ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಗುರುವಾರ ಯುವ ರೆಡ್ ಕ್ರಾಸ್ ಸಮಿತಿ ಹಾಗೂ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಆಯೋಜಿಸಿದ್ದ ರಕ್ತದಾನ ಮತ್ತು ರಕ್ತದ ಗುಂಪು ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ. ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಸಮಾಜಮುಖಿ ಕೆಲಸಕ್ಕೆ ತೊಡಗಿಕೊಳ್ಳಬೇಕು. ಬಡವರ ಹಾಗೂ ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುವ ಜೊತೆ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
ವಿದ್ಯಾರ್ಥಿಗಳಿಗೆ ಓದುವುದು ಎಷ್ಟು ಮುಖ್ಯವೋ ಅಷ್ಟೇ ರೋಗಿಗಳಿಗೆ ಸಹಾಯ ಮಾಡುವುದು ಸಹಾ ಅತೀ ಮುಖ್ಯ. ರಕ್ತದಾನ ಮಾಡಿದರೆ ನಿಮ್ಮ ರಕ್ತವೂ ಶುದ್ಧಿಯಾಗುವುದರ ಜೊತೆಗೆ ಹೊಸ ರಕ್ತ ನಿಮ್ಮ ದೇಹಕ್ಕೆ ಸೇರುವುದರ ಮೂಲಕ ಆರೋಗ್ಯಕರ ಜೀವಿಸಬಹುದು. ಅಗತ್ಯವಿರುವ ಇತರರಿಗೆ ರಕ್ತದಾನದಿಂದ ಸಹಾಯವಾಗುತ್ತೆ, ಒಂದು ದಾನದಿಂದ ಮೂರು ಜನರ ಜೀವ ಉಳಿಸಬಹುದು ಮತ್ತು ಇದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುತ್ತದೆ. ರಕ್ತದಾನವು ಇನ್ನೊಬ್ಬರ ಜೀವವನ್ನು ಉಳಿಸುವ ಒಂದು ಅತ್ಯಮೂಲ್ಯ ಕಾರ್ಯವಾಗಿದೆ. ನಿಯಮಿತವಾಗಿ ರಕ್ತದಾನ ಮಾಡುವುದರಿಂದದಾನಿಗಳ ಆರೋಗ್ಯಕ್ಕೂ ಲಾಭಗಳಿವೆ ಎಂದರು.
ರಕ್ತದ ಗುಂಪು ತಪಾಸಣೆಯಲ್ಲಿ ಪಾಲ್ಗೊಂಡರು.