ಕನ್ನಡಪ್ರಭ ವಾರ್ತೆ ಚೇಳೂರು
ಸರ್ಕಾರಿ ಸೌಲಭ್ಯಗಳನ್ನು ತಲುಪಿಸಲು ವಿನಾಕಾರಣ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸದೆ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಬೇಕೆಂಂದು ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ ಸೂಚನೆ ನೀಡಿದರು.ನೂತನ ತಾಲೂಕು ಕಚೇರಿಯಲ್ಲಿ ನಡೆದ ಜನಸ್ಪಂಧನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಜನಸ್ಪಂದನ ಕಾರ್ಯಕ್ರಮವು ಕೇವಲ ವೇದಿಕೆ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು. ಸಮಸ್ಯೆಗಳನ್ನು ಪರಿಹರಿಸಿಜನರ ಅಹವಾಲುಗಳಿಗೆ ಪರಿಹಾರ ದೊರೆತಾಗ ಮಾತ್ರ ಜನಸ್ಪಂದನ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ. ಮುಂದಿನ ಸಭೆಯ ಒಳಗಾಗಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಮುಂದಾಗಬೇಕು ಎಂದರು.ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕೃತ ಅಹವಾಲುಗಳ ಅರ್ಜಿಗಳನ್ನು ಆದಷ್ಟು ಬೇಗ ಬಗೆಹರಿಸುವ ಮೂಲಕ ವಿಲೇವಾರಿ ಮಾಡಬೇಕು. ಹದಿನೈದು ದಿನಗಳ ಒಳಗೆ ಚೇಳೂರು ತಾಲೂಕಿನಿಂದ ಜಿಲ್ಲಾ ಮಟ್ಟದ ಕಚೇರಿಗೆ ತಾಲೂಕು ಆಡಳಿತದ ಕುರಿತು ಪ್ರಸ್ತಾವನೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟರುರಾಷ್ಟ್ರೀಕೃತ ಬ್ಯಾಂಕ್ ಇಲ್ಲ
ಚೇಳೂರು ನೂತನ ತಾಲೂಕಾಗಿದ್ದರು ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳು ಇಲ್ಲ, ಈ ಕುರಿತು ಜನರಲ್ ಮ್ಯಾನೇಜರ್ ಹಾಗೂ ಎಜಿಎಂ ರವರ ಗಮನಕ್ಕೆ ತಂದು ಪ್ರಸ್ತಾವನೆ ತಂದು ಕ್ಯಾನರ ಬ್ಯಾಂಕ್ ಹಾಗೂ ಎಸ್ ಬಿಐ ಬ್ಯಾಂಕ್ ಸೇವೆಗಳನ್ನು ಮುಂದಿನ ದಿನಗಳಲ್ಲಿ ಒದಗಿಸಲಾಗುವುದು ಎಂಬ ಭರವಸೆ ನೀಡಿದರು.ಈ ವೇಳೆ ಜಿಲ್ಲಾ ಸಿಇಒ ಪ್ರಶಾಂತ್ ಜಿ ನಿಟ್ಟಾಲಿ ಮಾತನಾಡಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 40 ಪಶು ಸಂಗೋಪನಾ ಇಲಾಖೆ 0,ಪೊಲೀಸ್ ಇಲಾಖೆ 01, ಕೃಷಿ ಇಲಾಖೆಗೆ 01,ಶಿಕ್ಷಣ ಇಲಾಖೆಗೆ 01,ಅಬಕಾರಿ 01,ಆಹಾರ ಮತ್ತು ನಾಗರಿಕ ಸೌಲಭ್ಯ 02,ಮಹಿಳಾ ಮತ್ತು ಮಕ್ಕಳ ಇಲಾಖೆ 01, ಒಟ್ಟು 59 ಅರ್ಜಿಗಳು ಬಂದವು ಕೆಲ ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹರಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ತಹಶೀಲ್ದಾರ ಶ್ರೀನಿವಾಸಲು ನಾಯುಡು,ಪಿಡಿಒ ಕೆ ವೆಂಕಟಾಚಲಪತಿ, ಎಸ್ಐ ಅಮರ್, ಆರ್ ಐ ಈಶ್ವರ್,ಕಡ್ಡಿಲು ವೆಂಕಟರವಪ್ಪ, ಹಾಗೂ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಇದ್ದರು.