ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ನಗರದಲ್ಲಿ ಶ್ರೀರಾಮ ಶೋಭಾ ಯಾತ್ರೆ ಆಚರಣಾ ಟ್ರಸ್ಟ್ ಸಹಯೋಗದಲ್ಲಿ ಭಾನುವಾರದಂದು ಹಮ್ಮಿಕೊಂಡಿದ್ದ ಬೃಹತ್ ಶ್ರೀ ರಾಮ ಶೋಭಾಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪೂರ್ವಿಕರ ಶ್ರಮ ಹಾಗೂ ಬಲಿದಾನದಿಂದಾಗಿ ಸನಾತನ ಹಿಂದೂ ಧರ್ಮವು ಇನ್ನೂ ಜೀವಂತವಿದ್ದು ಅದರ ಪಾಲನೆ ಮಾಡಬೇಕಾದದ್ದು ಎಲ್ಲರ ಕರ್ತವ್ಯ. ತಾಯಂದಿರು ಮಕ್ಕಳಿಗೆ ಸನಾತನ ಸಂಸ್ಕೃತಿ, ಧರ್ಮ ರಕ್ಷಣೆಗಾಗಿ ರಾಮಾಯಣ , ಮಹಾಭಾರತ , ಭಗವದ್ಗೀತೆಯಂತಹ ಗ್ರಂಥಗಳ ಪರಿಚಯ ಮಾಡಿಸಬೇಕು. ಉತ್ತಮ ಸಂಸ್ಕಾರ ನೀಡುವ ಗುರುತರ ಜವಾಬ್ದಾರಿ ತಾಯಂದಿರ ಮೇಲಿದೆ ಎಂದರು.ಜಾಗೃತಿ ಕೊರತೆಯಿಂದ ಹಿಂದೂ ಧರ್ಮದ ರಕ್ಷಣೆಗೆ ಹಿನ್ನಡೆಯಾಗಿದ್ದು, ಪ್ರತಿ ಮನೆಯಲ್ಲಿಯೂ ಹಿಂದೂಗಳು ಸಂಘಟಿತರಾಗಬೇಕು. ಪ್ರತಿ ಗ್ರಾಮ, ಹೃದಯಕ್ಕೂ ಹಿಂದೂಗಳ ಸಂದೇಶ ಸಾರುವ ಮೂಲ ಉದ್ದೇಶದಿಂದ ‘ನಾವೆಲ್ಲ ಹಿಂದೂ ನಾವೆಲ್ಲ ಒಂದು’ ಎಂಬ ಸಂಕಲ್ಪದೊಂದಿಗೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಸಂಘಟಿತರಾಗಬೇಕು ಎಂದರು.
ನಗರದ ಹನುಮಂತಪುರ ಗೇಟ್ ಬಳಿಯ ಶ್ರೀ ಆಂಜನೇಯ ಸ್ವಾಮಿ ದೇವಾಲಯದಿಂದ ಶ್ರೀರಾಮ ಶೋಭಾಯಾತ್ರೆ ಆರಂಭವಾಯಿತು. ವಿವಿಧ ಕಲಾ ತಂಡಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಶ್ರೀರಾಮನ ಶೋಭಾಯಾತ್ರೆ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ಆಂಜನೇಯಸ್ವಾಮಿಯ ಮೂರ್ತಿ, ಈಶ್ವರ ಮತ್ತು ಶ್ರೀರಾಮನ ಪ್ರತಿಮೆಗಳು ವಿಶೇಷವಾಗಿ ಗಮನ ಸೆಳೆದವು.