ಶಿರಸಿ: ಗೆಲುವಿಗೆ ಹಿಗ್ಗಬೇಡಿ, ಸೋಲಿಗೆ ಅಂಜಬೇಡಿ. ನಾನೂ ನಾಲ್ಕು ಸಲ ಸೋಲು ಅನುಭವಿಸಿ, ಐದನೇ ಬಾರಿಗೆ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದೇನೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.ಸೋಮವಾರ ನಗರದ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ವತಿಯಿಂದ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕಿನ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ನಾಲ್ಕು ದಿನಗಳ ಕಲಿಕಾ ಸ್ಫೂರ್ತಿ ತರಬೇತಿ ಶಿಬಿರವನ್ನು ಉದ್ಘಾಟಿಸಿ, ಮಾತನಾಡಿದರು.ಸೋಲಾಯಿತು ಎಂದು ಅಂಜಿದರೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಆದರೆ, ಸಮಯ ಹಾಳು ಮಾಡಿಕೊಂಡು ಸೋತರೆ ನಮಗೆ ನಾವೇ ಹೊಣೆ. ನಮ್ಮ ಸಮಯ ಸದ್ಬಳಕೆ ಮಾಡಿಕೊಂಡು ಸಾಧನೆ ತೋರಬೇಕು. ಗುಣಮಟ್ಟದ ಶಿಕ್ಷಣಕ್ಕೆ ಶಿಕ್ಷಣ ಇಲಾಖೆ ಕೆಲಸ ಮಾಡುತ್ತಿದೆ. ನಮ್ಮ ಗುರಿ ತಲುಪಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ದೇಹದ ಆರೋಗ್ಯದ ಜತೆಗೆ ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂದರು.ಡಯಟ್ ಪ್ರಾಚಾರ್ಯ ಎಂ.ಎಸ್. ಹೆಗಡೆ ಮಾತನಾಡಿ, ದಸರಾ ರಜೆಯಲ್ಲಿ ಅರ್ಧ ವಾರ್ಷಿಕ ಪರೀಕ್ಷೆ ತನಕದ ಅಭ್ಯಾಸ ಗಟ್ಟಿಗೊಳಿಸಲು ೪ ದಿನದ ತರಬೇತಿ ಕಲಿಕಾ ಸ್ಫೂರ್ತಿ ಶಿಬಿರ ಆಯೋಜಿಸಲಾಗಿದೆ ಎಂದರು.ಶಿರಸಿ ಶೈಕ್ಷಣಿಕಾ ಜಿಲ್ಲಾ ಉಪನಿರ್ದೇಶಕ ಪಿ. ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಐಐಟಿ ಸಂತೋಷ ಹೆಗಡೆ ಇದ್ದರು. ಮಾನ್ಯ ಹೆಗಡೆ ಪ್ರಾರ್ಥಿಸಿದಳು. ಡಯಟ್ ಉಪನ್ಯಾಸಕ ನಾರಾಯಣ ಭಾಗವತ್ ನಿರೂಪಿಸಿದರು. ಕೆ.ಎಚ್. ಶ್ರೀಧರ ವಂದಿಸಿದರು.
ಪುರುಷರ ವಿಭಾಗ: 61 ಕೆಜಿ ವಿಭಾಗದಲ್ಲಿ ರೋಹನ್ ದೊಡ್ಮನಿ ಪ್ರಥಮ, 87 ಕೆಜಿ ವಿಭಾಗದಲ್ಲಿ ವಿಜಯ್ ಬಂಗ್ಯಾಣ್ಣನವರ ದ್ವಿತೀಯ, 60 ಕೆಜಿ ವಿಭಾಗದಲ್ಲಿ ಜ್ಞಾನೇಶ್ವರ ಹಳದುಕರ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.