ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ
ಜನ ಸೇವೆಯೇ ನನ್ನ ಮುಖ್ಯಗುರಿ. ನಾನು ಈ ಹಿಂದೆ ಸಂಸದನಾಗಿ ಈ ಭಾಗದ ಅಡಕೆ ಹಳದಿ ಎಲೆರೋಗ ಸೇರಿದಂತೆ ಪ್ರಮುಖ ಸಮಸ್ಯೆಗಳ ಬಗ್ಗೆ ಹೋರಾಡಿದ್ದೇನೆ. ಜನರ ಧ್ವನಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.
ತಾಲೂಕಿನ ಮರ್ಕಲ್ ಪಂಚಾಯಿತಿ ಯಡದಾಳು ಗ್ರಾಮದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು. ನಾನು ಯಾರದ್ದೋ ಹೆಸರು ಹೇಳಿ ಮತ ಕೇಳುವುದಿಲ್ಲ. ನನಗೆ ಮತ ನೀಡಿ, ಅಭಿವೃದ್ಧಿ ಕೆಲಸ ಮಾಡಲು ಮತನೀಡಿ. ನನ್ನ ಜನಸೇವೆ ನೋಡಿ ಮತ ನೀಡಿ ಎಂದು ತಿಳಿಸಿದರು.ಈಗಾಗಲೇ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ. ನಾನು ಅಭಿವೃದ್ಧಿಯ ರಾಜಕಾರಣ ಮಾಡುತ್ತೇನೆ. ಕ್ಷೇತ್ರದ ಅಭಿವೃದ್ಧಿ ನನಗೆ ಮುಖ್ಯ. ಸಂಸದನಾಗಿ ಕೆಲಸ ಮಾಡಲು ನನಗೆ ಅವಕಾಶ ಮಾಡಿ ಕೊಡಿ ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಸ್ಥಳೀಯ ಮುಖಂಡರಾದ ವೆಂಕಟೇಶ್, ಎಚ್.ಜಿ.ಪುಟ್ಟಪ್ಪ ಹೆಗ್ಡೆ ನಮ್ಮಾರ್, ತ್ರೀಮೂರ್ತಿ, ರಮೇಶ್ ಭಟ್, ಶಕಿಲಾ ಗುಂಡಪ್ಪ ಮತ್ತಿತರರು ಇದ್ದರು.