ನನ್ನ ವಿರುದ್ಧ ದರ್ಪದ ಮಾತು ಸಲ್ಲ: ರೇಣುಕಾಚಾರ್ಯ

KannadaprabhaNewsNetwork |  
Published : Jan 11, 2026, 01:30 AM IST
ಹೊನ್ನಾಳಿ ಫೋಟೋ 10ಎಚ್.ಎಲ್.ಐ1. ಮಾಜಿ ಸಚಿವ ಎಂ.ಪಿ.ರೇಣಕಾಚಾರ್ಯ. | Kannada Prabha

ಸಾರಾಂಶ

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಅವರು ಪದೇ ಪದೇ ನನ್ನ ಬಗ್ಗೆ ದರ್ಪದ ಮಾತುಗಳನ್ನಾಡುತ್ತಿರುವುದು ಸಲ್ಲದು. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಅವರು ಪದೇ ಪದೇ ನನ್ನ ಬಗ್ಗೆ ದರ್ಪದ ಮಾತುಗಳನ್ನಾಡುತ್ತಿರುವುದು ಸಲ್ಲದು. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಎಚ್ಚರಿಕೆ ನೀಡಿದರು.

ಇಲ್ಲಿಯ ತಮ್ಮ ನಿವಾಸದಲ್ಲಿ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ರೇಣುಕಾಚಾರ್ಯ ಎಲ್ಲಿ ಸಭೆ ನಡೆಸುತ್ತಾರೋ ಅಲ್ಲಿ ಗೆ ಹೋಗಿ ನೇರವಾಗಿ ಪ್ರಶ್ನೆ ಮಾಡುತ್ತೇನೆ ಎಂದು ಮಂಜಪ್ಪ ಹೇಳಿದ್ದಾರೆ, ನಮ್ಮ ಬಗ್ಗೆ ಅವಹೇಳಕಾರಿಯಾಗಿ ಏಕವಚನ ಬಳಿಸಿ ಮಾತನಾಡಿದರೆ ನಾವು ಕೂಡ ಸುಮ್ಮನೆ ಕೂರುವುದಿಲ್ಲ ಎಂದು ತಿರುಗೇಟು ನೀಡಿದರು.

ನಾವು ನಮ್ಮ ತಾಯಿಯ ಎದೆ ಹಾಲನ್ನು ಕುಡಿದಿದು ಬೆಳೆದಿದ್ದೇವೆ ಮುಂದಿನ ದಿನಗಳಲ್ಲಿ ನನ್ನ ವಿರುದ್ದ ಮತ್ತೆ ಮತ್ತೆ ದೌರ್ಜನ್ಯದ ಮಾತುಗಳನ್ನಾಡಿದರೆ ನಮ್ಮ ಬಿಜೆಪಿ ಕಾರ್ಯಕರ್ತರು ನಿಮಗೆ ತಕ್ಕಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಾದ್ಯತ ತನ್ನ ಅಧಿಕಾರಾವಧಿಯಲ್ಲಿ ಹಲವು ಗುರುತರವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ,250೦ ಹಾಸಿಗೆ ಆಸ್ಪತ್ರೆ, ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ,ಚತುಷ್ಫಥ ರಸ್ತೆಗಳು,ಸಿ.ಸಿ. ರಸ್ತೆಗಳು,ಶಾಲಾ ಕಾಲೇಜುಗಳು ಸೇರಿದಂತೆ ಅನೇಕ ಯೋಜನೆಗಳನ್ನು ತಂದು ಕೆಲಸ ಮಾಡಿಸಿದ್ದೇನೆ ಎಂದ ಎಂ.ಪಿ.ರೇಣುಕಾಚಾರ್ಯ ಅವರು ತನ್ನನ್ನು ಮೂರು ಭಾರಿ ಶಾಸಕನನ್ನಾಗಿ ಮಾಡಿದ ಅವಳಿ ತಾಲೂಕಿನ ಜನತೆಯ ಋಣ ತೀರಿಸಿದ್ದೇನೆ,ಮುಂದೆಯೂ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ,ನಾನು ಐದು ಚುನಾವಣೆಯಲ್ಲಿ ಮೂರು ಗೆದ್ದು 2 ರಲ್ಲಿ ಸೋತಿದ್ದೇನೆ. ಅದರೆ ತಾಲೂಕಿನ ನಿನ್ನ ಸಾಧನೆ ಎನು ಎಂಬುದನ್ನು ಕ್ಷೇತ್ರದ ಮತದಾರರಿಗೆ ತಿಳಿಸಪ್ಪ ಎಂದು ಮಂಜಪ್ಪನವರನ್ನು ಕುರಿತು ಹೇಳಿದರು

ನನಗೆ ಸಾಮಾಜಿಕ ಜಾಲತಾಣದ ಹುಚ್ಚು ಎಂದು ಹೇಳಿದ್ದೀರಿ, ಹೌದು ನನಗೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ನನಗೆ ಅಭಿಮಾನಿಗಳಿದ್ದಾರೆ, ಅದನ್ನು ಕೇಳಲು ನಿಮಗೆ ಅಧಿಕಾರವಿಲ್ಲ. ಪದೇ ಪದೇ ನನ್ನ ಕುರಿತು ದೌರ್ಜನ್ಯದ ದಮ್ಕಿ ಹಾಕಿದರೆ ಇಲ್ಯಾರು ಕೇಳಿಸಿಕೊಂಡು ಸುಮ್ಮನೆ ಕೂರುವುದಿಲ್ಲ, ನಮಗೆ ಶಕ್ತಿಯನ್ನು ತಾಲೂಕಿನ ಜನತೆ ಕೊಟ್ಟಿದ್ದಾರೆ, ನಿನ್ನ ದಮ್ಕಿಗೆ ಯಾರೂ ಹೆದರುವುದಿಲ್ಲ. ಚುನಾವಣೆ ಬರಲಿ, ತಾಲೂಕಿನ ಜನತೆ ಯಾರಿಗೆ ಪಾಠ ಕಲಿಸುತ್ತಾರೆ ಎಂದು ಕಾದು ನೋಡೋಣ ಎಂದು ಹೇಳಿದರು.

ಕುರುಬ ಸಮಾಜದ ತಾಲೂಕು ಅಧ್ಯಕ್ಷ ಎಂ.ಎಸ್.ಪಾಲಕ್ಷಪ್ಪ,ಬಿಜೆಪಿ ತಾಲೂಕಾಧ್ಯಕ್ಷ ನಾಗರಾಜ್,ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್,ಪುರಸಭಾ ಮಾಜಿ ಅಧ್ಯಕ್ಷರಾದ ಕೆ.ವಿ,ಶ್ರೀಧರ್,ಬಾಬು ಹೋಬಳದಾರ್,ರಂಗಪ್ಪ, ಮುಖಂಡರಾದ ಎಸ್.ಎಸ್.ಬೀರಪ್ಪ, ನೆಲಹೊನ್ನೆ ಮಂಜುನಾಥ್, ಮಹೇಶ್‌ ಹುಡೇದ್, ನವೀನ್ ಇಂಚರ, ಅನಿಲ್, ರಘು ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ