ಕನ್ನಡಪ್ರಭ ವಾರ್ತೆ ಜಮಖಂಡಿಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್ ಹಾಗೂ ಕೃಷಿ ಉಪಕರಣ ಕೊಡಿಸುವುದಾಗಿ ರೈತರನ್ನು ವಂಚಿಸಿ ಹಣ ಪಡೆದ ಆರೋಪದ ಮೇಲೆ ರಾಜು ಗಸ್ತಿ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್ ಹಾಗೂ ಕೃಷಿ ಉಪಕರಣ ಕೊಡಿಸುವುದಾಗಿ ರೈತರನ್ನು ವಂಚಿಸಿ ಹಣ ಪಡೆದ ಆರೋಪದ ಮೇಲೆ ರಾಜು ಗಸ್ತಿ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಮೂಡಲಗಿ ತಾಲೂಕು ಹೊಸಟ್ಟಿ ಗ್ರಾಮದ ಮಂಜುನಾಥ ಕಂಬಾರ ಎಂಬುವರು ನೀಡಿದ ದೂರಿನ ಮೆರೆಗೆ ಪ್ರಕರಣ ದಾಖಲಾಗಿದೆ. ಆರೋಪಿಯು ಟ್ರ್ಯಾಕ್ಟರ್, ರೋಟಿವೇಟರ್, ನೇಗಿಲು ಸೇರಿ ₹ 6 ಲಕ್ಷಗಳಿಗೆ ಕೇಂದ್ರ ಸರ್ಕಾರದ ಸಬ್ಸಿಡಿ ದರದಲ್ಲಿ ಕೊಡಿಸುವುದಾಗಿ ಹೇಳಿ ಮೊಸ ಮಾಡಿದ್ದ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ವಂಚನೆಗೊಳಗಾದ ಮಂಜುನಾಥ ದಾಖಲೆ ಸಹಿತ ಠಾಣೆಗೆ ದೂರು ನೀಡಿದ್ದಾರೆ. ಇದೇ ರೀತಿ ಇನ್ನಾರಾದರೂ ಹಣ ನೀಡಿ ವಂಚನೆಗೊಳಗಾಗಿದ್ದಲ್ಲಿ ಜಮಖಂಡಿ ನಗರ ಠಾಣೆಗೆ ದಾಖಲೆ ಸಮೇತ ದೂರು ಸಲ್ಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
