ಆದಿಶಕ್ತಿ ಮಹಾಸಂಸ್ಥಾನ ಮಠದ ಅಭಿವೃದ್ಧಿಗೆ ದೇಣಿಗೆ ನೀಡಿ

KannadaprabhaNewsNetwork |  
Published : Jan 19, 2026, 02:00 AM IST
ಫೋಟೋ: 18 ಹೆಚ್‌ಎಸ್‌ಕೆ 3ಹೊಸಕೋಟೆ ತಾಲೂಕಿನ ಶಿವನಾಪುರದ ಆದಿಶಕ್ತಿ ಮಹಾಸಂಸ್ಥಾನ ಮಠದ ಆವರಣದಲ್ಲಿ ನಡೆದ ಮಾಸಿಕ ಸಭೆಯಲ್ಲಿ ವಹ್ನಿಕುಲ ತಿಗಳ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ.ಸಿ.ಜಯರಾಜ್ ವಾರ್ಷಿಕ 2 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು. | Kannada Prabha

ಸಾರಾಂಶ

ಹೊಸಕೋಟೆ: ತಾಲೂಕಿನ ಶಿವನಾಪುರ ಗ್ರಾಮದಲ್ಲಿರುವ ವಹ್ನಿಕುಲ ತಿಗಳ ಸಮುದಾಯದ ಆದಿ ಶಕ್ತಿ ಮಹಾಸಂಸ್ಥಾನ ಮಠದ ಅಭಿವೃದ್ಧಿಗೆ ಸಮುದಾಯದ ಸ್ಥಿತಿವಂತರು ದೇಣಿಗೆ ನೀಡಬೇಕು ಎಂದು ವಹ್ನಿಕುಲ ತಿಗಳ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ.ಸಿ.ಜಯರಾಜ್ ತಿಳಿಸಿದರು

ಹೊಸಕೋಟೆ: ತಾಲೂಕಿನ ಶಿವನಾಪುರ ಗ್ರಾಮದಲ್ಲಿರುವ ವಹ್ನಿಕುಲ ತಿಗಳ ಸಮುದಾಯದ ಆದಿ ಶಕ್ತಿ ಮಹಾಸಂಸ್ಥಾನ ಮಠದ ಅಭಿವೃದ್ಧಿಗೆ ಸಮುದಾಯದ ಸ್ಥಿತಿವಂತರು ದೇಣಿಗೆ ನೀಡಬೇಕು ಎಂದು ವಹ್ನಿಕುಲ ತಿಗಳ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ.ಸಿ.ಜಯರಾಜ್ ತಿಳಿಸಿದರು.

ಮಠದ ಆವರಣದಲ್ಲಿ ಮಠದ ಅಭಿವೃದ್ದಿ ಸಮಿತಿ ಹಾಗೂ ಟ್ರಸ್ಟಿಗಳ ಜಂಟಿ ಸಭೆಯಲ್ಲಿ ಮಾತನಾಡಿದ ಅವರು, ಶ್ರೀ ಪ್ರಣವಾನಂದಪುರಿ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಮಠದ ಅಭಿವೃದ್ಧಿ ಆಗಬೇಕಿದೆ. ಮಠದಲ್ಲಿ ಸಮುದಾಯ ಭವನ, ವಿದ್ಯಾರ್ಥಿ ನಿಲಯ, ಗೋಶಾಲೆ ನಿರ್ಮಾಣ ಮಾಡಲಾಗಿದ್ದು ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಲಾಗುತ್ತಿದೆ. ಆದರೆ ಮಠ ಆರ್ಥಿಕವಾಗಿ ಹಿಂದುಳಿದಿದ್ದು ಅಭಿವೃದ್ಧಿಗೆ ಸಮುದಾಯದ ಮುಖಂಡರು ದೇಣಿಗೆ ಕೊಟ್ಟು ಸಹಕರಿಸಬೇಕಿದೆ. ಆ ನಿಟ್ಟಿನಲ್ಲಿ ನಾನು ಪ್ರತಿ ವರ್ಷ ೨ ಲಕ್ಷ ರು. ದೇಣಿಗೆ ನೀಡುತ್ತೇನೆ. ಸಮುದಾಯದ ಸ್ಥಿತಿವಂತರು, ಉದ್ಯಮಿಗಳು ದೇಣಿಗೆ ಕೊಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಮುಖಂಡರಾದ ಜಿ.ರಾಜಣ್ಣ 1 ಲಕ್ಷ, ದೇವನಹಳ್ಳಿ ವಿಜಯ್ ಕುಮಾರ್ 1 ಲಕ್ಷ, ನಾಗವಾರಪಾಳ್ಯ ಶಿವರಾಜ್ 60 ಸಾವಿರ, ಜಂಗಮಕೋಟೆ ಧರ್ಮರಾಯಸ್ವಾಮಿ ಟ್ರಸ್ಟ್ ವತಿಯಿಂದ 50 ಸಾವಿರ ದೇಣಿಗೆ ವಾರ್ಷಿಕವಾಗಿ ನೀಡುವುದಾಗಿ ಘೋಷಿಸಿದರು.

ಆದಿಶಕ್ತಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ.ಪ್ರಣವಾನಂದಪುರಿ ಸ್ವಾಮೀಜಿ, ಮಠದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಪ್ಪಾರಹಳ್ಳಿ ಮುನಿಯಪ್ಪ ಸೇರಿದಂತೆ ಮಠದ ಸಮಿತಿ ಸದಸ್ಯರು ಹಾಜರಿದ್ದರು.

ಫೋಟೋ: 18 ಹೆಚ್‌ಎಸ್‌ಕೆ 3

ಹೊಸಕೋಟೆ ತಾಲೂಕಿನ ಶಿವನಾಪುರದ ಆದಿಶಕ್ತಿ ಮಹಾಸಂಸ್ಥಾನ ಮಠದ ಆವರಣದಲ್ಲಿ ನಡೆದ ಮಾಸಿಕ ಸಭೆಯಲ್ಲಿ ವಹ್ನಿಕುಲ ತಿಗಳ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ. ಜಯರಾಜ್ ವಾರ್ಷಿಕ 2 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೆಹಲಿ ಭೇಟಿ ವೇಳೆ ಉಪಮುಖ್ಯಮಂತ್ರಿ ನಿಗೂಢ ಹೇಳಿಕೆ
ಹುಣಸೂರಿನಲ್ಲಿ ₹10 ಕೋಟಿ ಚಿನ್ನ ದೋಚಿದ್ದವರು ಬಿಹಾರದಲ್ಲಿ ಬಲೆಗೆ