ಕನ್ನಡಪ್ರಭ ವಾರ್ತೆ ಗೌರಿಬಿದನೂರು
ದುಶ್ಚಟಕ್ಕೆ ಬಲಿಯಾಗಬೇಡಿ
ದುಶ್ಚಟಗಳ ವ್ಯಸನಕ್ಕೆ ಬಲಿಯಾದ ವ್ಯಕ್ತಿ ತನ್ನ ಜೀವನವನ್ನು ಹಾಳು ಮಾಡಿಕೊಳ್ಳುವುದರ ಜೊತೆಗೆ ಆತನ ಕುಟುಂಬವೂ ನಾಶವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾದಕ ವಸ್ತುಗಳ ಮಾರಾಟ. ಸೇವನೆ ಕಂಡು ಬಂದರೆ ಸಂಬಂಧಿಸಿದ ಇಲಾಖೆ ಮಾಹಿತಿ ನೀಡುವಂತೆ ತಿಳಿಸಿದರು. ತಾಲೂಕಿನ ಅಬಕಾರಿ ಇಲಾಖೆ ಇನ್ಸ್‌ಪೆಕ್ಟರ್ ಮಂಜುನಾಥ್ ಮಾತನಾಡಿ, ಮಾದಕ ವಸ್ತುಗಳನ್ನು ಅಕ್ರಮವಾಗಿ ಕಳ್ಳಸಾಗಣಿಕೆಯಲ್ಲಿ ಮಾರಾಟದ ದಂಧೆಯಲ್ಲಿ ಸಿಕ್ಕಿ ಬಿದ್ದರೆ ಅಂತಹ ವ್ಯಕ್ತಿಗಳಿಗೆ ಗರಿಷ್ಠ 20 ವರ್ಷಗಳ ಕಾಲ ಕಠಿಣ ಶಿಕ್ಷೆಯಿದೆ. ಕ್ಷಣಿಕ ಸಂತೋಷಕ್ಕಾಗಿ ತಮ್ಮ ಅತ್ಯಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ಇತರರಿಗೆ ನೀವು ಆದರ್ಶ ವ್ಯಕ್ತಿಗಳಾಗಿ ಮಾದರಿಯಾಗಬೇಕು ಎಂದು ಕಿವಿಮಾತು ಹೇಳಿದರು. ಗುರಿ ಸಾಧನೆಗೆ ಶ್ರಮಿಸಿಪ್ರಾಂಶುಪಾಲ ಟಿ.ಜಯರಾಮ ಮತನಾಡಿ ವಿದ್ಯಾರ್ಥಿಗಳು ಚೆಂಚಲ ಮನಸ್ಸುನ್ನು ನಿಯಂತ್ರಣದಲ್ಲಿರಿಸಿ ಓದಿನ ಕಡೆಗೆ ಹೆಚ್ಚಿನ ಗಮನ ನೀಡುವ ಮೂಲಕ ಉತ್ತಮ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬೇಕು. ತಮ್ಮ ಗುರಿಯನ್ನು ಸಾಧಿಸಬೇಕಾದರೆ ಹೆಚ್ಚಿನ ಶ್ರಮ ಸಾಧನೆ ಮುಖ್ಯ ಎಂದರು. ಅಬಕಾರಿ ಇಲಾಖೆ ಇನ್ಸಪೆಕ್ಟರ್ ವಿನೋದ್ ಕುಮಾರ್.ಉಪ ಪ್ರಾಂಶುಪಾಲ ಟಿ.ನಂಜುಂಡಪ್ಪ.ಉಪನ್ಯಾಸಕರಾದ ವೇಣುಗೋಪಾಲ್.ವಿಜಯ್ ಕುಮಾರ್ ಮದ್ದಿಲೇಟಿ. ಶ್ರೀ ವಿದ್ಯಾ.ರೋಜಮ್ಮ.ಜಗದಾಂಭ.ಸಿದ್ದಯ ಹಾಗೂ ಅಬಕಾರಿ ಇಲಾಖೆ ಸಿಬ್ಬಂದಿ ಹಾಜರಿದ್ದರು.