ರೈತರನ್ನು ತಾಲೂಕು ಕಚೇರಿಗೆ ಅಲೆಸಬೇಡಿ: ಜಿಲ್ಲಾಧಿಕಾರಿ

KannadaprabhaNewsNetwork |  
Published : Dec 13, 2025, 01:30 AM IST
ಕೆ ಕೆ ಪಿ ಸುದ್ದಿ 01:ಜಿಲ್ಲಾಧಿಕಾರಿ ಯಶವಂತ್ ವಿ. ಗುರಿಕಾರ್ ಗ್ರಾಮ ಗಳಿಗೆ ಭೇಟಿ ನೀಡಿ ಪೌತಿ ಖಾತೆ ಬಗ್ಗೆ ಜಾಗೃತಿ ಮೂಡಿಸಿದರು.  | Kannada Prabha

ಸಾರಾಂಶ

ಕಂದಾಯ ಇಲಾಖೆ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಮನೆಮನೆಗೆ ತೆರಳಿ ಪೌತಿ ಖಾತೆ ಮಾಡಿಸಲು ಜಾಗೃತಿ ಮೂಡಿಸಿ ಅವರಿಗೆ ಸಕಾಲಕ್ಕೆ ಖಾತೆಗಳನ್ನು ಮಾಡಿಕೊಡಬೇಕು.

ಕನ್ನಡಪ್ರಭ ವಾರ್ತೆ ಕನಕಪುರ

ಪೌತಿ ಖಾತೆ ಆಂದೋಲನಕ್ಕೆ ರೈತರಿಂದ ಅರ್ಜಿಗಳನ್ನು ಪಡೆದು ಸಕಾಲಕ್ಕೆ ಮಾಡಿಕೊಟ್ಟು, ರೈತರನ್ನು ತಾಲೂಕು ಕಚೇರಿಗೆ ದಿನನಿತ್ಯ ಅಲೆದಾಡಿಸಬಾರದೆಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಯಶ್ವಂತ್ ವಿ.ಗುರಿಕಾರ್ ಸೂಚನೆ ನೀಡಿದರು.

ಗುರುವಾರ ತಾಲೂಕಿನ ಕಸಬಾ ಹೋಬಳಿ ತುಂಗಣಿ ಗ್ರಾಮದಲ್ಲಿ ರೈತರ ಮನೆಗಳಿಗೆ ಧೀಡೀರ್ ಭೇಟಿ ನೀಡಿ ರೈತರು ಪೌತಿ ಖಾತೆಗೆ ಅರ್ಜಿ ಸಲ್ಲಿಸಿ ತಮ್ಮ ಪೌತಿ ಖಾತೆಯನ್ನು ಜರೂರಾಗಿ ಮಾಡಿಸಿಕೊಳ್ಳಬೇಕೆಂದು ಜನರಲ್ಲಿ ಜಾಗೃತಿ ಮೂಡಿಸಿದರು.

ಪಂಚಾಯಿತಿ ಕಚೇರಿಗೆ ಭೇಟಿ ನೀಡಿ, ಪೌತಿಖಾತೆ ಆಂದೋಲನದ ನೋಂದಣಿ ಕಾರ್ಯದ ಮಾಹಿತಿಯನ್ನು ಪಡೆದು ಗ್ರಾಮಗಳಲ್ಲಿ ಹಲವು ಪ್ರಕರಣದಲ್ಲಿ ಜಮೀನಿನ ಖಾತೆಗಳನ್ನು ಇನ್ನು ನಿಧನಗೊಂಡಿರುವ ವ್ಯಕ್ತಿಗಳ ಹೆಸರಿನಲ್ಲಿಯೇ ಇರುವ ಕಾರಣ ಪೌತಿ ಖಾತೆ ಅಭಿಯಾನದ ಮೂಲಕ ವಾರಸುದಾರರ ನೋದಣಿ ಮಾಡುವ ಕಾರ್ಯಕ್ಕೆ ಸರ್ಕಾರ ಚಾಲನೆ ನೀಡಿದೆ. ಈ ಕಾರ್ಯವು ನಿರೀಕ್ಷಿತ ಮಟ್ಟದಲ್ಲಿ ಜಾರಿಯಾಗುತ್ತಿಲ್ಲ.

ಹೀಗಾಗಿ ಕಂದಾಯ ಇಲಾಖೆ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಮನೆಮನೆಗೆ ತೆರಳಿ ಪೌತಿ ಖಾತೆ ಮಾಡಿಸಲು ಜಾಗೃತಿ ಮೂಡಿಸಿ ಅವರಿಗೆ ಸಕಾಲಕ್ಕೆ ಖಾತೆಗಳನ್ನು ಮಾಡಿಕೊಡಬೇಕು, ಸಾರ್ವಜನಿಕರನ್ನು ತಾಲೂಕು ಕಚೇರಿಗೆ ಅಲೆಸಬಾರದು ಕಾಲಮಿತಿಯೊಳಗೆ ಲಾಯಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ರೈತರನ್ನು ಕರೆಸಿ ಪೌತಿ ಖಾತೆ ಮಾಡಬೇಕು. ಆಧಾರ್ ಕಾರ್ಡ್, ವಂಶವೃಕ್ಷ, ರೇಷನ್ ಕಾರ್ಡ್, ಮರಣ ಪ್ರಮಾಣಪತ್ರ ಪಡೆದು ತ್ವರಿತವಾಗಿ ಮಾಡಿಕೊಡಬೇಕು, ಬೇರೆಬೇರೆ ದಾಖಲಾತಿಗಳನ್ನು ಮುಂದಿಟ್ಟುಕೊಂಡು ಅವರನ್ನು ಅಲೆಸಬೇಡಿ ಎಂದು ಎಚ್ಚರಿಸಿದರು.

ತಹಸೀಲ್ದಾರ್ ಸಂಜಯ್, ಗ್ರಾಮಾಡಳಿತ ಅಧಿಕಾರಿ ಶಿವರುದ್ರಯ್ಯ, ಪಿ.ಡಿ.ಒ ಮುನಿಯಪ್ಪ ಸೇರಿದಂತೆ ಹಲವರು ಹಾಜರಿದ್ದರು.

ಕೆ ಕೆ ಪಿ ಸುದ್ದಿ 01: ಜಿಲ್ಲಾಧಿಕಾರಿ ಯಶವಂತ್ ವಿ ಗುರಿಕಾರ್ ಗ್ರಾಮ ಗಳಿಗೆ ಭೇಟಿ ನೀಡಿ ಪೌತಿ ಖಾತೆ ಬಗ್ಗೆ ಜಾಗೃತಿ ಮೂಡಿಸಿರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ