ಕನ್ನಡಪ್ರಭ ವಾರ್ತೆ ಇಳಕಲ್ಲ
ಇಳಕಲ್ಲ ನಗರದ ಬಸ್ ನಿಲ್ದಾಣದಲ್ಲಿ ರಿಯಾಜ್ ಮಕಾನದಾರ ಕುಟುಂಬದವರು ಪ್ರಾರಂಭಿಸಿದ ಪ್ರಯಾಣಿಕರಿಗಾಗಿ ತಣ್ಣನೆಯ ಉಚಿತ ಕುಡಿಯುವ ನೀರಿನ ಅರವಟ್ಟಿಗೆ ಉದ್ಘಾಟಿಸಿ ಮಾತನಾಡಿ, ಇಂತಹ ಉರಿ ಬಿಸಲಿನ ತಾಪದಲ್ಲಿ ಪ್ರಯಾಣಿಕರು ಕುಡಿಯುವ ನೀರಿಗಾಗಿ ತೊಂದರೆ ಪಡುತ್ತಿರುತ್ತಾರೆ. ಅವರ ತೊಂದರೆ ಕಂಡು ರಿಯಾಜ್ ತಣ್ಣನೆಯ ಕುಡಿಯುವ ನೀರಿನ ಅರವಟ್ಟಿಗೆ ಪ್ರಾರಂಭಿಸಿರುವುದು ಪುಣ್ಯದ ಕೆಲಸ. ೧೦ ವರ್ಷಗಳಿಂದ ಈ ತಂಪಾದ ಕುಡಿಯವ ನೀರಿನ ವ್ಯವಸ್ಥೆ ಮಾಡುತ್ತಿರುವುದು ಸಂತಸದ ವಿಷಯ ಎಂದು ತಿಳಿಸಿದರು. ಸಮಾರಂಭದಲ್ಲಿ ಹಿರಿಯರಾದ ಶರಣಪ್ಪ ಆಮದಿಹಾಳ, ಅಂಬು ಚಲವಾದಿ, ಅಶೋಕ ಚಲವಾದಿ, ಯಲ್ಲಪ್ಪ ರಾಜಾಪೂರ, ಅಹ್ಮದ ಬಾಗವಾನ, ಮಹಮ್ಮದ ಗಡೇದ, ಮಹಮ್ಮದ ಮಕಾಂದಾರ ಇತರರು ಉಪಸ್ಥಿತರಿದ್ದರು.