ಅಗ್ನಿ ಅವಘಡಕ್ಕೆ ಹೆದರದಿರಿ

KannadaprabhaNewsNetwork |  
Published : Apr 18, 2024, 02:19 AM IST
ಕೊಲ್ಹಾರ ತಾಲೂಕಿನ ಮಸೂತಿ ಗುರು ಸಂಗನಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಗ್ನಿ ಶಾಮಕ ಸಪ್ತಾಹದ ಅಂಗವಾಗಿ ಅಗ್ನಿ ಸುರಕ್ಷತೆ ಹಾಗೂ ಅಗ್ನಿ ಅವಘಡ ಮುಂಜಾಗೃತಾ ಅರಿವು ಕಾರ್ಯಕ್ರಮ ಜರುಗಿತು.ಮಕ್ಕಳಿಗೆ ಬೆಂಕಿ ನಂದಿಸುವ ಪ್ರಾಯೋಗಿಕ ಪ್ರಯೋಗವನ್ನು ಮಾಡಿಸುತ್ತೀರುವುದು. | Kannada Prabha

ಸಾರಾಂಶ

ಆಕಸ್ಮಿಕವಾಗಿ ಅಗ್ನಿ ಅವಘಡವಾದಾಗ ಭಯಪಡದೇ ನೀರು, ಗಿಡದ ತಪ್ಪಲು, ಮಣ್ಣು ಬಳಸಿ ಬೆಂಕಿ ನಂದಿಸಿ ಮುಂದಾಗುವ ಅನಾಹುತ ತಪ್ಪಿಸಬಹುದು ಎಂದು ಎನ್.ಟಿ.ಪಿ.ಸಿಯ ಸಿಐಎಸ್ಎಫ್ನ ಅಗ್ನಿಶಾಮಕ ದಳದ ಫೈರ್ ಹೆಡ್ ಕಾನ್ಸ್ಟೇಬಲ್ ಬಿನ್ನಾಳ ಈಶ್ವರ ತಿಳಿಸಿದರು

ಕೊಲ್ಹಾರ:

ಆಕಸ್ಮಿಕವಾಗಿ ಅಗ್ನಿ ಅವಘಡವಾದಾಗ ಭಯಪಡದೇ ನೀರು, ಗಿಡದ ತಪ್ಪಲು, ಮಣ್ಣು ಬಳಸಿ ಬೆಂಕಿ ನಂದಿಸಿ ಮುಂದಾಗುವ ಅನಾಹುತ ತಪ್ಪಿಸಬಹುದು ಎಂದು ಎನ್.ಟಿ.ಪಿ.ಸಿಯ ಸಿಐಎಸ್‌ಎಫ್‌ನ ಅಗ್ನಿಶಾಮಕ ದಳದ ಫೈರ್ ಹೆಡ್ ಕಾನ್‌ಸ್ಟೇಬಲ್ ಬಿನ್ನಾಳ ಈಶ್ವರ ತಿಳಿಸಿದರು.

ತಾಲೂಕಿನ ಮಸೂತಿಯಲ್ಲಿ ಗುರು ಸಂಗನಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಗ್ನಿ ಶಾಮಕ ಸಪ್ತಾಹದ ಅಂಗವಾಗಿ ಅಗ್ನಿ ಸುರಕ್ಷತೆ ಹಾಗೂ ಅಗ್ನಿ ಅವಘಡ ಮುಂಜಾಗ್ರತಾ ಅರಿವು ಕಾರ್ಯಕ್ರಮ ಉದ್ದೇಶಿಸಿ ಮಾಹಿತಿ ನೀಡಿದರು.

ಬೇಸಿಗೆ ರಜೆಯಲ್ಲಿರುವ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಅಣುಕು ಪ್ರದರ್ಶನ ಹಾಗೂ ಬೆಂಕಿ ನಂದಿಸುವ ಸಲಕರಣೆ ಬಳಸುವ ವಿಧಾನ, ಮನೆಯಲ್ಲಿ ಎಲ್ ಪಿ ಜಿ ಗ್ಯಾಸ್ ಸೋರಿಕೆ ಸಂದರ್ಭದಲ್ಲಿ ನಾವು ಕೈಗೊಳ್ಳುವ ಮುಂಜಾಗ್ರತಾ ಕ್ರಮದ ಕುರಿತು ವಿವರಿಸಿದರು.

ಶಿಕ್ಷಕ ಜಗದೀಶ ಸಾಲಳ್ಳಿ ಮಾತನಾಡಿ, ಅಗ್ನಿಶಾಮಕ ದಳದ ಸಿಬ್ಬಂದಿ ಆಕಸ್ಮಿಕವಾಗಿ ಸಂಭವಿಸುವ ಅಗ್ನಿ ಅನಾಹುತ ತಪ್ಪಿಸಲು ಜೀವದ ಹಂಗು ತೊರೆದು ನಮ್ಮೆಲ್ಲರ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಅವರ ಕಾರ್ಯ ಶ್ಲಾಘನೀಯ. ಜೊತೆಗೆ ಮಕ್ಕಳು ಹಾಗೂ ಜನರಲ್ಲಿ ಅರಿವು ಮೂಡಿಸುವುದರಿಂದ ಮುಂದಾಗುವ ಹೆಚ್ಚಿನ ಅನಾಹುತ ತಪ್ಪಿಸಬಹುದು. ಈ ಜಾಗೃತಿ ಮಕ್ಕಳಿಗೆ ಅಗತ್ಯವಾಗಿತ್ತು ಎಂದರು.

ಅಗ್ನಿಶಾಮಕ ದಳದ ಕಾನ್‌ಸ್ಟೇಬಲ್ ಆಯ್ ಪಿ ಮುತ್ತನ್ನವರ, ಸಿ ಎ ಗೂಗಿಹಾಳ, ಚಾಲೆಂಜ್‌ ಕೋಚಿಂಗ್ ಕ್ಲಾಸಿಸ್ ನ ಮಲ್ಲಿಕಾರ್ಜುನ ಪಾಟೀಲ ಮಕ್ಕಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಗೌರವಿಸಿ ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತರಕಾರಿಯಲ್ಲಿ ಹಾನಿಕಾರಕ ಅಂಶ ಪತ್ತೆ: ಶೀಘ್ರ ಸೂಕ್ತ ಮಾರ್ಗಸೂಚಿ
ಸಿಲಿಂಡರ್‌ಗೆ ಹಾಹಾಕಾರ: ಊಟ, ತಿಂಡಿ ಹರೋಹರ!