ಕನ್ನಡಪ್ರಭ ವಾರ್ತೆ ಕೋಲಾರವೈದ್ಯರು ಪ್ರತಿನಿತ್ಯ ಸೇವೆಯಲ್ಲಿ ತೊಡಗಿ ರೋಗಿಗಳನ್ನು ವಿಚಾರಿಸುವ ಸಂದರ್ಭದಲ್ಲಿ ಒತ್ತಡದೊಂದಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ, ಆದರೆ ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಬಾರದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ವೈದ್ಯರು ಮತ್ತು ಸಿಬ್ಬಂದಿಗೆ ಕಿವಿಮಾತು ಹೇಳಿದರು.ಜಿಲ್ಲಾಡಳಿತ ಮತ್ತು ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಾರಾಯಣ ಹೃದಯಾಲಯದಿಂದ ಆರೋಗ್ಯ-ಕುಟುಂಬ ಕಲ್ಯಾಣಾಧಿಕಾರಿ ಸಭಾಂಗಣದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಒತ್ತಡದಲ್ಲಿ ಕೆಲಸ ನಿರ್ವಹಣೆ
ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಒತ್ತಡದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ಎಲ್ಲರೂ ಸಹ ಒತ್ತಡ ಎಂಬ ಪದವನ್ನು ಮರೆತು ಕಾರ್ಯನಿರ್ವಹಿಸಿ ಮಾನಸಿಕವಾಗಿ ಆರೋಗ್ಯವಾಗಿದ್ದರೆ, ದೈಹಿಕವಾಗಿ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟವೇನೂ ಆಗುವುದಿಲ್ಲ, ಕೆಲಸದ ಒತ್ತಡದೊಂದಿಗೆ ಸಂಸಾರ ಜಂಜಾಟದ ಒತ್ತಡವು ಸೇರಿ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಾಧ್ಯವಾದಷ್ಟು ಒತ್ತಡ ರಹಿತ ಜೀವನ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಆರೋಗ್ಯ ರಕ್ಷಣೆಗೆ ವ್ಯಾಯಾಮಆರೋಗ್ಯಕರ ಆಹಾರ ಪ್ರತಿನಿತ್ಯ ಧ್ಯಾನ ಹಾಗೂ ಲಘು ವ್ಯಾಯಾಮಗಳು ಮನುಷ್ಯನನ್ನು ಒತ್ತಡದಿಂದ ದೂರವಿರಿಸಲು ಸಹಕಾರಿಯಾಗುವುದು. ನಿತ್ಯ ಜೀವನದಲ್ಲಿ ಇವುಗಳನ್ನು ಅಳವಡಿಸಿಕೊಳ್ಳುವುದು ಆರೋಗ್ಯದೆಡೆಗೆ ಹೆಜ್ಜೆಯಿರಿಸಿದಂತೆ ಎಂದು ಹೇಳಿದರು.ಡಿಹೆಚ್‌ಓ ಡಾ.ಶ್ರೀನಿವಾಸ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದನ್, ವೈದ್ಯರಾದ ಡಾ.ಜಗದೀಶ್, ಡಾ.ಪ್ರಸನ್ನ, ಡಾ.ಚರಾಯಿನಿ, ಡಾ.ಉದಯ್ ಕುಮಾರ್, ಡಾ.ನಾರಾಯಣಸ್ವಾಮಿ, ಡಾ.ಕಿರಣ್ ಕುಮಾರ್, ಅರೋಗ್ಯ-ಕುಟುಂಬ ಕಲ್ಯಾಣ ಇಲಾಖೆ ಶಿಕ್ಷಣಾಧಿಕಾರಿ ಪ್ರೇಮ ಇದ್ದರು.