ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ನಡೆದ ಬರ ನಿರ್ವಹಣಾ ಸಮಿತಿ (ಟಾಸ್ಕ್ ಪೋರ್ಸ್) ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಗಾರು ಹಂಗಾಮಿನ ಬರ ಪೀಡಿತ ತಾಲೂಕು ಎಂದು ಶ್ರೀರಂಗಪಟ್ಟಣ ಘೊಷಣೆ ಹಿನ್ನೆಲೆಯಲ್ಲಿ ಜಿಲ್ಲಾ ವಿಪ್ಪತ್ತು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ಸಮಿತಿಯ ಅಧ್ಯಕ್ಷರಾಗಿ ಶಾಸಕರಿದ್ದು, ತಹಸೀಲ್ದಾರ್ ಹಾಗೂ ತಾಪಂ ಇಒ ಸದಸ್ಯ ಕಾರ್ಯದರ್ಶಿಗಳಾಗಿ ಸಮಿತಿಯಲ್ಲಿದ್ದಾರೆ ಎಂದರು.
ಪಿಆರ್‌ಇಡಿ ಎಂಜಿನಿಯರ್, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೇ ಇಲಾಖೆಗಳಿಂದ ಒಬ್ಬೊಬ್ಬರು, ಕಂದಾಯ ಇಲಾಖೆಯಿಂದ ಆಯಾ ಹೊಬಳಿ ಮಟ್ಟದ ಉಪ ತಹಸೀಲ್ದಾರ್ ಸದಸ್ಯರಾಗಿ ಕೆಲಸ ನಿರ್ವಹಿಸಲಿದ್ದಾರೆ ಎಂದರು.ಕಂದಾಯ ಅಧಿಕಾರಿ, ಗ್ರಾಮ ಲೆಕ್ಕಿಗ, ಗ್ರಾಮ ಸಹಾಯಕ ಇವರ ಜೊತೆಗೆ ಆಯಾ ಗ್ರಾಪಂ ಪಿಡಿಒಗಳು ಗ್ರಾಮಗಳಲ್ಲಿನ ಜಮೀನಿಗೆ ನೀರಿಲ್ಲದೆ ಬರಡಾಗಿರುವ ಹಾಗೂ ಜನ-ಜಾನುವಾರುಗಳಿಗೆ ಮೇವು, ಕುಡಿವ ನೀರು ಕೊರತೆ, ಪಶುಗಳಿಗೆ ಆಹಾರದ ಕೊರತೆ, ಬರ ಪೀಡಿತವಾದ ಸ್ಥಳ ಗುರುತಿಸಿ ಪರಿಶೀಲನೆ ನಡೆಸಿ ಮಾಹಿತಿಗಳ ಸದಸ್ಯರಿಗೆ ತಿಳಿಸಬೇಕು ಎಂದರು.
ಒಬ್ಬೊಬ್ಬರೆ ಬರ ಪೀಡಿತ ಪ್ರದೇಶಗಳಿಗೆ ತೆರಳಿ ತಮಗಿಷ್ಟ ಬಂದಂತೆ ಮಾಹಿತಿ ನೀಡದೆ, ಸಂಬಂಧಿಸಿ ಇಲಾಖೆ ಸದಸ್ಯರು ಖುದ್ದು ಹಾಜರಿದ್ದು, ತಪ್ಪು ಮಾಹಿತಿಗಳ ಕೊಡದಂತೆ ಎಚ್ಚರ ವಹಿಸಬೇಕು ಎಂದರು.
ಸಭೆಯಲ್ಲಿ ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ, ತಾಪಂ ಇಒ ವೇಣು, ಪಿಆರ್‌ಇಡಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮಕೃಷ್ಣ, ಸಹಾಯಕ ಕೃಷಿ ನಿರ್ದೇಶಕಿ ಪ್ರಿಯದರ್ಶಿನಿ, ತೋಟಗಾರಿಕೆ ಸಹಾಯಕ ನಿರ್ದೇಶಕಿ ಗಾಯಿತ್ರಿ, ಪಶು ಸಂಗೋಪನಾ ಇಲಾಖೆ ಡಾ.ಸುರೇಶ್ ಜಿ.ಜೆ, ಪುರಸಭೆ ಮುಖ್ಯಾದಿಕಾರಿ ರಾಜಣ್ಣ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳು ಹಾಜರಿದ್ದರು.