ರೈತರ ಬಗ್ಗೆ ಅನುಕಂಪದ ಮಾತು ಬೇಡ ಸೌಲಭ್ಯ ನೀಡಿ

KannadaprabhaNewsNetwork |  
Published : Aug 04, 2024, 01:27 AM IST
ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಡಿಡಿಯು ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಮಾಜಿಕ ಚಳುವಳಿಯ ವಿಚಾರ ಸಂಕಿರಣವನ್ನು ದ್ವೀತಿಯ ಪಿಯುಸಿ ಕಲಾ ವಿಭಾಗದ ಪ್ರತಿನಿಧಿ ಪಲ್ಲವಿ ದೌಲತ್ ಹಾಗೂ ವಿದ್ಯಾರ್ಥಿಗಳು ಉದ್ಘಾಟನೆ ಮಾಡಿದರು. | Kannada Prabha

ಸಾರಾಂಶ

ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಡಿಡಿಯು ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಮಾಜಿಕ ಚಳುವಳಿಯ ವಿಚಾರ ಸಂಕಿರಣದಲ್ಲಿ ವಿದ್ಯಾರ್ಥಿನಿ ಪಲ್ಲವಿ ದೌಲತ್ ಮಾತನಾಡಿದಳು.

ಸಾಮಾಜಿಕ ವಿಚಾರ ಸಂಕೀರ್ಣದಲ್ಲಿ ವಿದ್ಯಾರ್ಥಿನಿ ಪಲ್ಲವಿ ಕೋರಿಕೆಕನ್ನಡಪ್ರಭ ವಾರ್ತೆ ಶಹಾಪುರ

ದೇಶದ ಬೆನ್ನೆಲುಬಾದ ರೈತರಿಗೆ ಸೌಲಭ್ಯಗಳು ನ್ಯಾಯಯುತವಾಗಿ ದೊರಕುತ್ತಿಲ್ಲ. ರೈತರ ಬಗ್ಗೆ ಅನುಕಂಪದ ಮಾತು ಬೇಡ ಸೌಲಭ್ಯ ನೀಡಲು ಮುಂದಾಗಬೇಕು ಎಂದು ದ್ವೀತಿಯ ಪಿಯುಸಿ ಕಲಾ ವಿಭಾಗದ ಪ್ರತಿನಿಧಿ ಪಲ್ಲವಿ ದೌಲತ್ ಹೇಳಿದರು.

ತಾಲೂಕಿನ ದೋರನಹಳ್ಳಿ ಗ್ರಾಮದ ಡಿಡಿಯು ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಮಾಜಿಕ ಚಳುವಳಿಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಭೂಮಿ ಮತ್ತು ರೈತರು ನಮ್ಮ ರಾಷ್ಟ್ರದ ಆತ್ಮವಿದ್ದಂತೆ. ನಮಗೆಲ್ಲರಿಗೂ ತಿಳಿದಿರುವಂತೆ, ಆತ್ಮವಿಲ್ಲದೆ ಜೀವನ ಅಸಾಧ್ಯ. ದೇಶದಲ್ಲಿ ರೈತರ ಪರಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲ. ವಿವಿಧ ಯೋಜನೆಗಳಿಗೆ ಪ್ರಾಮುಖ್ಯತೆ ಕೊಡುವಂತೆ ಸರ್ಕಾರ ರೈತರಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುವ ಮೂಲಕ ಅವರ ಆರ್ಥಿಕ ಸುಧಾರಣೆ ಮುಂದಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.

ದೇವಮ್ಮ ಕಾಡಂಗೇರಾ ಮಾತನಾಡಿ, ರೈತರು ದೇಶದ ಆಧಾರ ಸ್ತಂಭಗಳು. ಅವರು ತಮ್ಮ ಜೀವನದುದ್ದಕ್ಕೂ ರಾಷ್ಟ್ರದಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಆಹಾರ ಪದಾರ್ಥಗಳನ್ನು ಪೂರೈಸಲು ಶ್ರಮಿಸುತ್ತಾರೆ. ಇಡೀ ರಾಷ್ಟ್ರದ ಬದುಕು ರೈತರ ಮೇಲೆ ಅವಲಂಬಿತವಾಗಿದೆ ಎಂದರು.

ಮುಂಗಾರು ವಿಫಲವಾದಾಗ, ಅತಿವೃಷ್ಟಿ ಉಂಟಾದಾಗ ರೈತಾಪಿ ವರ್ಗದವರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇಂತಹ ಸಂದರ್ಭದಲ್ಲಿ ಸರಕಾರ ರೈತಾಪಿ ವರ್ಗಕ್ಕೆ ಸರಕಾರ ಪರಿಹಾರ ಒದುಗಿಸುವಲ್ಲಿ ಮುಂದಾಗಬೇಕು ಎಂದು ವಿಚಾರ ಮಂಡಿಸಿದರು.

ಕಾರ್ಮಿಕ ಚಳುವಳಿಯ ಕುರಿತು ದೇವಿಂದ್ರಪ್ಪ ಖಾನಾಪುರ, ಮಹಿಳಾ ಚಳುವಳಿಯ ಕುರಿತು ಭಾಗ್ಯ ಹಣಮಂತ ಕರಣಗಿ, ದಲಿತ ಚಳುವಳಿಯ ಕುರಿತು ರಘು ರಾಮಪ್ಪ ತಂಗಡಗಿ, ಹಿಂದುಳಿದ ವರ್ಗಗಳ ಚಳುವಳಿಯ ಕುರಿತು ಮಹಿಬೂಬ ಕರಣಗಿ, ಪರಿಸರ ಚಳುವಳಿ ಕುರಿತು ಪದ್ಮಾವತಿ, ಮಾನವ ಹಕ್ಕುಗಳು ಕುರಿತು ಸಿದ್ಧಾರೂಢ, ಸುನೀಲ್ ಮುಂತಾದ ವಿದ್ಯಾರ್ಥಿಗಳು ವಿವಿಧ ಚಳುವಳಿಗಳ ವಿಷಯ ಮಂಡನೆ ಮಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಹಾಗೂ ಉಪನ್ಯಾಸಕರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...