ಕೊಳ್ಳೇಗಾಲ: ಹಾವುಗಳು ರೈತರ ಮಿತ್ರರಾಗಿದ್ದು ಅವುಗಳ ಸಂರಕ್ಷಣೆಗೆ ಎಲ್ಲರ ಹೊಣೆಯಾಗಿದೆ ಎಂದು ಸ್ನೇಕ್ ಮಹೇಶ್ ಹೇಳಿದರು.
ಹಾವು ಕಡಿತಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಹಾಗೂ ಹಾವು ಕಡಿತಕ್ಕೆ ಒಳಗಾದ ಸಂದರ್ಭಗಳಲ್ಲಿ ಸಾಧ್ಯವಾದಷ್ಟು ಬೇಗ ಸಮೀಪದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು ನಿರ್ಲಕ್ಷ್ಯ ಸರಿಯಲ್ಲ, ಹಾವುಗಳಿಗೆ ಹೊರಭಾಗದ ಕಿವಿಗಳೇ ಇಲ್ಲದೆ, ಒಳಭಾಗದ ಕಿವಿಗಳಿದ್ದು, ಕಂಪನದಿಂದ ಮಾತ್ರ ಗ್ರಹಿಕೆಯು ಅನುಭವಕ್ಕೆ ಬರುತ್ತದೆ ಹೊರತು ಎಷ್ಟೇ ಶಬ್ದ ಮಾಡಿದರು ಅದಕ್ಕೆ ಕೇಳಿಸುವುದಿಲ್ಲ. ಪುಂಗಿಯ ಶಬ್ದಕ್ಕೆ ಹುತ್ತ ದಿಂದ ಹೊರಕ್ಕೆ ಬರುವುದು ಮತ್ತು ನೃತ್ಯ ಮಾಡುವುದು , 5 ಹೆಡೆ ಮತ್ತು 7 ಹೆಡೆ ಹಾವುಗಳಿವೆ ಎಂದರು.
ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ, ಮಾನವ ವನ್ಯಜೀವಿ ಸಂಘರ್ಷ ಹಾಗೂ ಕಾಡ್ಗಿಚ್ಚು ನಿಯಂತ್ರಣದ ಬಗ್ಗೆ ಡಿ ಆರ್ ಎಫ್ ಓ ಅನಂತರಾಮು ಅವರು ಮಾಹಿತಿ ನೀಡಿ ವನ್ಯ ಸಂಪತ್ತು ರಕ್ಷಣೆ ನಿಮ್ಮೆಲ್ಲರ ಹೊಣೆ ಎಂದರಲ್ಲದೆ, ಎರಡು ವಸತಿ ಶಾಲೆಗಳಿಂದ 500ವಿದ್ಯಾರ್ಥಿಗಳಿದ್ದು ಅವರಿಗೆ ಅರಿವು ಮೂಡಿಸುವ ಜೊತೆಗೆ ಅವರ ಪೋಷಕರಿಗೆ ಮಾಹಿತಿ ತಲುಪಿಸುವುದು ಕಾರ್ಯಕ್ರಮದ ಉದ್ದೇಶವಾಗಿರುತ್ತದೆ ಎಂದರು. ಸ್ನೇಕ್ ಮಹೇಶ್ ಅವರನ್ನು ಅರಣ್ಯ ಇಲಾಖೆ ಮತ್ತು ಶಾಲೆ ವತಿಯಿಂದ ಸನ್ಮಾನಿಸಲಾಯಿತು. ಶುಪಾಲರಾದ ಶೋಯಬ್ ಪಾಷಾ, ನಿಲಯ ಪಾಲಕರಾದ ಶಿವಾನಂದಯ್ಯ, ದೀಪಾ, ಶಾಲಾ ಸಿಬ್ಬಂದಿಯಾದ ಎಲ್ಲಪ್ಪ ಗಡಗೇನವರ, ನಮಿತಾ ತಿಮ್ಮಪ್ಪ ಮಡಿವಾಳ,ಸುನಿಲ್ ಬಸಪ್ಪ ಬೆಳವಿ, ರಾಜು ಎಸ್, ಗಸ್ತು ಅರಣ್ಯಪಾಲಕರು, ಶಿವಮ್ಮ, ಆಕಾಶ್ ಸೋಪನಾ ಜೋಶಿ, ಅರಣ್ಯ ವೀಕ್ಷಕರು, ಮುಕುಂದ , ಗೋವಿಂದ, ಸಿದ್ದು ಇದ್ದರು.