ಸಂತ್ರಸ್ತ ಕುಟುಂಬಕ್ಕೆ ಸಾಂತ್ವನದ ಮಾತು ಬೇಡ ಶೀಘ್ರ ಪರಿಹಾರ ಕೊಡಿ

KannadaprabhaNewsNetwork |  
Published : Jun 15, 2024, 01:01 AM IST
ಸುದ್ದಿಗೋಷ್ಠಿ ಯಲ್ಲಿ ಕಲ್ಮಟ್ ಮಾತನಾಡಿದರು. | Kannada Prabha

ಸಾರಾಂಶ

ಚಿತ್ರರಂಗದಲ್ಲಿ ಹೆಸರು ಮಾಡಿ ಯುವಕರಿಗೆ ಮಾದರಿಯಾಗಬೇಕಿದ್ದ ದರ್ಶನ್ ಮನುಷ್ಯತ್ವ ಮರೆತು ವ್ಯಕ್ತಿ ಕೊಲೆ ಮಾಡಿರುವುದು ಅತ್ಯಂತ ಖಂಡನೀಯ

ಹೊಸದುರ್ಗ: ಚಿತ್ರ ನಟ ದರ್ಶನ್ ಗ್ಯಾಂಗ್‌ನಿಂದ ಹತ್ಯೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಕುಟುಂಬಕ್ಕೆ ಸರ್ಕಾರ ಸಾಂತ್ವನ ಹೇಳುವ ಬದಲು ಪರಿಹಾರ ಕೊಡಲಿ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಕಾರ್ಯದರ್ಶಿ ಕೆ ಎಸ್ ಕಲ್ಮಠ್ ಸರ್ಕಾರವನ್ನು ಒತ್ತಾಯಿಸಿದರು.

ಪಟ್ಟಣದ ಗುರು ಒಪ್ಪತ್ತಿನಸ್ವಾಮಿ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಚಿತ್ರರಂಗದಲ್ಲಿ ಹೆಸರು ಮಾಡಿ ಯುವಕರಿಗೆ ಮಾದರಿಯಾಗಬೇಕಿದ್ದ ದರ್ಶನ್ ಮನುಷ್ಯತ್ವ ಮರೆತು ವ್ಯಕ್ತಿ ಕೊಲೆ ಮಾಡಿರುವುದು ಅತ್ಯಂತ ಖಂಡನೀಯ ಎಂದರು.

ಚಿತ್ರರಂಗದ ಪ್ರಸಿದ್ಧ ನಟನೋರ್ವ ಇಂತಹ ಹೇಯ ಕೃತ್ಯ ಎಸಗಿದ್ದರು ಚಿತ್ರರಂಗ ಇದನ್ನು ಖಂಡಿಸದಿರುವುದು ವಿಷಾದನೀಯ. ಕೊಲೆ ಆರೋಪಿ ಚಿತ್ರರಂಗದ ವ್ಯಕ್ತಿಯಾಗಿರುವುದರಿಂದ ಚಿತ್ರರಂಗ ಸಂತ್ರಸ್ತ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಆರೋಪಿ ಗಣ್ಯ ವ್ಯಕ್ತಿ ಎಂದು ರಾಜಾತಿಥ್ಯ ನೀಡುತ್ತಿವೆ. ತನಿಖೆ ನೆಪದಲ್ಲಿ ಪ್ರಕರಣದ ದಾರಿ ತಪ್ಪಿಸಿ ಆರೋಪಿತರನ್ನು ಬಿಡುಗಡೆಗೊಳಿಸದೆ ವಿಶೇಷ ನ್ಯಾಯಾಲಯ ರಚಿಸಿ ಆರೋಪಿತರಿಗೆ ಆರು ತಿಂಗಳೊಳಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಹಾಗೆಯೇ ಶಾಂತ್ವಾನದ ಮಾತುಗಳ ನಾಡದೆ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಹಾಸಭಾದ ತಾಲೂಕು ಅಧ್ಯಕ್ಷ ಬಿಪಿ ಒಂಕಾರಪ್ಪ, ಹೆಬ್ಬಳ್ಳಿ ಮಲ್ಲಿಕಾರ್ಜುನ, ಆರ್ ಹನುಮಂತಪ್ಪ, ಧನುಶಂಕರ್, ತಿಪ್ಪೇಸ್ವಾಮಿ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಸಿನಿಮಾಗಳ ನಿರ್ಮಾಣ ಅರ್ಧಕ್ಕರ್ಧ ಕುಸಿತ!
ಎಸ್ಸೆಸ್ಸೆಲ್ಸಿ: ಎಸ್‌ಬಿಆರ್‌ನ ಇಬ್ಬರು 4ನೇ ರ್‍ಯಾಂಕ್