ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜವು ಒಂದು ಮನೆ ಇದ್ದಂತೆ. ಅದನ್ನು ಒಡೆಯುವ ಕೆಲಸ ಯಾರೂ ಮಾಡಬಾರದು. ಸಮಾಜವನ್ನು ಒಟ್ಟಾಗಿಸಿಕೊಂಡು ಹೋಗಬೇಕು ಎಂದರು.
ವೀರಶೈವ ಮತ್ತು ಲಿಂಗಾಯತ ಎರಡು ಬೇರೆ- ಬೇರೆ ಎಂಬ ಅರ್ಥದಲ್ಲಿ ಬಿಂಬಿಸಲಾಗುತ್ತಿತ್ತು. ಎಲ್ಲರೂ ಸೇರಿ ಸ್ವತಂತ್ರ ಧರ್ಮದ ಬಗ್ಗೆ ಹೋರಾಟ ಮಾಡಿ ಅಂತಾ ನಾನು ಹೇಳಿದ್ದೇ. ವೀರಶೈವ ಮಹಾಸಭಾ ಲೀಡ್ ತೆಗೆದುಕೊಳ್ಳಬೇಕು. ಸಮಾಜದಲ್ಲಿ ಒಡಕು ಉಂಟಾಗುವುದು ಬೇಡ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದರು.ದಾವಣಗೆರೆ ಸಮಾವೇಶದಲ್ಲಿ ಕೆಲ ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಅದರಂತೆ ವೀರಶೈವ ಲಿಂಗಾಯತರ ಬೇಡಿಕೆಗಳಿಗಾಗಿ ಒಗ್ಗಟ್ಟು ಪ್ರದರ್ಶಿಸಲಾಗಿದೆ ಎಂದರು.