ಕನ್ನಡಪ್ರಭ ವಾರ್ತೆ ಚಿಂತಾಮಣಿ
ಬೆಲೆಯ ಹೊರೆ ತಪ್ಪಿಸಲು ಬಳಕೆ: ೧೯ ಕೆಜಿ ತೂಕದ ಕರ್ಮಷಿಯಲ್ ಸಿಲಿಂಡರ್ ಬೆಲೆ ೧೮೩೭.೫೦ ರೂ ಆದರೆ ಗೃಹ ಬಳಕೆ ಸಿಲಿಂಡರ್ ಬೆಲೆ ೯೦೦ ರಿಂದ ೯೫೦ ರೂ.ಗಳಿಗೆ ಸಿಗುವುದರಿಂದ ಅಧಿಕ ಬೆಲೆತೆತ್ತು ಕಮರ್ಷಿಯಲ್ ಸಿಲಿಂಡರ್ ಖರೀಸುವುದು ಕಷ್ಟವೆಂದು ಹೊಟೇಲ್, ಟೀ ಸ್ಟಾಲ್, ಚಿಕನ್ ಸ್ಟಾಲ್, ಕಬಾಬ್, ಗೋಭಿ, ಪಾನಿಪೂರಿ ಸೆಂಟರ್‌ಗಳು ಸೇರಿದಂತೆ ಹಲವು ಕಡೆ ಕೆಂಪು ಸಿಲಿಂಡರ್‌ಗಳನ್ನೇ ಬಳಕೆ ಮಾಡಲಾಗುತ್ತಿದೆ.
ವಾಣಿಜ್ಯ ಸಿಲೆಂಡರ್ ಬದಲಿಗೆ ಗೃಹ ಬಳಕೆ ಸಿಲಿಂಡರ್ ಬಳಕೆ ಮಾಡಿದರೆ ಅಂತಹವರ ವಿರುದ್ಧ ದೂರು ದಾಖಲು ಮಾಡಲಾಗುವುದು. ಎರಡು ತಿಂಗಳ ಹಿಂದಷ್ಟೇ ನಗರದ ಕೆಲವು ಕಡೆ ಸೇರಿದಂತೆ ಮುರಗಮಲ್ಲ ಪ್ರವಾಸಿ ತಾಣದಲ್ಲಿ ಕೆಂಪು ಸಿಲಿಂಡರ್ ಬಳಕೆದಾರರ ವಿರುದ್ದ ದೂರು ದಾಖಲು ಮಾಡಿ ಎಚ್ಚರಿಕೆ ನೀಡಿದ್ದೇವೆಂದು ಅಧಿಕಾರಿಗಳು ಹೇಳುತ್ತಾರೆಯೇ ಹೊರತು ಕ್ರಮ ಕೈಗೊಳ್ಳುತ್ತಿಲ್ಲ.ನಿಯಮ ಉಲ್ಲಂಘಿಸಿದರೆ ಕ್ರಮನಗರ ಭಾಗದಲ್ಲಿ ಯಾವುದೇ ಹೋಟೆಲ್, ಅಂಗಡಿ ಮಳಿಗೆಗಳನ್ನು ತೆರೆಯಬೇಕಾದರೆ ನಗರಸಭೆ ವತಿಯಿಂದ ಪರವಾನಗಿಯನ್ನು ಪಡೆದಾಗ ಇಲಾಖೆ ನೀಡಿರುವ ನಿಯಮಗಳಲ್ಲಿ ಕಮರ್ಷಿಯಲ್ ಸಿಲಿಂಡರ್ ಬಳಕೆ ಮಾಡುವುದು ಕಡ್ಡಾಯ. ಒಂದು ವೇಳೆ ತಪ್ಪಿದರೆ ಪರವಾನಗಿ ರದ್ದು ಮಾಡುವ ಅಧಿಕಾರ ನಗರಸಭೆ ಅಧಿಕಾರಿಗಳಿಗೆ ಇರುತ್ತದೆಯಾದರೂ ವಾಣಿಜ್ಯ ಕೇಂದ್ರಗಳಲ್ಲಿ ಕೆಂಪು ಸಿಲಿಂಡರ್ ಬಳಕೆ ಮಾಡುತ್ತಿದ್ದರೂ ಅಧಿಕಾರಿಗಳು ಕಂಡು ಕಾಣದಂತೆ ನಡೆದುಕೊಳ್ಳುತ್ತಿದ್ದಾರೆ.