ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಸ್ಯಾಂಡಲ್ ಸೋಪು ಬೇರೆ ಸೋಪುಗಳಂತಲ್ಲ. ಆ ಸೋಪಿನಲ್ಲಿ ನಾಡಿನ ಪರಂಪರೆಯಿದೆ, ಸಂಸ್ಕೃತಿಯಿದೆ, ಪರಿಸರವಿದೆ, ಕನ್ನಡದ ಕಂಪಿದೆ, ಪರಿಮಳವಿದೆ. ಇಂತಹ ಹಿರಿಮೆಯುಳ್ಳ, ಸಾಂಸ್ಕೃತಿಕವಾಗಿ, ಪಾರಂಪರಿಕವಾಗಿ ಗತವೈಭವ ಹೊಂದಿರುವ ಶತಮಾನದ ಸೋಪನ್ನು ಬೇರೆ ಸೋಪುಗಳಂತೆ ಪರಿಗಣಿಸಿರುವುದೇ ಒಂದು ಅಪರಾಧ. ಅದರ ಜತೆಗೆ ನಟಿಯನ್ನು ರಾಯಭಾರಿಯಾಗಿ ನೇಮಿಸಿ 6.20 ಕೋಟಿ ರು. ಸಂಭಾವನೆ ನೀಡಿ ದುಂದು ವೆಚ್ಚಕ್ಕೆ ನಾಂದಿ ಹಾಡಿರುವುದು ಮಹಾಪರಾಧ.
ಇಷ್ಟಕ್ಕೂ ರಾಯಭಾರಿ ನೇಮಿಸಿರುವ ಸರ್ಕಾರದ ಉದ್ದೇಶವಾದರೂ ಏನು. ಮೈಸೂರು ಸ್ಯಾಂಡಲ್ ಸೋಪು ಬಳಸಿದರೆ ತಮನ್ನಾ ಅವರಂತಾಗುತ್ತಾರೇ ಎಂತಲೋ? ಇಲ್ಲ ಅವರಂತಹ ಮೈಬಣ್ಣ ಹೊಂದುತ್ತಾರೆ ಎಂತಲೋ? ಈ ಬಗ್ಗೆ ಸರ್ಕಾರ ಮೊದಲು ಸ್ಪಷ್ಟ್ಟಪಡಿಸಬೇಕು ಎಂದು ಅವರು ತಿಳಿಸಿದ್ದಾರೆ.ನೆಲಮೂಲ ಸಂಸ್ಕೃತಿಗೆ ಧಕ್ಕೆ ಬೇಡ:
ಪ್ರಚಾರವೇ ಮುಖ್ಯ ಉದ್ದೇಶವಾದರೆ ಪ್ರಸ್ತುತ ದೇಶದ ಈಗಲೂ ಕಾಲಮಿಂಚಿಲ್ಲ ರಾಯಭಾರಿಯನ್ನು ಸರ್ಕಾರ ಬದಲಾಯಿಸಲಿ. ಮುಂದಿನ ದಿನಗಳಲ್ಲಿ ಸೋಪಿನ ಪರಂಪರೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿ. ಅದನ್ನು ಬಿಟ್ಟು ಜನರ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುವುದು ಸರಿಯಲ್ಲ. ಪ್ರಚಾರ ತಂತ್ರ, ಮಾರುಕಟ್ಟೆ ವಿಸ್ತರಣೆ ಎಲ್ಲವೂ ಸರಿ. ಆದರೆ, ಸೋಪಿನ ಪರಂಪರೆಗೆ ಧಕ್ಕೆ ಬರದ ರೀತಿ ನೋಡಿಕೊಳ್ಳೂವುದು ಮೊದಲ ಆದ್ಯತೆಯಾಗಬೇಕು. ಈ ವಿಚಾರದಲ್ಲಿ ಸರಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.