ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಸಾಗರ ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಸದಾನಂದ ಸ್ವಾಮಿ ತಿಳಿಸಿದ್ದಾರೆ.
ಮಕ್ಕಳಿಗೆ ಕಿವಿಮಾತು ।
ಬಿಇಒ ಸದಾನಂದ ಸ್ವಾಮಿ ಅಭಿಮತ । ವಿದ್ಯಾರ್ಥಿಗಳ ಜತೆ ಪರೀಕ್ಷೆ ಬಗ್ಗೆ ಚರ್ಚೆ । ಸಾಧನೆ ಕುರಿತು ಮಾರ್ಗದರ್ಶನ ಕನ್ನಡಪ್ರಭ ವಾರ್ತೆ ಆನಂದಪುರಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಸಾಗರ ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಸದಾನಂದ ಸ್ವಾಮಿ ತಿಳಿಸಿದರು.
ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಾಧನೆ ಬಗ್ಗೆ ಮಾರ್ಗದರ್ಶನ ನೀಡಿ ಮಾತನಾಡಿ, ನಿರಂತರ ಪರಿಶ್ರಮದಿಂದ ಹೆಚ್ಚು ಬರವಣಿಗೆಯ ಮೂಲಕ ಕಲಿಕೆಯನ್ನು ದೃಢಪಡಿಸಲು ಸಾಧ್ಯವಾಗುತ್ತದೆ ಎಂದರು.ಪರಿಶ್ರಮವಿಲ್ಲದೆ ಯಾವುದೇ ಪ್ರತಿಫಲವನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ತಮಗೆ ದೊರಕಿರುವಂತಹ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಮೊದಲ ಹಂತದಲ್ಲಿಯೇ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗ ಬೇಕು. ಇದಕ್ಕೆ ಬೇಕಾಗಿರುವ ಸಂಪೂರ್ಣ ಮಾರ್ಗದರ್ಶನವನ್ನು ಶಿಕ್ಷಕರು ಪೋಷಕರು ನೀಡಬೇಕಾಗಿದೆ ಎಂದು ಹೇಳಿದರು.
ಕಲಿಕೆಗೆ ಪೂರಕವಾದ ಪರಿಸರ ತುಂಬಾ ಅಗತ್ಯವಾಗಿದೆ ಯಶಸ್ವಿಯಾಗಲು ಒಂದೊಂದು ಅಂಕವು ಸಹ ಅದಕ್ಕೆ ಅವಶ್ಯಕತೆವಾಗಿದೆ ಎಂದರು. ಅಲ್ಲದೆ ಈ ಬಾರಿ ರಾಜ್ಯದಲ್ಲಿ ರ‍್ಯಾಂಕಿಂಗ್ ಪಡೆದ 3 ವಿದ್ಯಾರ್ಥಿಗಳಿಗೆ ತಲಾ 50,000 ನಗುದು ನೀಡಲಾಗುತ್ತದೆ. ಹಾಗೆ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕಗಳಿಸಿದ ತಲಾ 3 ವಿದ್ಯಾರ್ಥಿಗಳಿಗೂ 50,000 ನಗುವ ಹಣವನ್ನು ನೀಡಲಾಗುತ್ತದೆ. ಇಂತಹ ಉತ್ತಮವಾದ ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಶಿಕ್ಷಣದಲ್ಲಿ ಸಾಧನೆ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ತಾಲೂಕು ನೋಡಲ್ ಅಧಿಕಾರಿ ಡಾ. ಶಂಕರ್ ಶಾಸ್ತ್ರಿ ಮಾತನಾಡಿ, ಕಲಿಕೆಯ ಸರಳ ವಿಧಾನಗಳನ್ನು ತಿಳಿದುಕೊಳ್ಳುವ ಮೂಲಕ, ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳನ್ನು ಪಡೆಯುವ ಕಲಿಯುವ ಹಂತಗಳನ್ನು ರೂಡಿಸಿಕೊಳ್ಳಬೇಕಾಗಿದೆ. ಒತ್ತಡ ರಹಿತ ಪರೀಕ್ಷೆಯನ್ನು ಎದುರಿಸುವ ಗಟ್ಟಿ ಮನಸ್ಸು ಬೆಳೆಸಿಕೊಳ್ಳಬೇಕಾಗಿದೆ. ಪರೀಕ್ಷೆ ಎಂದಾಕ್ಷಣ ಯಾವ ವಿದ್ಯಾರ್ಥಿಯು ಹೆದರಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲರಾದ ಈಶ್ವರಪ್ಪ ಶಿಕ್ಷಣ ಸಂಯೋಜಕರಾದ ವಿ.ಟಿ.ಸ್ವಾಮಿ ಮೊದಲಾದವರು ಹಾಜರಿದ್ದರು. ಫೋಟೋ 4 ಎ, ಎನ್, ಪಿ 1ಆನಂದಪುರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗ್ಗೆ ಸಾಗರ ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಸದಾನಂದ ಸ್ವಾಮಿ ಮಾಹಿತಿ ನೀಡಿದರು.