ಯೋಗಾಸನ ಒಂದು ದಿನಕ್ಕೆ ಸೀಮಿತವಾಗದಿರಲಿ

KannadaprabhaNewsNetwork |  
Published : Jun 22, 2025, 11:47 PM IST
ಯೋಗ ದಿನಾಚರಣೆ | Kannada Prabha

ಸಾರಾಂಶ

ಯೋಗಾಸನ ಒಂದು ದಿನಕ್ಕೆ ಸೀಮಿತವಾಗದೇ ಪ್ರತಿದಿನದ ಬದುಕಿನ ಅವಿಭಾಜ್ಯ ಅಂಗವಾದಾಗ ಮಾತ್ರ ಯೋಗ ದಿನಾಚರಣೆ ಸಾರ್ಥಕ ಪಡೆದುಕೊಳ್ಳುತ್ತದೆ ಎಂದು ಸಂತೋಷ ವಾಲಿಕಾರ ಹೇಳಿದರು.

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ಯೋಗಾಸನ ಒಂದು ದಿನಕ್ಕೆ ಸೀಮಿತವಾಗದೇ ಪ್ರತಿದಿನದ ಬದುಕಿನ ಅವಿಭಾಜ್ಯ ಅಂಗವಾದಾಗ ಮಾತ್ರ ಯೋಗ ದಿನಾಚರಣೆ ಸಾರ್ಥಕ ಪಡೆದುಕೊಳ್ಳುತ್ತದೆ ಎಂದು ಯೋಗ ಪಟು ಸಚಿನ್ ಪವಾರ ಹೇಳಿದರು.ಸ್ಥಳೀಯ ಎಸ್.ಎಮ್. ಭೂಮರಡ್ಡಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಯೋಗದಿಂದ ಜೀರ್ಣಾಂಗಗಳ ಶಕ್ತಿ ವೃದ್ಧಿಗೊಳ್ಳವುದರ ಜತೆಗೆ ಮನುಷ್ಯನ ಆರೋಗ್ಯ ಕಾಪಾಡುತ್ತದೆ. ಅಲ್ಲದೆ ಎಲ್ಲ ಧರ್ಮಕ್ಕೂ ದೇಹವೇ ಮೂಲ ಸಾಧನ ಎಂದ ಅವರು, ಹಲವಾರು ಯೋಗಾಸನಗಳ ಪ್ರಾತ್ಯಕ್ಷಿಕೆ ನೀಡಿದರು.

ಉಪನ್ಯಾಸಕ ಸಂತೋಷ ವಾಲಿಕಾರ ಮಾತನಾಡಿ, ಯೋಗ ಔಷಧಕ್ಕೊಂದು ಪರ್ಯಾಯ ರಾಮಬಾಣವಾಗಿದೆ. ಯೋಗಾಸನವು ಮನುಷ್ಯನ ಶರೀರದ ರಚನಾ ಶಾಸ್ತ್ರದ ಸಂಪೂರ್ಣ ಜ್ಞಾನದ ವೈಜ್ಞಾನಿಕ ಆಧಾರದ ಮೇಲೆ ನಿಂತಿದೆ. ಯೋಗಾಸನ ಎಂಬುದು ಜಗತ್ತಿಗೆ ಭಾರತದ ದೊಡ್ಡ ಕೊಡುಗೆಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ವೀರೇಶ ಯಲಬುಣಚಿ, ದೈಹಿಕ ಶಿಕ್ಷಣ ಉಪನ್ಯಾಸಕ ರವಿ ಹಲಗಿ, ಹಿರಿಯ ಉಪನ್ಯಾಸಕ ಅರವಿಂದ ವಡ್ಡರ, ಉಪನ್ಯಾಸಕರಾದ ಜ್ಯೋತಿ ಗದಗ, ವಿ.ಎಮ್. ಜೂಚನಿ, ಸಂತೋಷ ವಾಲಿಕಾರ, ಎಸ್.ಕೆ. ಕಟ್ಟಿಮನಿ, ಕವಿತಾ ಕವಲೂರ, ಆನಂದ ಜೂಚನಿ, ಸಂಗಮೇಶ ಹುನಗುಂದ, ಗೋಪಾಲ ರಾಯಬಾಗಿ, ಮಂಜುನಾಥ ಯರಗೇರಿ, ಪ್ರೇಮಾ ಚುಂಚಾ, ವಿಜಯಲಕ್ಷ್ಮಿ ಗಾಳಿ, ಶ್ರೀಕಾಂತ ಪೂಜಾರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ