ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಕರ್ನಾಟಕ ಪ್ರತಿಭಾ ಅಕಾಡೆಮಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿಶೇಷ ಚೇತನರು, ಕಿತ್ತು ತಿನ್ನುವ ಬಡತನ ಇದ್ದವರೂ ಸೇರಿದಂತೆ ಅನೇಕ ವಿಶೇಷ ವ್ಯಕ್ತಿಗಳು, ಜೀವನದಲ್ಲಿ ಸಾಧಿಸುವ ಸಂಕಲ್ಪ ಮಾಡಿದವರು ಸಾಧನೆ ಮಾಡುತ್ತಿರುವುದು ಬಡತನದ ನೆಪ ಹೇಳುವವರಿಗೆ ಪ್ರೇರಣೆಯಾಗಬೇಕು ಎಂದರು.
ಅಣ್ಣಾ ಹಜಾರೆ ಬಾಲ್ಯದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದವರು. ಆದರೆ, ಪುಸ್ತಕವೊಂದರಿಂದ ಪ್ರೇರಿತರಾದಿ ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ಹೋರಾಡಿದರು. ಕಷ್ಟದಲ್ಲೇ ಬೆಳೆದ ಹಿರಿಯ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಇಡೀ ದೇಶದ ಗಮನ ಸೆಳೆಯುವಂತಹ ಸಾಧನೆ ಮೆರೆದು, ಮಹಿಳೆಯರಿಗೆ ಪ್ರೇರಣೆಯಾದರು. ಶಿಕ್ಷಣವೆಂಬುದು ಹುಲಿಯ ಹಾಲಿದ್ದಂತೆ. ಅದನ್ನು ಕುಡಿದವರು ಸಿಂಹದಂತೆಯೇ ಘರ್ಜಿಸಬಹುದು ಎಂದು ಹೇಳಿದರು.ಶಿಕ್ಷಣವಿರುವುದು ಉದ್ಯೋಗ ಪಡೆಯಲು, ದುಡಿಮೆ ಮಾಡುವುದಕ್ಕಾಗಿ ಅಲ್ಲ. ಜ್ಞಾನಕ್ಕಾಗಿ ಎಂಬುದನ್ನು ಅರಿಯಬೇಕು. ಹಾಲಿಗೆ ಸಂಸ್ಕಾರ ನೀಡಿದಾಗ ಅದು ಮೊಸರು, ಬೆಣ್ಣೆ, ತುಪ್ಪ ಹೀಗೆ ಉಪ ಉತ್ಪನ್ನಗಳ ರೂಪ ಪಡೆದು, ಉಪಯೋಗಿಯಾಗುತ್ತದೆ. ಹಾಗಾಗಿ ಶಿಕ್ಷಣದ ಜೊತೆಗೆ ಸಂಸ್ಕಾರ ಬೆರೆತರೆ ಸಮಾಜದಲ್ಲಿ ಸ್ಥಾನಮನ, ಜೀವನದಲ್ಲಿ ಸುಖ, ಶಾಂತಿ ಹೊಂದಲು ಸಾಧ್ಯ. ಸಂಸ್ಕಾರವಿಲ್ಲದ ಶಿಕ್ಷಣ ಬಲ್ಬ್ ಇಲ್ಲದ ವಿದ್ಯುತ್ ಕಂಬ ಇದ್ದಂತೆ ಎಂದು ಹೇಳಿದರು.
ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ವಿದ್ಯಾರ್ಥಿಗಳು ವಿದ್ಯೆ, ಅಂಕ ಗಳಿಕೆ ಜೊತೆಗೆ ಮಾನವೀಯತೆ ಮೈಗೂಡಿಸಿಕೊಳ್ಳಿ. ನೂರಕ್ಕೆ ನೂರು ಅಂಕ ಪಡೆದರಷ್ಟೇ ಪ್ರತಿಭಾವಂತರು, ಪರಿಪೂರ್ಣರು ಅಂತಾ ಅಲ್ಲ. ನೆರೆಹೊರೆಯವರು, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಗುಣವಂತರೂ ಆದಾಗ ಮಾತ್ರ ವಿದ್ಯೆಗೆ ಮತ್ತಷ್ಟು ಮಹತ್ವ ಬರುತ್ತದೆ. ಅವಿದ್ಯಾವಂತರು ತಮ್ಮ ಪಾಲಕರನ್ನು ಗೌರವದಿಂದ ಕಾಣುತ್ತಿದ್ದರೆ, ವಿದ್ಯಾವಂತರು, ಪ್ರಜ್ಞಾವಂತರೆನಿಸಿಕೊಂಡವರೆ ಹೆತ್ತವರನ್ನು ವೃದ್ಧಾಶ್ರಮದ ಪಾಲು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
----
ಬಿ.ದೇವೇಂದ್ರಪ್ಪ ಜಗಳೂರು ಶಾಸಕ .