ಕನ್ನಡಪ್ರಭ ವಾರ್ತೆ ಡಂಬಳ
ವೆಂಕಾಟಾಪುರ ಗ್ರಾಮದ ಯುವಕರು ವಿಶ್ವ ರಕ್ತದಾನಿಗಳ ದಿನ ರಕ್ತದಾನ ಮಾಡುವ ಮೂಲಕ ಹಲವಾರು ಜೀವಗಳನ್ನು ಉಳಿಸಲು ಸಹಕಾರಿಯಾಗುತ್ತಿರುವುದು ಪ್ರಶಂಸನೀಯವಾದದ್ದು ಎಂದು ಸಂಕಲ್ಪ ರೂರಲ್ ಡೆವಲಪಮೆಂಟ್ ಸಂಸ್ಥೆಯ ಸಿಇಒ ಸಿಕಂದರ ಮೀರಾನಾಯಕ ಹೇಳಿದರು.ಡಂಬಳ ಹೋಬಳಿಯ ವೆಂಕಟಾಪುರ ಗ್ರಾಮದಲ್ಲಿ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಅನ್ನದಾನೀಶ್ವರ ಮಠದ ಆವರಣದಲ್ಲಿ ಎಸ್‍ಬಿಐ ಫೌಂಡೇಶನ್ ಮತ್ತು ಸಂಕಲ್ಪ ರೂರಲ್ ಡೆವಲಪಮೆಂಟ್ ಸೊಸೈಟಿ ಸಹಯೋಗದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಾನವ ಆರೋಗ್ಯದಿಂದ ಇದ್ದಾಗ ಮಾತ್ರ ಸಾಧಿಸಬಲ್ಲ. ಆದರೆ, ಇಂದಿನ ಬದುಕಿನಲ್ಲಿ ಆರೋಗ್ಯದತ್ತ ಗಮನಕೊಡುವುದನ್ನೇ ಮರೆಯುತ್ತಿದ್ದಾನೆ. ಇದರ ಪರಿಣಾಮವಾಗಿ ಹಲವಾರು ಕಾಯಿಲೆಗಳು ಕಾಡತೊಡಗಿವೆ. ಇದರಿಂದ ಹೋರಬರಬೇಕಾದರೆ ಆರೋಗ್ಯದತ್ತ ಹೆಚ್ಚು ಗಮನ ಕೊಡಬೇಕಾಗಿದೆ ಎಂದರು.ಅಪಘಾತ, ಶಸ್ತ್ರಚಿಕಿತ್ಸೆಯಂತಹ ತುರ್ತ ಸಂದರ್ಭದಲ್ಲಿ ರಕ್ತ ಅನಿವಾರ್ಯವಾಗಿರುತ್ತದೆ. ಈ ವೇಳೆ ಆರೋಗ್ಯವಂತ ಮನುಷ್ಯನಿಂದ ರಕ್ತವನ್ನು ಪಡೆಯುವ ಮೂಲಕ ಆತನ ಜೀವನವನ್ನು ಕಾಪಾಡಬಹುದು. ಆ ಹಿನ್ನೆಲೆ ಯುವಕರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಹೇಳಿದರು.
ವೈದ್ಯರಾದ ಡಾ. ದತ್ತಾತ್ರೇಯ ವೈಕುಂಠ ಮಾತನಾಡಿ, ಭಾರತದಲ್ಲಿ ಪ್ರತಿ 2 ಸೆಕೆಂಡಿಗೆ ಒಬ್ಬರಿಗೆ ರಕ್ತದ ಅಗತ್ಯ ಉಂಟಾಗುತ್ತದೆ. ಪ್ರತಿ ವರ್ಷ ಸರಾಸರಿ 5 ಕೋಟಿ ಯೂನಿಟ್‍ಗೂ ಹೆಚ್ಚು ರಕ್ತ ಬೇಕಾಗುತ್ತದೆ. ಆದರೆ, ಸಂಗ್ರಹವಾಗುವುದು 2.5 ಕೋಟಿ ಯೂನಿಟ್ ಮಾತ್ರವಾಗಿದೆ. ಹೀಗಾಗಿ ಯುವಕರು ರಕ್ತದಾನ ಮಾಡಲು ಮುಂದಾಗಬೇಕಾಗಿದೆ ಎಂದು ಹೇಳಿದರು.ಡಂಬಳ ಹೋಬಳಿಯ ಪುಟ್ಟಗ್ರಾಮವಾದ ವೆಂಕಟಾಪುರದಲ್ಲಿ 25ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡುವ ಮೂಲಕ ವಿಶ್ವರಕ್ತದಾನಿಗಳ ದಿನ ಅರ್ಥಪೂರ್ಣವಾಗಿ ಆಚರಿಸಿದರು. ಕಾರ್ಯಕ್ರಮದಲ್ಲಿ ಬಸವರಾಜ ಹಳ್ಳಿ, ಹಣಮಂತಪ್ಪ ಮರಿಗೌಡ್ರ, ಕುಬೇರಪ್ಪ ಬಿಸನಳ್ಳಿ, ಬಸವರಾಜ ತುಪ್ಪದ, ಭೀಮಪ್ಪ ಸಂಶಿ, ಬಸವರಾಜ ಎಸ್., ಮಂಜುನಾಥ ಕೆ., ವಿರೂಪಾಕ್ಷಪ್ಪ, ಕಲ್ಲಪ್ಪ ಎಸ್.ಕೆ., ಹುಸೇನಸಾಬ ಎನ್., ಗೋಣೆಪ್ಪ ಟಿ., ಸಂಗಪ್ಪ ಎ., ಮುತ್ತಪ್ಪ ಬಿ., ಶಿವಕುಮಾರ, ಪಾರಪ್ಪ ಕೆ., ವಿರೂಪಾಕ್ಷಗೌಡ, ಸರಣಪ್ಪ, ಕುಬೇರಪ್ಪ, ಶಿಕಂದರ, ಮುತ್ತಪ್ಪ ಆರ್, ಮಂಜುನಾಥ, ಶಿವಾನಂದ, ಸಿದ್ಧಪ್ಪ, ಶರಣಪ್ಪ, ವಿ.ಎಸ್. ಅರಕಸಾಲಿ, ಬಸವರಾಜ, ಮಂಜಪ್ಪ ಸೇರಿದಂತೆ ಯುವಕರು ಗ್ರಾಮದ ಹಿರಿಯರು ಇದ್ದರು.