ಬಂಟ್ವಾಳ: ಮೆಸ್ಕಾಂ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ವಿದ್ಯುತ್ ಮೀಟರ್ ರೀಡಿಂಗ್ ಕೆಲಸ ಮಾಡುವ ವ್ಯಕ್ತಿ ಮೇಲೆ ಸಾಕು ನಾಯಿ ದಾಳಿ ಮಾಡಿದ ಘಟನೆ ನಡೆದಿದ್ದು,ದಾಳಿಗೊಳಗಾದ ವ್ಯಕ್ತಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರು ತಾಲೂಕಿನ ಮೂಲೂರು ಇರಾ ನಿವಾಸಿ ಸಂಪತ್ ಎಂಬವರಿಗೆ ನಾಯಿ ದಾಳಿ ಮಾಡಿದೆ.
ಸೋಮವಾರ ಕೈತ್ರೋಡಿ ಎಂಬಲ್ಲಿ ಮನೆಯೊಂದರ ಮೀಟರ್ ರೀಡಿಂಗ್ ಮಾಡಿ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಬೈಕ್ ನ ಬಳಿ ತೆರಳುತ್ತಿದ್ದಂತೆ ಮನೆಯಂಗಳದಲ್ಲಿದ್ದ ನಾಯಿಯೊಂದು ಸಂಕೋಲೆಯನ್ನು ತುಂಡರಿಸಿದ ಬಂದು ದಾಳಿ ಮಾಡಿದೆ.
ಸಂಪತ್ ಅವರ ಬಲ ಕೈ ಹಾಗೂ ಕಾಲಿಗೆ ಬಲವಾದ ಗಾಯವಾಗಿದ್ದು,ಇಂದು ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.