ಅಮ್ಮತ್ತಿ ಸರ್ಕಾರಿ ಶಾಲೆಗೆ ಕಲಿಕೋಪಕರಣ ಕೊಡುಗೆ

KannadaprabhaNewsNetwork |  
Published : Jun 23, 2024, 02:07 AM ISTUpdated : Jun 23, 2024, 02:08 AM IST
ಅಮ್ಮತ್ತಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಬೆಂಗಳೂರಿನ ಜಾಗೃತಿ ಟ್ರಸ್ಟ್ ಹಾಗೂ ಸಿಸ್ಕೋ ಸಂಸ್ಥೆಯ ಸ್ವಯಂ ಸೇವಕರುಗಳೊಂದಿಗೆ | Kannada Prabha

ಸಾರಾಂಶ

ಲೇಖನಿ, ಕೊಡೆ, ಕಲಿಕೋಪಕರಣ ಸೇರಿದಂತೆಆಹಾರ ಕಿಟ್‌ ವಿತರಿಸಲಾಯಿತು. ಶಾಲಾವರಣದಲ್ಲಿ ಗಿಡಗಳನ್ನು ನೆಟ್ಟು ಸ್ವಚ್ಛತೆಯನ್ನು ಕೈಗೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಅಮತ್ತಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಜಾಗೃತಿ ಟ್ರಸ್ಟ್ ಹಾಗೂ ಸಿಸ್ಕೋ ಸಂಸ್ಥೆಯ ವತಿಯಿಂದ ಲೇಖನಿ, ಕೊಡೆ, ಕಲಿಕೋಪಕರಣಗಳು, ಸೇರಿದಂತೆ ಆಹಾರದ ಕಿಟ್ಟ್ ಗಳನ್ನು ಇತ್ತೀಚೆಚಗೆ ವಿತರಿಸಲಾಯಿತು. ನಂತರ ಶಾಲಾ ಅವರಣದಲ್ಲಿ ಗಿಡಗಳನ್ನು ನೆಟ್ಟು ಸ್ವಚ್ಚತೆಯನ್ನು ಕೈಗೊಳ್ಳಲಾಯಿತು.

ಜಾಗೃತಿ ಮತ್ತು ಸಿಸ್ಕೋ ಸಂಸ್ಥೆಯ 125 ಸ್ವಯಂಸೇವಕರನ್ನೊಳಗೊಂಡ ದಾನಿಗಳ ತಂಡ ಶಾಲೆಗೆ ಆಗಮಿಸಿ ಎರಡು ದಿನಗಳ ಕಾಲ ತಂಗಿ ವಿದ್ಯಾರ್ಥಿಗಳ ಎಲ್ಲಾ ಪಠ್ಯಪುಸ್ತಕಗಳು ಹಾಗೂ ನೋಟ್ ಪುಸ್ತಕಗಳಿಗೆ ಬೈಂಡ್ ಹಾಕಿ ವಿದ್ಯಾರ್ಥಿಗಳಿಗೆ ನೀಡಲಾಯಿತಲ್ಲದೆ ತರಗತಿಯ ಕೋಣೆಗಳಿಗೆ ಉಪಯುಕ್ತವಾದ ಕಲಿಕೋಪಕರಣಗಳ ಚಾರ್ಟ್ ಗಳನ್ನು ತಯಾರಿಸಿ ನೀಡಿದರು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಕೊಡೆ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಿದರು .

ನಂತರ ದಿನದಲ್ಲಿ ಶಾಲೆಯ ಮುಂದಿರುವ ಹೂ ತೋಟವನ್ನು ಸ್ವಚ್ಛಗೊಳಿಸಿ ನೂರಕ್ಕೂ ಹೆಚ್ಚು ಹೂವಿನ ಗಿಡಗಳನ್ನು ನೆಟ್ಟು ಶಾಲಾ ಅವರಣದ ಸ್ವಚ್ಚತೆಯನ್ನು ಮಾಡಲಾಯಿತು. ಹಾಗೂ ಶಾಲೆಯ ವಿದ್ಯಾರ್ಥಿಗಳಿಗೆ ಗಣಿತ ಕಲಿಕೆಯನ್ನು ಸುಲಭವಾಗಿ ಅಭ್ಯಾಸಿಸಲು ಅಬಾಕಸ್ ಕಲಿಕೋಪಕರಣವನ್ನು ನೀಡಿದರು. ನಂತರ ವಿದ್ಯಾರ್ಥಿಗಳ ಮನೆಗೆ ತೆರಳಿ ಪೌಷ್ಟಿಕ ಆಹಾರದ ಕಿಟ್ಟ್ ಮತ್ತು ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ಗಳನ್ನು ವಿತರಿಸಿ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ನೀಡಿದರು‌

ಕಾರ್ಯಕ್ರಮದ ಮುಖ್ಯ ರೂವಾರಿ, ಸ್ಥಳೀಯರು ಆದ ಸಿಸ್ಕೋ ಸಂಸ್ಥೆಯ ಮಚ್ಚಾರಂಡ ಅಯ್ಯಪ್ಪ, ಸಂಪತ್ ಬಾನಂಡ, ಕುಟ್ಟಂದಿ, ಪವನ್ ಮತ್ತು ಪ್ರಶಾಂತ್, ಜಾಗೃತಿ ಟ್ರಸ್ಟ್ ನ ಆಡಳಿತ ಅಧಿಕಾರಿ ಕಣ್ಣನ್ ಖಜಾಂಚಿಗಳಾದ ಕೊಂಡಿಂಜಮ್ಮಂಡ ಶರಣು, ನೋಯೆಲ್, ಜಾಗೃತಿ ಟ್ರಸ್ಟ್ ನ ಸಂಸ್ಥಾಪಕರು ಮತ್ತು ವ್ಯವಸ್ಥಾಪಕರಾದ ರೇಣು ಅಪ್ಪಚ್ಚು ಹಾಗೂ ಶಾಲೆಯ ಮುಖ್ಯ ಶಿಕ್ಷಕಿಯವರಾದ ಹೆಚ್.ಎಸ್. ಸೋಮಕ್ಕ ಶಾಲಾ ಶಿಕ್ಷಕ ಅಶ್ವಥ್ ಸೇರಿದಂತೆ ಶಾಲಾ ಶಿಕ್ಷಕ ವೃಂದ , ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ವಿದ್ಯಾರ್ಥಿಗಳು ಇದ್ದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು