ಬಿಜೆಪಿ ಸುಳ್ಳು ಭರವಸೆಗಳಿಗೆ ಮೋಸ ಹೋಗದಿರಿ: ಆನಂದಸ್ವಾಮಿ ಗಡ್ಡದೇವರಮಠ

KannadaprabhaNewsNetwork |  
Published : Apr 08, 2024, 01:08 AM IST
ಕಾಂಗ್ರೆಸ್ | Kannada Prabha

ಸಾರಾಂಶ

ಹಾವೇರಿ-ಗದಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ. ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಯುವಕರು ಶಕ್ತಿಮೀರಿ ಪ್ರಯತ್ನ ಮಾಡುವುದು ಅಗತ್ಯವಾಗಿದೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಯುವಶಕ್ತಿಯ ಮುಂದೆ ಯಾವ ಶಕ್ತಿಯ ಆಟವೂ ನಡೆಯಲು ಸಾಧ್ಯವಿಲ್ಲ. ಬಿಜೆಪಿ ಮನೆಗೆ ಕಳುಹಿಸಲು ಯುವಶಕ್ತಿ ಸಿದ್ಧವಾಗಿದೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.

ಪಟ್ಟಣದ ಚೆನ್ನಮ್ಮನ ವನದಲ್ಲಿ ಶನಿವಾರ ಸಂಜೆ ನಡೆದ ಯುವ ಶಕ್ತಿ ಸಮಾವೇಶದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಮೋದಿ ಹವಾ ಇದೆ ಎನ್ನುವವರಿಗೆ ಯಶ್ ಅವರ ಡೈಲಾಗ್ ಹೇಳುವ ಮೂಲಕ ಆನಂದಸ್ವಾಮಿ ಗಡ್ಡದೇವರಮಠ ಬಿಜೆಪಿ ಅಭ್ಯರ್ಥಿಗೆ ಎಚ್ಚರಿಕೆ ನೀಡಿದರು.

ಹಾವೇರಿ-ಗದಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ. ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಯುವಕರು ಶಕ್ತಿಮೀರಿ ಪ್ರಯತ್ನ ಮಾಡುವುದು ಅಗತ್ಯವಾಗಿದೆ. ಯುವಕರು ಪ್ರತಿ ಮನೆ ಮನೆಗೆ ಹೋಗಿ ಮತದಾರರ ಮನವೊಲಿಸುವ ಕಾರ್ಯ ಮಾಡಬೇಕು. ಪಕ್ಷದ ಗ್ಯಾರಂಟಿಗಳ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸಿ ಮತವಾಗಿ ಪರಿವರ್ತನೆ ಮಾಡುವ ಕಾರ್ಯ ನಿಮ್ಮಿಂದ ಸಾಧ್ಯ. ತಮ್ಮೆಲ್ಲರ ಪ್ರೀತಿ-ವಿಶ್ವಾಸಕ್ಕೆ ಯಾವುದೇ ರೀತಿಯ ಕಪ್ಪುಚುಕ್ಕೆ ಬರದಂತೆ ನಡೆದುಕೊಳ್ಳುತ್ತೇನೆ. ಕಾಂಗ್ರೆಸ್ ಅತಿ ಹೆಚ್ಚು ಮತ ನೀಡಿ ನನ್ನನ್ನು ಗೆಲ್ಲಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಈ ವೇಳೆ ಕೃಷ್ಣಗೌಡ ಪಾಟೀಲ, ಶಾಕೀರ್ ಸನದಿ, ವಿವೇಕ, ಮಿಥುನಗೌಡ ಪಾಟೀಲ, ‌ಸಚಿನಗೌಡ ಪಾಟೀಲ, ಉದಯಗೌಡ ವೀರನಗೌಡರ, ದರ್ಶನ ಲಮಾಣಿ, ವಿಶಾಲ ಮಾನೆ ಮಾತನಾಡಿದರು.

ಸಮಾವೇಶದಲ್ಲಿ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಸುಜಾತಾ ದೊಡ್ಡಮನಿ, ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ, ಚನ್ನಪ್ಪ ಜಗಲಿ, ಶಿಗ್ಲಿಯ ರಾಮಣ್ಣ ಲಮಾಣಿ. ಜಿ.ಆರ್. ಕೊಪ್ಪದ, ಜಯಕ್ಕ ಕಳ್ಳಿ, ಜಯಮ್ಮ ಅಂದಲಗಿ, ಸುಮಿತ್ರಾ ಚೋಟಗಲ್ಲ, ಭಾಗ್ಯಶ್ರೀ ಬಾಬಣ್ಣ, ಅಂಬರೀಶ್ ತೆಂಬದಮನಿ, ಮಹೇಶ ಲಮಾಣಿ, ಲೋಕೇಶ ದೊಡ್ಡಮನಿ, ಮಹೇಶ ಹೊಗೆಸೊಪ್ಪಿನ, ಶಿವಯೋಗಿ ಗಡ್ಡದೇವರಮಠ, ಮಹೇಶ ಲಮಾಣಿ, (ಅಕ್ಕಿಗುಂದ), ಬಾಬಣ್ಣ ಅಳವಂಡಿ, ಮುಕ್ತಿಯಾರ್ ಅಹ್ಮದ್ ಗದಗ, ವಿಜಯಕುಮಾರ್ ಚಲವಾದಿ, ಸರ್ಫರಾಜ್ ಸೂರಣಗಿ, ನೀಲಪ್ಪ ಶೆರಸೂರಿ, ಅಫ್ಜಲ್ ರಿತ್ತಿ, ಮಂಜಪ್ಪ ಶೆರಸೂರಿ ಇದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ