ಚನ್ನಪಟ್ಟಣ: ಹನಿಹನಿ ನೀರು ಕೂಡ ಅತ್ಯಮೂಲ್ಯವಾಗಿದ್ದು, ನೀರನ್ನು ವ್ಯರ್ಥ ಮಾಡುವುದನ್ನು ಸಾರ್ವಜನಿಕರು ಬಿಡಬೇಕು. ಅಗತ್ಯಕ್ಕೆ ಅನುಗುಣವಾಗಿ ಜತೆಗೆ ನೀರನ್ನು ಮಿತವ್ಯಯವಾಗಿ ಬಳಸುವುದನ್ನು ರೂಢಿಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಚನ್ನಪಟ್ಟಣ ಯೋಜನಾಧಿಕಾರಿ ರೇಷ್ಮಾ ತಿಳಿಸಿದರು.
ಪ್ರಸ್ತುತ ಮಳೆ ಕೊರತೆಯಿಂದ ಎಲ್ಲಾ ಕಡೆ ನೀರಿನ ಅಭಾವ ತಲೆದೋರಿದೆ. ಬಹುತೇಕ ಕಡೆ ಜನ ಕುಡಿಯಲು ನೀರಲ್ಲದೇ, ದಿನಬಳಕೆಗೆ ನೀರು ದೊರೆಯದೇ ಪರಿತಪಿಸುತ್ತಿದ್ದಾರೆ. ಅಂತರ್ಜಲ ಬತ್ತಿದ್ದು, ಸಾವಿರಾರು ಅಡಿ ಬೋರ್ ಕೊರೆದರೂ ನೀರು ದೊರೆಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ಜನ ಅನವಶ್ಯಕವಾಗಿ ನೀರು ಬಳಕೆ ಮಾಡುವುದನ್ನು ಮೊದಲು ನಿಯಂತ್ರಣ ಮಾಡಬೇಕು ಎಂದು ಹೇಳಿದರು.
ಮನುಕುಲಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ಪ್ರತಿಯೊಬ್ಬರು ನಿಷೇಧ ಮಾಡಬೇಕು. ಈಗಾಗಲೇ ಸಾಕಷ್ಟು ಪ್ಲಾಸ್ಟಿಕ್ ಬಳಕೆಯಿಂದ ಮನುಷ್ಯ ಹಾಗೂ ಪ್ರಾಣಿಗಳ ಮೇಲಿನ ಆರೋಗ್ಯಕ್ಕೆ ಹಾನಿ ಮಾಡುವುದಲ್ಲದೆ ಭೂಮಿಯಲ್ಲಿನ ಫಲವತ್ತತೆಯನ್ನು ನಾಶ ಮಾಡುತ್ತಿವೆ. ಇದನ್ನು ಅರಿತು ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಸುವುದ್ನು ಬಿಡಬೇಕು. ಜ್ಞಾನವಿಕಾಸದ ಜಾಗೃತಿ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಳ್ಳಿ. ಅಂತೆಯೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಪ್ರಗತಿಪರ ಕಾರ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ವೆಂಕಟರಾಮು, ಕೃಷ್ಣ, ಕಲಾ ಕಾರ್ಯಕ್ರಮದ ಅಧ್ಯಕ್ಷೆ ಕುಮಾರಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸುಜಾತ, ಸೇವಾ ಪ್ರತಿನಿಧಿ ಶ್ವೇತಾ ಇತರರು ಹಾಜರಿದ್ದರು.ಪೊಟೋ೧೬ಸಿಪಿಟಿ೧:
ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ವಲಯದ ನಾಗಪುರ ಕಾರ್ಯಕ್ಷೇತ್ರದ ಹೊಂಗಿರಣ ಜ್ಞಾನ ವಿಕಾಸ ಕೇಂದ್ರದಲ್ಲಿ ನೀರು, ಪ್ಲಾಸ್ಟಿಕ್, ಸ್ವಚ್ಛತೆ ಬಗ್ಗೆ ಆಯೋಜಿಸಿದ್ದ ಬೀದಿ ನಾಟಕ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಚನ್ನಪಟ್ಟಣ ಯೋಜನಾಧಿಕಾರಿ ರೇಷ್ಮಾ ಉದ್ಘಾಟಿಸಿದರು.