ರೋಟರಿ ವುಡ್ಸ್‌ನಿಂದ ಬಾಲಮಂದಿರದ ಮಕ್ಕಳಿಗೆ ಜರ್ಕೀನ್‌ ಕೊಡುಗೆ

KannadaprabhaNewsNetwork | Published : Jul 15, 2024 1:49 AM

ಸಾರಾಂಶ

ಸಮಾರಂಭದಲ್ಲಿ ರೋಟರಿ ವುಡ್ಸ್ ನಿರ್ದೇಶಕ ಬಾಲಸುಬ್ರಹ್ಮಣ್ಯ ಅವರು ಕೊಡುಗೆಯಾಗಿ ನೀಡಿದ ಜರ್ಕೀನ್‌ಗಳನ್ನು ರೋಟರಿ ವುಡ್ಸ್ ಅಧ್ಯಕ್ಷ ಹರೀಶ್ ಕಿಗ್ಗಾಲು, ಕಾರ್ಯದರ್ಶಿ ಕಿರಣ್ ಕುಂದರ್ ಸಮ್ಮುಖದಲ್ಲಿ ಕೇಂದ್ರದ ಆಪ್ತಸಮಾಲೋಚಕ ನಾಗಭೂಷಣ್, ಕಚೇರಿ ಸಿಬ್ಬಂದಿ ಎಚ್.ಸೂರಜ್ ಅವರಿಗೆ ಹಸ್ತಾಂತರಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿಯ ಸರ್ಕಾರಿ ಬಾಲಕರ ಬಾಲಮಂದಿರದ 27 ಮಕ್ಕಳಿಗೆ ರೋಟರಿ ವುಡ್ಸ್‌ನಿಂದ ಬೆಚ್ಚನೆಯ ಜರ್ಕೀನ್ ವಿತರಿಸಲಾಯಿತು.ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ರೋಟರಿ ವುಡ್ಸ್ ನಿರ್ದೇಶಕ ಬಾಲಸುಬ್ರಹ್ಮಣ್ಯ ಅವರು ಕೊಡುಗೆಯಾಗಿ ನೀಡಿದ ಜರ್ಕೀನ್‌ಗಳನ್ನು ರೋಟರಿ ವುಡ್ಸ್ ಅಧ್ಯಕ್ಷ ಹರೀಶ್ ಕಿಗ್ಗಾಲು, ಕಾರ್ಯದರ್ಶಿ ಕಿರಣ್ ಕುಂದರ್ ಸಮ್ಮುಖದಲ್ಲಿ ಕೇಂದ್ರದ ಆಪ್ತಸಮಾಲೋಚಕ ನಾಗಭೂಷಣ್, ಕಚೇರಿ ಸಿಬ್ಬಂದಿ ಎಚ್.ಸೂರಜ್ ಅವರಿಗೆ ಹಸ್ತಾಂತರಸಲಾಯಿತು.

ಈ ಸಂದರ್ಭ ಮಾತನಾಡಿದ ಹರೀಶ್ ಕಿಗ್ಗಾಲು, ರೋಟರಿ ಸಂಸ್ಥೆಯು ಈ ವರ್ಷದಲ್ಲಿ ಅನೇಕ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಮಳೆಗಾಲದಲ್ಲಿ ಹೆಚ್ಚುತ್ತಿರುವ ಚಳಿಯನ್ನು ಗಮನಿಸಿ ರೋಟರಿ ವುಡ್ಸ್ ಮೂಲಕ ಉದ್ಯಮಿ ಬಾಲಸುಬ್ರಹ್ಮಣ್ಯ ನೀಡಿದ ಜರ್ಕೀನ್‌ಗಳನ್ನು ಮಕ್ಕಳಿಗೆ ನೀಡಿದ್ದೇವೆ. ಶಾಲೆಗೆ ಮಳೆಯಲ್ಲಿ ತೆರಳುವ ಸಂದರ್ಭ ಈ ಬೆಚ್ಚನೆಯ ಧಿರಿಸು ಮಕ್ಕಳನ್ನು ಬೆಚ್ಚಗಿಡಲು ನೆರವಾಗಲಿದೆ ಎಂದರು.ರೋಟರಿ ವುಡ್ಸ್ ಕೊಡುಗೆಯನ್ನು ನಾಗಭೂಷಣ್ ಶ್ಲಾಘಿಸಿದರು. ರೋಟರಿ ವುಡ್ಸ್ ನಿರ್ದೇಶಕ ಧನಂಜಯ ಶಾಸ್ತ್ರೀ, ಅಜ್ಜೇಟಿರ ಲೋಕೇಶ್, ರವಿಕುಮಾರ್, ರವಿ ಪಿ. ಜಹೀರ್ ಅಹ್ಮದ್, ಭಗತ್ ರಾಜ್, ರವಿಕುಮಾರ್, ಕಶ್ಯಪ್, ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಅನಿಲ್ ಎಚ್.ಟಿ. ಸೇರಿದಂತೆ ರೋಟರಿ ಪ್ರಮುಖರಿದ್ದರು. ರೋಟರಿ ವುಡ್ಸ್ ವತಿಯಿಂದ ಮಕ್ಕಳಿಗೆ ಭೋಜನ ನೀಡಲಾಯಿತು. ಹಾಗೆಯೇ ರವಿ ಪಿ. ಹಾಗೂ ರವಿಕುಯಮಾರ್ ಹಾಡುಗಳನ್ನು ಹಾಡಿ ಮಕ್ಕಳನ್ನು ರಂಜಿಸಿದರು.

----ಗಮನ ಸೆಳೆದ ಜಾದೂ ಪ್ರದರ್ಶನ!

ರೋಟರಿ ವುಡ್ಸ್ ನಿರ್ದೇಶಕ, ಹೆಸರಾಂತ ಜಾದೂಗಾರ ವಿಕ್ರಂ ಶೆಟ್ಟಿ, ಕೇಂದ್ರದಲ್ಲಿ ವಿಭಿನ್ನ ರೀತಿಯ ಜಾದೂ ಮೂಲಕ ಮಕ್ಕಳ ಸಂಭ್ರಮಕ್ಕೆ ಕಾರಣರಾದರು. ಡೆಂಘಿ ಬಾರದಂತೆ ಸೊಳ್ಳೆಗಳನ್ನು ಹೇಗೆಲ್ಲಾ ಕೈ ಚಪ್ರಾಳೆ ಮೂಲಕ ಹೊಡೆಯಬಹುದು, ಹಗ್ಗದ ಜಾದೂ, ರಿಬ್ಬನ್ ಜಾದೂ ಸೇರಿದಂತೆ 15 ಮ್ಯಾಜಿಕ್‌ಗಳನ್ನು ವಿಕ್ರಂ ಶೆಟ್ಟಿ ಪ್ರದರ್ಶಿಸಿದರು. ಇದೇ ಸಂದರ್ಭ ಮಕ್ಕಳಿಗೆ ಸರಳ ಜಾದೂ ವಿಧಾನಗಳನ್ನು ವಿಕ್ರಂ ಪ್ರಾಯೋಗಿಕವಾಗಿ ಕಲಿಸಿ ಕೊಟ್ಟು ಮಕ್ಕಳ ಸಂತಸಕ್ಕೆ ಕಾರಣರಾದರು.

Share this article