ಕುಲಾಂತರಿ ಬೀಜ ವಿರೋಧಿಸಿ ಸೆ.29 ರಂದು ತುಮಕೂರಿನ ದೊಡ್ಡಹೊಸೂರು ಚಲೋ

KannadaprabhaNewsNetwork | Published : Sep 25, 2024 12:52 AM

ಸಾರಾಂಶ

ಕುಲಾಂತರಿ ತಳಿಯ ಆಹಾರ ಸೇವನೆಯಿಂದ ಮನುಷ್ಯನ ದೇಹದ ಮೇಲೆ ಅಂಗವಿಕಲತೆ. ಪುರುಷತ್ವ ಕಳೆದುಕೊಳ್ಳುವುದು. ತಳಿಯ ಬಿತ್ತನೆಯಿಂದ ಭೂಮಿ ಫಲವತ್ತತೆ ಹಾಳಾಗುವುದು ಅಲ್ಲದೇ, ಪರಿಸರ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂದು ಸಭೆಯಲ್ಲಿ ಕುಲ ಅಂತರಿ ಸ್ಥಳಿಯ ಬಗ್ಗೆ ತೀವ್ರ ವಿರೋಧ ವ್ಯಕ್ತವಾಯಿತು.

ಕನ್ನಡಪ್ರಭ ವಾರ್ತೆ ಮದ್ದೂರು

ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕುಲಾಂತರಿ ಬೀಜ ವಿರೋಧಿಸಿ ಸೆ.29 ರಂದು ತುಮಕೂರು ಜಿಲ್ಲೆಯ ದೊಡ್ಡ ಹೊಸೂರು ಚಲೋ ನಡೆಸಲು ಮಂಗಳವಾರ ನಡೆದ ತಾಲೂಕು ರೈತ ಸಂಘದ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ಅಧ್ಯಕ್ಷ ಜಿ.ಕೆ.ರಾಮಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ರೈತ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಕುಲಾಂತರಿ ತಳಿ ಆಹಾರ ತಿರಸ್ಕರಿಸುವಂತೆ ಒತ್ತಾಯಿಸಿ ನೂರಾರು ಕಾರ್ಯಕರ್ತರು ದೊಡ್ಡ ಹೊಸೂರು ನಲ್ಲಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.

ಕುಲಾಂತರಿ ತಳಿಯ ಆಹಾರ ಸೇವನೆಯಿಂದ ಮನುಷ್ಯನ ದೇಹದ ಮೇಲೆ ಅಂಗವಿಕಲತೆ. ಪುರುಷತ್ವ ಕಳೆದುಕೊಳ್ಳುವುದು. ತಳಿಯ ಬಿತ್ತನೆಯಿಂದ ಭೂಮಿ ಫಲವತ್ತತೆ ಹಾಳಾಗುವುದು ಅಲ್ಲದೇ, ಪರಿಸರ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂದು ಸಭೆಯಲ್ಲಿ ಕುಲ ಅಂತರಿ ಸ್ಥಳಿಯ ಬಗ್ಗೆ ತೀವ್ರ ವಿರೋಧ ವ್ಯಕ್ತವಾಯಿತು.

ರೈತ ಚಳವಳಿ ಕೇವಲ ಕುಲಾಂತರಿ ತಳಿ ಆಹಾರ ಸೇವನೆಯಿಂದ ತಿರಸ್ಕರಿಸುವುದು ಮಾತ್ರವಲ್ಲದೆ ರೈತರ ಉಳಿವಿಗಾಗಿ ಹೋರಾಟ ಅನಿವಾರ್ಯವಾಗಿದೆ. ಸುಸ್ಥಿರ ಮತ್ತು ಸಮರ್ಥನೀಯವಾದ ಹಾಗೂ ಹವಾಮಾನ ವೈಪರೀತ್ಯ ಗಳಿಗೆ ಹೊಂದಿಕೊಳ್ಳುವ ಗುಣವುಳ್ಳ ಸಹಜ ಬೇಸಾಯ ಅಥವಾ ಸಾವಯವ ಕೃಷಿ ಪದ್ಧತಿ ಮೂಲಕ ನಮ್ಮ ಭವಿಷ್ಯವನ್ನು ಪಡೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಸಭೆಯಲ್ಲಿ ರೈತ ಮುಖಂಡರು ಸಲಹೆ ನೀಡಿದರು.

ಕುಲಾಂತರಿ ತಳಿಗಳ ವಿರೋಧದ ವಿಚಾರದಲ್ಲಿ ಪ್ರತಿಯೊಬ್ಬ ನಾಗರಿಕರು, ಜನಪ್ರತಿನಿಧಿಗಳು, ಬುದ್ಧಿಜೀವಿಗಳು. ಮಹಿಳಾ ಸಂಘಟನೆಗಳು, ಕಾರ್ಮಿಕರು, ಸಾವಯವ ಕೃಷಿಯ ಪ್ರತಿಪಾದಕರು, ವಿದ್ಯಾರ್ಥಿಗಳು ಈ ರೈತರ ಹೋರಾಟಕ್ಕೆ ಬೆಂಬಲ ನೀಡುವಂತೆ ಸಭೆಯಲ್ಲಿ ರೈತ ಮುಖಂಡರು ಮನವಿ ಮಾಡಿದರು.

ಸಭೆಯಲ್ಲಿ ರೈತ ಮುಖಂಡರಾದ ವರದರಾಜು, ಜಿ.ಎ.ಶಂಕರ, ಲಿಂಗಪ್ಪಾಜಿ, ವಳಗೆರೆಹಳ್ಳಿ ಉಮೇಶ, ವಿನೋದ್ ಬಾಬು, ಜಿ.ಕೆ. ರಾಮಕೃಷ್ಣ, ವೆಂಕಟೇಗೌಡ, ರವಿಕುಮಾರ್, ಸತೀಶ, ದಯಾನಂದ, ಬೋರಾಪುರ ಶಂಕರಗೌಡ, ವೆಂಕಟೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Share this article