅವರ ಆಶಿರ್ವಾದವಿದೆ, ಬಸವರಾಜ ಅಣ್ಣಾವರ ಬೆಂಬಲವಿದೆ. ಅನುಭವಿ, ನಿಷ್ಠಾವಂತ ಎನ್‌ಎಸ್ ದೇವರಕಲ್‌, ಶ್ರೀಶೈಲ ಹೊಗಾಡಿ ಅವರಂತಹ ಪ್ರಾಚಾರ್ಯರ ಮಾರ್ಗದರ್ಶನ ಮಕ್ಕಳಿಗೆ ಇದೆ. ಇಲ್ಲಿನ ಬೋಧಕರು ಅನುಭವಿಗಳಾಗಿದ್ದು ಮಕ್ಕಳ ನಾಡಿ ಮಿಡಿತ ಅರಿತಿದ್ದಾರೆ. ಅದಕ್ಕೇ ಸಂಸ್ಥೆಯು ಪ್ರವರ್ಧಮಾನಕ್ಕೇರುತ್ತಿದೆ ಎಂದರು.

13 ಮಕ್ಕಳು ಇಲ್ಲಿಂದ ಐಐಟಿ ಪ್ರವೇಶಾವಕಾಶ ಪಡೆದಿದ್ದರೆ, 500 ಮಕ್ಕಳು ವದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ಅರ್ಹರಾಗಿದ್ದಾರೆ. ಜೆಇಇ ಮೇನ್ಸ್‌ನಲ್ಲಿ 161 ಮಕ್ಕಳು ವಿವಿಧ ಎನ್‌ಐಟಿಗಳಲ್ಲಿ ಪ್ರವೇಶ ಅರ್ಹತೆ ಹೊಂದಿದ್ದಾರೆಂದ ಡಾ. ದಾಕ್ಷಾಯಿಣಿ ಅವ್ವಾಜಿಯವರು ಎಸ್‌ಬಿಆರ್‌ ಬೋಧಕ ವೃಂದದ ಪರಿಶ್ರಮಕ್ಕೆ ಮೆಚ್ಚುಗೆ ಸೂಚಿಸಿದರು.

ಎಸ್ಬಿಆರ್‌ ಕಾಲೇಜಿನ ಡಾ. ಶ್ರೀಶೈಲ ಹೋಗಾಡೆ, ಹೇಮಂತ ಕುಮಾರ್‌, ಗುರುಲಿಂಗಯ್ಯ ಮಠಪತಿ, ವಿಷ್ವನಾಥ ಪಾಟೀಲ್‌, ಚಂದ್ರಕಾಂತ ಪಾಟೀಲ್‌, ಆದಿನಾಥ್‌, ಅಕೌಂಟ್ಸ್‌ ವಿಭಾಗದ ದತ್ತಾತ್ರೇಯ ಅವರಾದಿ, ಎಸ್‌ವೈ ಪಾಟೀಲ್‌ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ಸತ್ಕರಿಸಲಾಯ್ತು. ಉಪನ್ಯಾಸಕ ಚಂದ್ರಕಾಂತ ಪಾಟೀಲ್‌ ರೂಪಿಸಿದರು.

ನೀಟ್‌, ಜೆಇಇ, ಪಿಯುಸಿ ಟಾಪರ್‌ಗಳಿಗೆ ಸತ್ಕಾರ: ನೀಟ್‌ನಲ್ಲಿ ಕಲ್ಯಾಣ ನಾಡಿಗೇ ಟಾಪರ್‌ ಆಗಿರುವ ವಿನಯ ಕುಮಾರ್‌, 2 ನೇ ಟಾಪರ್‌ ಪಂಚಾಕ್ಷರಿ, ಜೆಇಇ ಅಡ್ವಾನ್ಸ್‌ನಲ್ಲಿ ಟಾಪರ್‌ ವಿನಯ ಕುಮಾರ್‌, ಶರಣರಾಜ್‌, ಪಿಯು ಬೋರ್ಡ್‌ ಪರೀಕ್ಷೆಯಲ್ಲಿ ಥಿಯರಿ ಟಾಪರ್‌ಗಳಾದ ಸಮರ್ಥ, ಬನಶಂಕರಿ ಇ‍ವರಿಗೆ ಹಾಗೂ ಇವರೆಲ್ಲರ ಪೋಷಕರಿಗೆ ದಾಸೋಹ ಮಹಮನೆಯಲ್ಲಿ ಡಾ. ಶರಣಬಸವಪ್ಪ ಪ್ಪಾಜಿ, ದಾಕ್ಷಾಯಿಣಿ ಅವ್ವಾಜಿ ಸೇರಿದಂತೆ ಎಲ್ಲರು ಸೇರಿ ಸತ್ಕರಿಸಿದರು. ಎಸ್‌ಬಿಆರ್‌ ನೀಟ್‌ ಟಾಪರ್‌ ವಿನಯ್‌ಗೆ 1 ಲಕ್ಷ ರು ನಗದು, ನೀಟ್‌ 2 ನೇ ಸ್ಥಾನದಲ್ಲಿರುವ ಪಂಚಾಕ್ಷರಿಗೆ 50 ಸಾವಿರ ರುಪಾಯಿ ನೀಡಿ ಶುಭ ಕೋರಲಾಯ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!