13ರಂದು ಡೋಲ್ಚೆ ಎಸ್ಥೆಟಿಕಾ ಮಂಗಳೂರು ಶಾಖೆ ಶುಭಾರಂಭ

KannadaprabhaNewsNetwork |  
Published : Aug 12, 2026, 03:15 AM IST
ಡೋಲ್ಚೆ ಎಸ್ಥೆಟಿಕಾ ಸಂಸ್ಥೆಯ ಸಂಸ್ಥಾಪಕ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವೈದ್ಯಕೀಯ ನಿರ್ದೇಶಕ ಡಾ.ಜೋಸೆಫ್‌ ಥಾಮಸ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು  | Kannada Prabha

ಸಾರಾಂಶ

ಆರೋಗ್ಯ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಚರಿಸುತ್ತಿರುವ ಡೋಲ್ಚೆ ಎಸ್ಥೆಟಿಕಾ ಆರೋಗ್ಯಕ್ಕೆ ಪೂರಕ ಚಿಕಿತ್ಸೆ ಹಾಗೂ ವೈದ್ಯಕೀಯ ಸೌಂದರ್ಯ ಚಿಕಿತ್ಸಾ ಸಂಸ್ಥೆಯ ಕರ್ನಾಟಕದ ಮೊದಲ ಶಾಖೆ ಮಂಗಳೂರಿನ ಏರ್‌ಪೋರ್ಟ್‌ ರಸ್ತೆಯ ಪದವಿನಂಗಡಿಯ ವಿಶ್ವಗೀತಾ ಕಾಂಪ್ಲೆಕ್ಸ್‌ನಲ್ಲಿ 13ರಂದು ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಸಂಸ್ಥಾಪಕ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವೈದ್ಯಕೀಯ ನಿರ್ದೇಶಕ ಡಾ.ಜೋಸೆಫ್‌ ಥಾಮಸ್‌ ತಿಳಿಸಿದರು.

ಮಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಚರಿಸುತ್ತಿರುವ ಡೋಲ್ಚೆ ಎಸ್ಥೆಟಿಕಾ ಆರೋಗ್ಯಕ್ಕೆ ಪೂರಕ ಚಿಕಿತ್ಸೆ ಹಾಗೂ ವೈದ್ಯಕೀಯ ಸೌಂದರ್ಯ ಚಿಕಿತ್ಸಾ ಸಂಸ್ಥೆಯ ಕರ್ನಾಟಕದ ಮೊದಲ ಶಾಖೆ ಮಂಗಳೂರಿನ ಏರ್‌ಪೋರ್ಟ್‌ ರಸ್ತೆಯ ಪದವಿನಂಗಡಿಯ ವಿಶ್ವಗೀತಾ ಕಾಂಪ್ಲೆಕ್ಸ್‌ನಲ್ಲಿ 13ರಂದು ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಸಂಸ್ಥಾಪಕ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವೈದ್ಯಕೀಯ ನಿರ್ದೇಶಕ ಡಾ.ಜೋಸೆಫ್‌ ಥಾಮಸ್‌ ತಿಳಿಸಿದರು.

ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 13ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಅಂದು ಡೋಲ್ಚೆ ಎಸ್ಥೆಟಿಕಾ ಮಂಗಳೂರು ಶಾಖೆಗೆ ಆಗಮಿಸಿದವರಿಗೆ ವಿಶೇಷ ಉದ್ಘಾಟನಾ ರಿಯಾಯಿತಿ ವೋಚರ್ಸ್‌ ಆಯ್ದ ಚಿಕಿತ್ಸೆಗಳ ಮೇಲಿರಲಿದೆ, ಶುಭಾರಂಭಕ್ಕೆ ಬರುವ ಮೊದಲ 100 ಮಂದಿಗೆ ಉಚಿತ ಎಐ ಫೇಸ್‌ ಅನಾಲೈಸರ್‌ ಪರೀಕ್ಷೆ ನಡೆಸಲಾಗುವುದು ಎಂದರು.

ಡೋಲ್ಚೆ ಎಸ್ಥೆಟಿಕಾ ಮೊದಲ ಹಂತದಲ್ಲಿ ದಕ್ಷಿಣ ಭಾರತದಲ್ಲಿ ತನ್ನ ಸೇವೆಗಳನ್ನು ವಿಸ್ತರಿಸುತ್ತಿದೆ. ಜನರು ಹೆಚ್ಚು ಆರೋಗ್ಯಕರವಾಗಿ, ಹೆಚ್ಚು ವರ್ಷಗಳ ಕಾಲ ಹಾಗೂ ಆತ್ಮವಿಶ್ವಾಸದಿಂದ ಬದುಕಲು ನೆರವಾಗುವುದು ಸಂಸ್ಥೆಯ ಧ್ಯೇಯ. ಆರೋಗ್ಯ ಸಮಸ್ಯೆಗಳು ಉಂಟಾಗುವ ಮೊದಲು ಅವುಗಳನ್ನು ತಡೆಯುವುದೇ ಅತ್ಯಂತ ಪರಿಣಾಮಕಾರಿ ಹಾಗೂ ಕೈಗೆಟಕುವ ಆರೋಗ್ಯ ಸೇವೆಯಾಗಿದೆ. ಈ ಕೇಂದ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಆರೋಗ್ಯ ಮೌಲ್ಯಮಾಪನ, ಡಿಜಿಟಲ್‌ ಆರೋಗ್ಯ ದಾಖಲೆಗಳು, ಅತ್ಯಾಧುನಿಕ ರೋಗ ನಿರ್ಣಯ ಸಾಧನಗಳು ಹಾಗೂ ವೈದ್ಯಕೀಯವಾಗಿ ಅಗತ್ಯವಿದ್ದಲ್ಲಿ ಜಿನೋಮಿಕ್‌ ವೈದ್ಯಕೀಯ ಸೇವೆಗಳು ಲಭ್ಯವಿದ್ದು, ಇವೆಲ್ಲವೂ ಪರಿಣಿತ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಲಿದೆ ಎಂದರು.

ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾರ್ಜ್‌ ಮ್ಯಾಥ್ಯೂ ಮಾತನಾಡಿ, ಚಿಕಿತ್ಸೆಯ ಗುಣಮಟ್ಟ ರೋಗಿಗಳ ಸುರಕ್ಷತೆ ಹಾಗೂ ಸಂಸ್ಥೆಯ ವೈದ್ಯಕೀಯ ಪ್ರೊಟೋಕಾಲ್‌ಗಳ ಸಮರ್ಪಕ ಅನುಷ್ಠಾನವನ್ನು ಖಚಿತಪಡಿಸಲು ಪ್ರತಿಯೊಂದು ಕೇಂದ್ರದ ಕಾರ್ಯನಿರ್ವಹಣೆ ಸಂಪೂರ್ಣವಾಗಿ ಡೋಲ್ಚೆ ಎಸ್ಥೆಟಿಕಾ ಸಂಸ್ಥೆಯ ಅಧೀನದಲ್ಲಿರುತ್ತದೆ ಎಂದರು.

ಸಂಸ್ಥೆಯ ಪ್ರಮುಖರಾದ ಜಿಜೋ ಮ್ಯಾಥ್ಯೂ, ಡಾ.ಅಕ್ಷತ್‌, ಭರತ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಥಣಿಯಿಂದ ಶ್ರೀಶೈಲಕ್ಕೆ ಬಸ್ ಸೇವೆಗೆ ಚಾಲನೆ
ಷಡ್ಯಂತ್ರಕ್ಕೆ ನಾಡಗೌಡರಿಗೆ ಮತ್ತೆ ಸಚಿವ ಸ್ಥಾನ ಬಲಿ!