ಕನ್ನಡಪ್ರಭ ವಾರ್ತೆ ಘಟಪ್ರಭಾಸುಳ್ಳು ಭರವಸೆಗಳಿಗೆ ಮೋಸ ಹೋಗಬೇಡಿ. ಶಾಶ್ವತವಾಗಿರುವ ರೈಲ್ವೆ, ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ನವೀಕರಣ ಗೊಂಡಂತಹ ರೈಲು ನಿಲ್ದಾಣಗಳು, ಬಡವರಿಗಾಗಿ ಆರೋಗ್ಯ ಭಾಗ್ಯ, ರೈತರಿಗೆ ವರ್ಷಕ್ಕೆ ₹6 ಸಾವಿರ ಹಣ ಇಂತಹ ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಿರುವ ಪ್ರಧಾನಿ ಮೋದಿಜಿಯವರ ಕೈ ಬಲಪಡಿಸಲು ಬಿಜೆಪಿಗೆ ಮತ ನೀಡಿ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಹೇಳಿದರು.
ಶಾಸಕ ರಮೇಶ ಜಾರಕಿಹೋಳಿ ಮಾತನಾಡಿ, ಚುನಾವಣೆ ಸಲುವಾಗಿ ಈ ತಿಂಗಳು ಹೆಣ್ಣು ಮಕ್ಕಳಿಗೆ ಎರಡೆರಡು ಬಾರಿ ಬ್ಯಾಂಕಿಗೆ ಹಣ ಜಮಾ ಮಾಡಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿಗಳು ಲೋಕಸಭಾ ಚುನಾವಣೆ ಬಳಿಕ ಬಂದ ಆಗುತ್ತವೆ. ಕಾರಣ ಗ್ಯಾರಂಟಿಗಳಿನ್ನು ನಂಬಬೇಡಿ ಎಂದು ಕೋರಿದರು.
ಜಿಲ್ಲಾ ಅಧ್ಯಕ್ಷ ಸುಭಾಸ ಪಾಟೀಲ, ಎಂ.ಎಲ್.ಮುತ್ತೆನ್ನವರ, ರಾಜು ಮುನ್ನೊಳಿ, ತಾಲೂಕು ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಸುರೇಶ ಕಾಡದವರ, ಈಶ್ವರ ಮಟಗಾರ, ರಾಮಣ್ಣ ಹುಕ್ಕೇರಿ, ಸುರೇಶ ಪಾಟೀಲ, ಜಿ.ಎಸ್.ರಜಪೂತ, ನಾಗಲಿಂಗ ಪೋತದಾರ, ಮಹಾಂತೇಶ ಹಳ್ಳಿ ಮುಂತಾವರು ಇದ್ದರು.